ಶೋಲೆಯ ಗಬ್ಬರ್‌ಸಿಂಗ್‌ಗೆ ನಿಜ ಜೀವನದಲ್ಲಿ ರಕ್ತ ಕೊಟ್ಟು ಪ್ರಾಣ ಉಳಿಸಿದ್ದ ಅಮಿತಾಬ್ ಬಚ್ಚನ್
First Published | Jul 27, 2022, 5:24 PM ISTಕಿತ್ನೆ ಆದ್ಮಿ ಥೇ, ತೇರಾ ಕ್ಯಾ ಹೋಗಾ ಕಲಿಯಾ, ಸೋ ಜಾ ಬೇಟಾ ನಹೀ ತೋ ಗಬ್ಬರ್ ಆ ಜಾಯೇಗಾ ಮುಂತಾದ 'ಶೋಲೆ' (Sholay) ಚಿತ್ರದ ಡೈಲಾಗ್‌ಗಳು ಇಂದಿಗೂ ಜನಪ್ರಿಯ. ಅದೇ ಸಮಯದಲ್ಲಿ ಗಬ್ಬರ್ ಪಾತ್ರದಲ್ಲಿ ನಟಿಸಿದ್ದ ಅಮ್ಜದ್ ಖಾನ್ (Amjad Khan) ಕೂಡ ಈ ಪಾತ್ರದ ಮೂಲಕ ಜನರ ಮನಸ್ಸಿನಲ್ಲಿ ಅಮರರಾಗಿದ್ದಾರೆ. ಅಮ್ಜದ್ ಖಾನ್ ನಿಧನರಾಗಿ 30 ವರ್ಷ ಕಳೆದರೂ ಇಂದಿಗೂ ಗಬ್ಬರ್ ರೂಪದಲ್ಲಿ ಜನಮನದಲ್ಲಿ ಜೀವಂತವಾಗಿದ್ದಾರೆ. ಅವರು 27 ಜುಲೈ 1992 ರಂದು ಹೃದಯಾಘಾತದಿಂದ ನಿಧನರಾದರು. ನಿಜ ಜೀವನದಲ್ಲಿ ಅಮಿತಾಭ್ ಬಚ್ಚನ್ (Amita Bachchan) ಗಬ್ಬರ್ ಸಿಂಗ್ ಪ್ರಾಣ ಉಳಿಸಿದ್ದರು.