ಏಪ್ರಿಲ್‌ನಲ್ಲಿ ಶಿಮ್ಲಾದಲ್ಲಿ ಆಲಿಯಾ ರಣಬೀರ್ ಮದುವೆ? ವೀಡಿಯೊಗ್ರಾಫರ್‌ ಸಂಬಂಧಿಯಿಂದ ವಿಷಯ ಲೀಕ್‌

First Published | Mar 17, 2022, 10:39 AM IST

ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor)ಮದುವೆ ಬಾಲಿವುಡ್‌ನ ಬಹು ನಿರೀಕ್ಷಿತ ಕಾರ್ಯಕ್ರಮವಾಗಿದೆ. ಲವ್ ಬರ್ಡ್ಸ್ ಮದುವೆಯ ವದಂತಿಗಳು ಇತ್ತೀಚಿನ ವರ್ಷಗಳಲ್ಲಿ ಸಖತ್‌  ಸುದ್ದಿ ಮಾಡುತ್ತಿವೆ. ಈಗ ಅವರ ಮದುವೆ ಶಿಮ್ಲಾದಲ್ಲಿ ಏಪ್ರಿಲ್‌ನಲ್ಲಿ ನೆಡೆಯಲಿದೆ ಎಂದು ಸುದ್ದಿ ಹೊರಬಂದಿದೆ. 

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಈ ವರ್ಷದ ಅಕ್ಟೋಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು ಅನೇಕ ವರದಿಗಳು ಸೂಚಿಸುತ್ತವೆ ಮತ್ತು ಕೆಲವರು ಡಿಸೆಂಬರ್‌ನಲ್ಲಿ ಮದುವೆಯಾಗುತ್ತಾರೆ ಎಂದು ಹೇಳುತ್ತಾರೆ.ರಣಬೀರ್ ಕಳೆದ ವರ್ಷ ತಮ್ಮ ಹುಟ್ಟುಹಬ್ಬದಂದು ಟ್ವಿಟರ್‌ನಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು.
 

ದಂಪತಿಗಳು ತಮ್ಮಮದುವೆಯ ವದಂತಿಗಳನ್ನು ಒಪ್ಪಿಕೊಂಡಿಲ್ಲ ಹಾಗೂ ತಿರಸ್ಕರಿಸಿಯೂ ಇಲ್ಲ. ಈ ಜೋಡಿ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ ಅವರು ಡೇಟಿಂಗ್ ಆರಂಭಿಸಿದಾಗಿನಿಂದ ಅವರ ಅಭಿಮಾನಿಗಳು ಇವರ ಮದುವೆಗೆ ಕಾಯುತ್ತಿದ್ದಾರೆ. 

Tap to resize

ಈಗ, ರಣಬೀರ್ ಆಲಿಯಾ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ರಣಬೀರ್ ಕಪೂರ್  ಆಲಿಯಾ ಭಟ್ ಅವರ ಅಭಿಮಾನಿ ಪ್ರಕಾರ, ಈ ಬೆಲೆಬ್ರೆಟಿ ಕಪಲ್‌ ಮುಂದಿನ ತಿಂಗಳು ಶಿಮ್ಲಾದ 5-ಸ್ಟಾರ್ ರೆಸಾರ್ಟ್‌ನಲ್ಲಿ ವಿವಾಹವಾಗಲಿದ್ದಾರಂತೆ. 

ಇತ್ತೀಚೆಗೆ, ಆಲಿಯಾ ಮತ್ತು ರಣಬೀರ್ ಅವರ ವಿವಾಹದ ಬಗ್ಗೆ ಮಾಹಿತಿಯ ಕೆಲವು ವಿವರಗಳನ್ನು ರೆಡ್ಡಿಟ್‌ನಲ್ಲಿ ಯೂಸರ್ಸ್‌ ಬಹಿರಂಗಪಡಿಸಿದ್ದಾರೆ. ಈ ವಿವಾಹದ ಫೋಟೋಗ್ರಾಫಿ ಮಾಡಲು ಅವರ ಚಿಕ್ಕಪ್ಪನನ್ನು ನೇಮಿಸಲಾಗಿದೆ ಎಂದು ರೆಡ್ಡಿಟ್‌ ಬಳಕೆದಾರೊಬ್ಬರು ಹೇಳಿಕೊಂಡಿದ್ದಾರೆ.

ಮಾಹಿತಿಗಳು ಸರಿಯಾಗಿದ್ದರೆ, ರಣಬೀರ್ ಮತ್ತು ಆಲಿಯಾ ತಮ್ಮ ಮದುವೆಯ ಆಚರಣೆಯನ್ನು ಏಪ್ರಿಲ್ 22-24 ಎಂದು ನಿಗದಿಪಡಿಸಿದ್ದಾರೆ. ರಣಬೀರ್ ಮತ್ತು ಆಲಿಯಾ ತಮ್ಮ ಮದುವೆಗೆ ಐಷಾರಾಮಿ ರೆಸಾರ್ಟ್‌ನಲ್ಲಿ ಶಿಮ್ಲಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅತಿಥಿಗಳಿಗಾಗಿ ಅವರು ಕೊಠಡಿಗಳನ್ನು ಸಹ ಕಾಯ್ದಿರಿಸಿದ್ದರು ಎಂದು ಹೇಳಲಾಗುತ್ತದೆ ಎಂಬ ವಿಷಯವನ್ನು ಲೀಕ್‌ ಮಾಡಿದ್ದಾರೆ.
 

ರೆಡ್ಡಿಟ್ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ ಬಳಕೆದಾರರು 'ರಣಬೀರ್ ಮತ್ತು ಆಲಿಯಾ ಆಗಸ್ಟ್ 8 ರಂದು ಮದುವೆಯಾಗುತ್ತಾರೆ ಎಂದು ನಾನು ಭಾವಿಸಿದೆವು. ಆದರೆ ಇದು ನಿಜವಾಗಿದ್ದರೆ. ಅವರಿಗೆ ಒಳ್ಳೆಯದು' ಎಂದಿದ್ದಾರೆ.
 

'ಇತ್ತೀಚಿಗೆ ಇಬ್ಬರೂ ಅತ್ಯಂತ ಸಂತೋಷದಿಂದ ಕಾಣುತ್ತಿದ್ದಾರೆಂದು ನಾನು ಗಮನಿಸಿದ್ದೇನೆ. ಅವರಿಗೆ ತುಂಬಾ ಒಳ್ಳೆಯದು! ಕಳೆದ ಕೆಲವು ವರ್ಷಗಳಿಂದ ಅಂತ್ಯವಿಲ್ಲದ ಊಹಾಪೋಹಗಳ ನಂತರ ಇದು ನಿಜವಾಗಿದೆ ಎಂದು ಭಾವಿಸುತ್ತೇವೆ' ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.

'ಶಿಮ್ಲಾದ ಒಬೆರಾಯ್ ಹೋಟೆಲ್ ವೈಲ್ಡ್‌ಫ್ಲವರ್ ಅನ್ನು ಏಪ್ರಿಲ್ 21 ಮತ್ತು 22 ರಂದು ಬುಕ್‌  ಮಾಡಲಾಗಿದೆ'  ಎಂದು ಬಳಕೆದಾರರು ಬರೆದಿದ್ದಾರೆ. ದಿನಾಂಕಗಳನ್ನು ಪರಿಶೀಲಿಸಲು ರೆಡ್ಡಿಟ್ ಬಳಕೆದಾರರು ಹೋಟೆಲ್‌ಗೆ ಕರೆ ಸಹ ಮಾಡಿದರು ಎಂದಿದ್ದಾರೆ.

Latest Videos

click me!