ಮಲಯಾಳಂ ಚಿತ್ರರಂಗದ ಸ್ಟಾರ್ ಜೋಡಿಗಳಾದ ನಜ್ರೀಯಾ ನಜೀಮ್ ಮತ್ತು ಫಹಾದ್ ಫಾಸಿಲ್ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ, ಶೀಘ್ರದಲ್ಲಿ ಈ ಜೋಡಿ ಡಿವೋರ್ಸ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಇದೀಗ ಆ ಸುದ್ದಿಗೆ ಫುಲ್ ಸ್ಟಾಪ್ ಕೊಟ್ಟು ಜೋಡಿ ಜೊತೆಯಾಗಿ ಟ್ರಾವೆಲ್ ಮಾಡಿದ್ದಾರೆ.
ಓಂ ಶಾಂತಿ ಓಶಾನ, ಬೆಂಗಳೂರು ಡೇಸ್ (Bangalore Days), ಸೂಕ್ಷ್ಮದರ್ಶಿನಿ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ನಜ್ರಿಯಾ ನಜೀಮ್. ಇವರ ನಟನೆಗೆ ಲಕ್ಷಾಂತರ ಜನ ಫ್ಯಾನ್ಸ್ ಕೂಡ ಇದ್ದಾರೆ. ನಟಿ ಕೊನೆಯದಾಗಿ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
27
ಫಹಾದ್ ಫಾಸಿಲ್
ನಜ್ರಿಯಾ ಪತಿ ಫಹಾದ್ ಫಾಜಿಲ್ (Fahad Fazill) ಸ್ಟಾರ್ ನಟ. ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬುವ ನಟ ಇರುವ. ಇವರು ನಟಿಸುವ ಪಾತ್ರಗಳು ಸಿಂಪಲ್ ಆಗಿರುತ್ತೆ, ಆದರೆ ಅವುಗಳು ಮಾಡುವ ಇಂಪಾಕ್ಟ್ ಮಾತ್ರ ದೊಡ್ಡದಾಗಿರುತ್ತೆ.
37
ಈ ಜೋಡಿ ಒಂದಾಗಿದ್ದು ಹೇಗೆ?
'ಬೆಂಗಳೂರು ಡೇಸ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಜ್ರಿಯಾ (Nazriya Nazim) ಮತ್ತು ಫಹದ್ ಫಾಸಿಲ್ ಪ್ರೀತಿಯಲ್ಲಿ ಸಿಲುಕಿದರು. ನಂತರ ಕೆಲ ದಿನಗಳವರೆಗೆ ಡೇಟಿಂಗ್ ಮಾಡಿದ ಈ ಜೋಡಿ 2014ರಲ್ಲಿ ವಿವಾಹವಾದರು.
ನಟಿ ನಜ್ರಿಯಾ ನಜೀಮ್ ಮತ್ತು ಫಹಾದ್ ನಡುವಿನ ವಯಸ್ಸಿನ ನಂತರ ಬರೋಬ್ಬರಿ 11 ವರ್ಷಗಳು. ನಜ್ರಿಯಾ ಮದುವೆ ಸಮಯದಲ್ಲಿ ಆಕೆಯ ವಯಸ್ಸು ಕೇವಲ 19 ವರ್ಷ. ಫಹಾದ್ ವಯಸ್ಸು 31 ಆಗಿತ್ತು.
57
ಡಿವೋರ್ಸ್ಸ್ ರೂಮರ್ಸ್
ಕೆಲವು ದಿನಗಳ ಹಿಂದೆ ಅನೇಕ ಮಾಧ್ಯಮಗಳು ಈ ಜೋಡಿಯ ನಡುವೆ ಬಿರುಕು ಉಂಟಾಗಿದೆ ಸದ್ಯದಲ್ಲೇ ಈ ಜೋಡಿ ವಿಚ್ಚೇದನ ಪಡೆಯಲಿದೆ ಎಂದು ಸುದ್ದಿ ಹರಡಿಸಿತ್ತು. ಇದಕ್ಕೆ ಕಾರಣ ನಜ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದಂತಹ ಒಂದು ಪೋಸ್ಟ್.
67
ನಜ್ರಿಯಾ ಪೋಸ್ಟಲ್ಲಿ ಏನಿತ್ತು?
ಸೂಕ್ಷ್ಮದರ್ಶಿನಿ ಸಿನಿಮಾ ರಿಲೀಸ್ ಆದ ಬಳಿಕ ಸುಮಾರು ಆರು ತಿಂಗಳು ನಜ್ರಿಯಾ ಸೋಶಿಯಲ್ ಮೀಡಿಯಾದಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಅಷ್ಟೇ ಅಲ್ಲ ಯಾರ ಫೋನ್ ಗೂ ಸಿಕ್ಕಿರಲಿಲ್ಲ. ಈ ಕುರಿತು ಆರು ತಿಂಗಳ ಬಳಿಕ ಪೋಸ್ಟ್ ಮಾಡಿದ್ದ ನಜ್ರಿಯಾ, ತಾವು ಇಮೋಷನಲ್ ಡಿಪ್ರೆಶನ್ ಗೆ ಒಳಗಾಗಿದ್ದಾಗಿ ತಿಳಿಸಿದ್ದರು. ಹಾಗಾಗಿ ಜನರು ಹಾಗೂ ಮಿಡಿಯಾಗಳು ನಜ್ರಿಯಾ ಮತ್ತು ಫಹಾದ್ ಡಿವೋರ್ಸ್ ಬಗ್ಗೆ ಸುದ್ದಿ ಮಾಡಿದ್ದರು.
77
ಜೊತೆಯಾಗಿ ವಿದೇಶ ಪ್ರಯಾಣ
ಈ ವರ್ಷದ ಓಣಂಗೆ ಜೊತೆಯಾಗಿರುವ ಮುದ್ದಾದ ವಿಡೀಯೋ ಶೇರ್ ಮಾಡಿದ್ದರು ನಜ್ರಿಯಾ, ಇದೀಗ ಈ ಜೋಡಿ ವಿದೇಶದಲ್ಲಿ ತೆರಳಿದ್ದು, ಅಲ್ಲಿ ತಮ್ಮ ವೆಕೇಶನ್ ಜೊತೆಯಾಗಿ ಎಂಜಾಯ್ ಮಾಡ್ತಿದ್ದಾರೆ. ಆ ಮೂಲಕ ಎಲ್ಲಾ ರೂಮರ್ಸ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅಭಿಮಾನಿಗಳು ಸಹ ಈ ಜೋಡಿ ಜೊತೆಯಾಗಿರೋದನ್ನು ನೋಡಿ ಖುಷಿ ಪಟ್ಟಿದ್ದಾರೆ.