ನಟ ಅಥವಾ ನಟಿ ಬೆತ್ತಲಾಗೋದು ಬಾಲಿವುಡ್‌ಗೆ ಹೊಸ ವಿಷಯವೇನಲ್ಲ. ನಗ್ನತೆಯನ್ನೂ ಸುಂದರವಾಗಿ ತೋರಿಸಿ, ಅಲ್ಲಿಯೂ ಸೃಜನಶೀಲತೆ ಎಷ್ಟಿದೆ ಎಂಬುದನ್ನು ತೋರಿಸುತ್ತಾರೆ. ಕನ್ನಡದ ಚಿತ್ರ ದಂಡುಪಾಳ್ಯದಲ್ಲಿ ಪೂಜಾ ಗಾಂಧಿ ಬೆತ್ತಲಾಗಿದ್ದು ಗೊತ್ತು. ಅಷ್ಟೇ ಅಲ್ಲ ಇತ್ತೀಚಿನ ಚಿತ್ರ 'ಲಂಗರ್'ಗಾಗಿ ವಿಜಯ್ ದೇವರಕೊಂಡ ಕೂಡ ಬೆತ್ತಲಾಗಿದ್ದರು. ಅಷ್ಟೇ ಅಲ್ಲದೇ ಅನೇಕ ನಟ, ನಟಿಯರು ಚಿತ್ರಕ್ಕಾಗಿಯೋ, ಮ್ಯಾಗಜೀನ್ ಪೋಸ್ಟ್‌ಗಾಗಿಯೋ, ಮತ್ಯಾವುದೋ ಒಂದು ಕಾರಣಕ್ಕೆ ನಟಿ ಕಲ್ಕಿ ಕೊಚಿನ್ ಸೇರಿ ಅನೇಕರು ನಗ್ನರಾಗಿ ಫೋಸ್ ಕೊಟ್ಟಿದ್ದಾರೆ. ಅಂಥವರಲ್ಲಿ ಕೆಲವರು ಇವರು.