ಸಮಂತಾ ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದ್ದೇ ಸುಳ್ಳಾ?

Suvarna News   | Asianet News
Published : Oct 01, 2021, 08:37 AM IST

ಸೆಲೆಬ್ರೆಟಿ ಕಪಲ್‌ಗಳಾದ ನಾಗ ಚೈತನ್ಯ (Naga Chaitanya) ಮತ್ತು ಸಮಂತಾ ರುತ್ ಪ್ರಭು (Samantha Ruth Prabhu) ಅವರ ವೈಯಕ್ತಿಕ ಜೀವನದ ವಿಷಯವಾಗಿ ಸುದ್ದಿಯಾಗುತ್ತಿದ್ದಾರೆ. ಅವರು ನಾಗ ಚೈತನ್ಯರಿಂದ ವಿಚ್ಛೇದನ ಪಡೆಯಲು  ಮುಂದಾಗಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ಆದಾಗ್ಯೂ, ಸಮಂತಾ ಮತ್ತು ನಾಗ ಇಬ್ಬರೂ ಸುದ್ದಿಯ ಬಗ್ಗೆ ಇದುವರೆಗೆ ಏನನ್ನೂ ಮಾತನಾಡಲಿಲ್ಲ. ಇದರ ನಡುವೆ ಸಮಂತಾ ಮತ್ತು ನಾಗ ಚೈತನ್ಯ  ತಮ್ಮ ಕುಟುಂಬವನ್ನು ವಿಸ್ತರಿಸಲು ಪ್ಲಾನ್‌ ಮಾಡುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ಮತ್ತೊಂದು ಸುದ್ದಿಯನ್ನು ಬಹಿರಂಗಪಡಿಸಿವೆ. ಏನಿದು ಹೊಸ ಗಾಸಿಪ್?

PREV
16
ಸಮಂತಾ ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದ್ದೇ ಸುಳ್ಳಾ?

ಕೆಲವು ವಾರಗಳ ಹಿಂದೆ ಸಮಂತಾ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ತನ್ನ  ಹೆಸರನಿಂದ 'ಅಕ್ಕಿನೇನಿ' ಸರ್‌ನೇಮ್‌ ಕೈಬಿಟ್ಟರು. ಅಂದಿನಿಂದ, ನಾಗ ಚೈತನ್ಯ ಮತ್ತು ಸ್ಯಾಮ್ ಅಗಲಿಕೆಯ  ಬಗ್ಗೆ ಅನೇಕ ವರದಿಗಳು ಮತ್ತು ವದಂತಿಗಳು ಹರಿದಾಡುತ್ತಲೇ ಇವೆ. 

 

26

ನಟಿ ತನ್ನ ಮಾವ ನಾಗಾರ್ಜುನ ಹುಟ್ಟುಹಬ್ಬಕ್ಕೂ ಮಿಸ್ ಆಗಿದ್ದರು ಅದರ ನಂತರ ಬಾಲಿವುಡ್ ನಟ ಆಮೀರ್ ಖಾನ್ ನಾಗ ಅವರ ಚಿತ್ರ ಲವ್ ಸ್ಟೋರಿಯನ್ನು ಬೆಂಬಲಿಸಲು  ಹೈದರಾಬಾದ್‌ಗೆ ಬಂದಾಗ ಡಿನ್ನರ್‌ನಲ್ಲಿ ಕೂಡ ಫ್ಯಾಮಿಲಿ ಜೊತೆ ಸಮಂತಾ ಇರಲಿಲ್ಲ. 

36

ಸಮಂತಾ ಮುಂಬೈಗೆ ಶಿಫ್ಟ್‌ ಆಗುತ್ತಿದ್ದಾರೆ ಎಂಬ ವರದಿಯನ್ನು ನಟಿ ತಳ್ಳಿ ಹಾಕಿದ್ದಾರೆ. ಜೊತೆಗೆ 150 ಕೋಟಿ ರೂ. ಜೀವನಾಂಶ ಕೇಳಿದ್ದಾರೆ. ಅತ್ತೆಯೊಂದಿಗಿನ ಮುನಿಸು ವಿಚ್ಚೇದನಕ್ಕೆ ಕ

46

 ಈ ಕಪಲ್‌ನ ಡಿವೋರ್ಸ್ ಸುದ್ದಿಯ ನಡುವೆ ಸಮಂತಾ ಮತ್ತು ನಾಗ ತಮ್ಮ ಕುಟುಂಬವನ್ನು ವಿಸ್ತರಿಸಲು ಮತ್ತು ಮಗುವನ್ನು ಹೊಂದಲು ಪ್ಲಾನ್‌ ಮಾಡುತ್ತಿದ್ದಾರೆ ಎಂದು ಗ್ರೇಟ್ ಆಂಧ್ರ ವರದಿ ಮಾಡಿದೆ. ಸಮಂತಾ ಹೊಸ ಯೋಜನೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ ಮತ್ತು ಹೊಸ ಸ್ಕ್ರಿಪ್ಟ್‌ಗಳನ್ನು ಕೇಳುವುದನ್ನು ನಿಲ್ಲಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 

56

ಸಮಂತಾ ತುಂಬಾ ಫ್ಯಾಮಿಲಿ ಓರಿಯೆಂಟೆಡ್‌ ಮತ್ತು ದಂಪತಿಗಳು (ಸ್ಯಾಮ್ ಮತ್ತು ನಾಗ) ತಮ್ಮ ಕುಟುಂಬವನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ. ನಟಿ ಕೂಡ ತಡವಾಗಿ ಯಾವುದೇ ಸ್ಕ್ರಿಪ್ಟ್‌ಗಳನ್ನು ಕೇಳುತ್ತಿಲ್ಲ ಎಂದು ಕುಟುಂಬಕ್ಕೆ ಹತ್ತಿರವಿರುವ ಮೂಲವೊಂದು ಹೇಳಿದೆ.  

66

ಸಮಂತಾ ಅವರ ಪ್ರೆಗ್ನೆಂಸಿಯ ಸುದ್ದಿಗಳು ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ಅವರು ಮದುವೆಯಾದಾಗಿನಿಂದ, ಆಕೆ ಪ್ರೆಗ್ನೆಂಟ್‌ ಎಂಬ ವದಂತಿಗಳು ಬಂದಿದ್ದವು ಮತ್ತು ನ್ಯೂಸ್‌ ಆಗಿತ್ತು. ನಕ್ಕು ಅವುಗಳನ್ನು ನಟಿ ತಳ್ಳಿ ಹಾಕಿದ್ದರು.

click me!

Recommended Stories