ಕಾಂತಾರ ಚಾಪ್ಟರ್ 1ಗೆ ಮತ್ತೊಂದು ಗರಿ, ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಕ್ಕೆ ತಯಾರಿ ನಡೆಯತ್ತಿದೆ. ವರದಿ ಪ್ರಕಾರ ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ಕಾಂತಾರಾ ಚಿತ್ರ ಪ್ರದರ್ಶನ ನಡೆಯಲಿದೆ. ಈ ಮೂಲಕ ಕಾಂತಾರ ಸಿನಿಮಾ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ.
ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಚಾಪ್ಟರ್ 1 ಸಿನಿಮಾಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಬಾಕ್ಸ್ ಆಫೀಸ್‌ನಲ್ಲೂ ಭಾರಿ ಗಳಿಕೆ ಕಂಡಿದೆ. ಹಲವು ಸಿನಿಮಾಗಳ ದಾಖಲೆ ಪುಡಿ ಮಾಡಿದೆ. ರಿಷಬ್ ಶೆಟ್ಟಿ ಹಾಗೂ ಇಡೀ ಕಾಂತಾರಾ ತಂಡಕ್ಕೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗುತ್ತಿದೆ. ಕಾಂತಾರಾ ಭಾರತೀಯ ಸಿನಿಮಾ ದಿಕ್ಕನ್ನೇ ಬದಲಿಸಲಬಲ್ಲ ಸಿನಿಮಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಎಲ್ಲಾ ಮೆಚ್ಚುಗೆ, ಪ್ರಶಂಸೆ ನಡೆವು ಕಾಂತಾರಾ ಚಾಪ್ಟರ್ 1 ಸಿನಿಮಾ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.
26
ರಾಷ್ಟ್ರಪತಿ ಭವನದಲ್ಲಿ ಕಾಂತಾರಾ ಚಾಪ್ಟರ್ 1 ಪ್ರದರ್ಶನ
ರಾಷ್ಟ್ರಪತಿ ಭವನದಲ್ಲಿ ಕಾಂತಾರಾ ಚಾಪ್ಟರ್ 1 ಪ್ರದರ್ಶನ
ಹಿಂದೂಸ್ಥಾನ ಟೈಮ್ಸ್ ವರದಿ ಪ್ರಕಾರ ಕಾಂತಾರಾ ಚಾಪ್ಟರ್ 1 ಸಿನಿಮಾ ಇಂದು (ಅ.05) ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನ ನಡೆಯಲಿದೆ ಎಂದು ವರದಿ ಮಾಡಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ನಿರ್ಮಾಪಕರು ಸೇರಿದಂತೆ ಕಾಂತಾರಾ ಚಾಪ್ಟರ್ 1 ಸಿನಿಮಾದ ತಾರಾಗಣ ಸಿನಿಮಾ ಪ್ರದರ್ಶನದ ವೇಳೆ ಹಾಜರಿರಲಿದೆ.
36
ಕಾಂತಾರಾ ಸಿನಿಮಾ ವೀಕ್ಷಿಸುತ್ತಾರಾ ರಾಷ್ಟ್ರಪತಿ?
ಕಾಂತಾರಾ ಸಿನಿಮಾ ವೀಕ್ಷಿಸುತ್ತಾರಾ ರಾಷ್ಟ್ರಪತಿ?
ಕಾಂತಾರಾ ಚಾಪ್ಟರ್ 1 ಸಿನಿಮಾ ರಾಷ್ಟ್ರಪತಿ ಭವನದಲ್ಲಿ ಪ್ರದರ್ಶನಕ್ಕೆ ಎಲ್ಲಾ ತಯಾರಿ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕಾಂತಾರಾ ಚಾಪ್ಟರ್ 1 ಸಿನಿಮಾ ವೀಕ್ಷಿಸಲಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ ಹಲವು ಗಣ್ಯರು ಕಾಂತಾರಾ ಚಾಪ್ಟರ್ 1 ಸಿನಿಮಾ ವೀಕ್ಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ಸಚಿವ ಸಂಪುಟದ ಕೆಲ ಸದಸ್ಯರು ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಾಂತಾರಾ ಚಾಪ್ಟರ್ 1 ಸಿನಿಮಾ ಭಾರಿ ಯಶಸ್ಸು ಸಾಧಿಸಿದ ಬೆನ್ನಲ್ಲೇ ಕಾಂತಾರಾ ತಂಡ ಇಂದು ದೆಹಲಿಯಲ್ಲಿ ಸಕ್ಸಸ್ ಮೀಟ್ ಆಯೋಜಿಸಿದೆ. ಅಭಿಮಾನಿಗಳ ಜೊತೆ, ಮಾಧ್ಯಮದ ಜೊತೆ ರಿಷಬ್ ಶೆಟ್ಟಿ ಸೇರಿದಂತೆ ಕಾಂತಾರಾ ಚಾಪ್ಟರ್ 1 ಸಿನಿಮಾ ತಂಡ ಮಾತುಕತೆ ನಡೆಸಲಿದೆ. ಇದರ ಬಳಿಕ ರಾಷ್ಟ್ರಪತಿ ಭವನದಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
56
ಮೂರೇ ದಿನಕ್ಕೆ 170 ಕೋಟಿ ರೂಪಾಯಿ ಕಲೆಕ್ಷನ್
ಮೂರೇ ದಿನಕ್ಕೆ 170 ಕೋಟಿ ರೂಪಾಯಿ ಕಲೆಕ್ಷನ್
ಕಾಂತಾರಾ ಚಾಪ್ಟರ್ 1 ಸಿನಿಮಾ ಮೂರೇ ದಿನಕ್ಕೆ 170 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಮೊದಲ ದಿನ ದೇಶದಲ್ಲಿ ಒಟ್ಟು 61.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಪೈಕಿ ಕರ್ನಾಟಕದಲ್ಲಿ 19.6 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು. ಎರಡನೇ ದಿನ 46 ಕೋಟಿ ರೂಪಾಯಿ ಸಂಗ್ರಹ ಮಾಡಿದ್ದರೆ, ಮೂರನೇ ದಿನ 55.25 ಕೋಟಿ ರೂಪಾಯಿ ಸಂಗ್ರಹ ಮಾಡಿದೆ.
66
ಹಿಂದಿ ಡಬ್ ವರ್ಶನ್ ಕಲೆಕ್ಷನ್ ಭರ್ಜರಿ
ಹಿಂದಿ ಡಬ್ ವರ್ಶನ್ ಕಲೆಕ್ಷನ್ ಭರ್ಜರಿ
ಕನ್ನಡ ಸಿನಿಮಾ ಕಾಂತಾರಾ ಚಾಪ್ಟರ್ 1 ಸಿನಿಮಾ ಹಿಂದಿ, ಮಲೆಯಾಳಂ, ತೆಲುಗು,ತಮಿಳು ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮೂರನೇ ದಿನ ಕನ್ನಡಕ್ಕಿಂತ ಹೆಚ್ಚು ಕಲೆಕ್ಷನ್ ಹಿಂದಿಯಲ್ಲಿ ಮಾಡಿದೆ. ಮೂರನೇ ದಿನ ಕನ್ನಡದಲ್ಲಿ 15.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ಹಿಂದಿಯಲ್ಲಿ 19 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.