ರೇಖಾ ಜೊತೆಯ ಅಮಿತಾಭ್ ಬಚ್ಚನ್ ಸಂಬಂಧದ ರಹಸ್ಯ ಬಯಲಾಗಿದ್ದು ಹೀಗೆ

First Published | Oct 9, 2022, 3:43 PM IST

ಅಮಿತಾಬ್ ಬಚ್ಚನ್ (Amitabh Bachchan) ಮತ್ತು ರೇಖಾ (Rekha) ಇದುವರೆಗೂ  ಹೆಚ್ಚು ಚರ್ಚೆಯಾಗಿರುವ ಬಾಲಿವುಡ್‌ನ ಜೋಡಿಗಳಲ್ಲಿ ಒಬ್ಬರು. ಆಗಾಗ ಈ ಇಬ್ಬರ ಸಂಬಂಧದ ರೊಮ್ಯಾಂಟಿಕ್ ಕಥೆಗಳು ಹರಿದಾಡುತ್ತಲೇ ಇರುತ್ತವೆ. ಇವರ ರೇಖಾ ಜೊತೆಗಿನ ಸಂಬಂಧ ಹೇಗೆ ಜಗತ್ತಿಗೆ ತಿಳಿಯಿತು ಎಂಬುದು ಇಲ್ಲಿದೆ.

ಅಮಿತಾಭ್ ಮತ್ತು ರೇಖಾ ಪ್ರೀತಿ 'ದೋ ಅಂಜಾನೆ'  ಚಿತ್ರದ ಸಮಯದಲ್ಲಿ ಪ್ರಾರಂಭವಾಯಿತು ಮತ್ತು ವೇಗವನ್ನು ಪಡೆಯಲಾರಂಭಿಸಿತು.ಮೂಲಗಳ ಪ್ರಕಾರ ಅಮಿತಾಬ್ ರೇಖಾಳನ್ನು ಹುಚ್ಚನಂತೆ ಪ್ರೀತಿಸತೊಡಗಿದರು.

ಅದೇ ಸಮಯದಲ್ಲಿ ರೇಖಾ  ಸಹ ಒಂದು ದಿನ ಅಮಿತಾಭ್‌ರನ್ನು ಭೇಟಿಯಾಗದಿದ್ದರೆ, ಚಡಪಡಿಸುತ್ತಿದ್ದರು.ಇಷ್ಟು ಆತ್ಮೀಯರಾಗಿದ್ದರೂ ಇಬ್ಬರ ಅಫೇರ್ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೂ ಸಂಬಂಧದ ಸುದ್ದಿ  ಬೆಳೆಕಿಗೆ ಬಂತು. ಇದಕ್ಕೆ ದೊಡ್ಡ ಕಾರಣ ಅಮಿತಾಬ್ ಒಬ್ಬ ವ್ಯಕ್ತಿಯನ್ನು ಥಳಿಸಿರುವುದು.
 

Tap to resize

ವರದಿಗಳ ಪ್ರಕಾರ, 'ಗಂಗಾ ಕಿ ಸೌಗಂಧ್' ಚಿತ್ರದ ಶೂಟಿಂಗ್‌ನಲ್ಲಿ ಅಮಿತಾಬ್ ಮತ್ತು ರೇಖಾ ಅವರ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ರಾಜಸ್ಥಾನದಲ್ಲಿ ನಡೆಯುತ್ತಿತ್ತು. ಶೂಟಿಂಗ್ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು

ಅದೇ ಸಮಯದಲ್ಲಿ, ಅದೇ ಗುಂಪಿನಲ್ಲಿ, ಒಬ್ಬ ವ್ಯಕ್ತಿ ರೇಖಾರನ್ನು ನಿಂದಿಸಿದನು, ಅವನು ರೇಖಾರಿಗೆ ಬಹಳ ಸಮಯದಿಂದ ಕಿರುಕುಳ ನೀಡುತ್ತಿದ್ದನು. ಹಲವು ಬಾರಿ ಹೇಳಿದರೂ ಒಪ್ಪದಿದ್ದಾಗ ಅಮಿತಾಭ್‌ ಆ ವ್ಯಕ್ತಿಗೆ ಚೆನ್ನಾಗಿ ಥಳಿಸಿದ್ದಾರೆ. 

ರೇಖಾ ಬಗ್ಗೆ ಅಮಿತಾಭ್‌ಗೆ ತುಂಬಾ ಪೊಸೆಸಿವ್‌ನೆಸ್‌ ಇದೆ ಮತ್ತು ಇಬ್ಬರ ನಡುವೆ ಪ್ರೀತಿ ಇದೆ ಎಂಬ ಮಾತುಗಳು ಶುರುವಾಗಿತ್ತು. ಈ ಘಟನೆಯ ನಂತರ ಈ ವದಂತಿಗೆ ರೆಕ್ಕೆಪುಕ್ಕ ಸಿಕ್ಕಿತು ಮತ್ತು ಇಂದಿಗೂ ಇಬ್ಬರ ಕಥೆಗಳು ಆಗಾಗ ಸುದ್ದಿಯಾಗುತ್ತವೆ.

ಇಷ್ಟೇ ಅಲ್ಲ ಇಬ್ಬರ ಜನ್ಮದಿನಗಳಿಗೆ ಕೇವಲ ಒಂದು ದಿನದ ವ್ಯತ್ಯಾಸ ಮಾತ್ರವಿರುವುದು. ಅಮಿತಾಭ್ ಬಚ್ಚನ್ ಅವರು ಅಕ್ಟೋಬರ್ 11 ರಂದು ಜನಿಸಿದರೆ,  ನಟಿ ರೇಖಾ ಅವರು ಅಕ್ಟೋಬರ್ 10 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. 

Latest Videos

click me!