ವಿಶೇಷ ಕಾರಣಕ್ಕಾಗಿ ಕರ್ನಾಟಕದ ಕೆಂಪು ಮಣ್ಣಿನಿಂದ ಮೈ ಮುಚ್ಚಿ ಪೋಸ್ ಕೊಟ್ಟ ಬಾಲಿವುಡ್ ನಟಿ ಸೋನಂ ಕಪೂರ್…

First Published | Oct 28, 2024, 2:28 PM IST

ತನ್ನ ಫ್ಯಾಷನ್ ಸೆಲೆಕ್ಷನ್ ನಿಂದಾನೆ ಯಾವಾಗ್ಲೂ ಸುದ್ದಿಯಲ್ಲಿರುವ ಸೋನಮ್ ಕಪೂರ್, ಮತ್ತೆ ಹೊಸದೊಂದು ಫ್ಯಾಷನ್ ನಲ್ಲಿ ಕಾಣಿಸಿಕೊಂಡಿದ್ದು, ಸೋನಂ ಅವತಾರ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಯಾಕಂದ್ರೆ ಸೋನಂ ಕಪೂರ್ ಖಾದಿ ಲೆಹೆಂಗಾ ಜೊತೆಗೆ ಬ್ಲೌಸ್ ಧರಿಸದೇ ಕೇವಲ ಮಣ್ಣಿನಿಂದ ಮೈಮುಚ್ಚಿದ್ದಾರೆ. 
 

ದೀಪಾವಳಿ ಇನ್ನೂ ಬಂದಿಲ್ಲ ಆದರೆ ಬಾಲಿವುಡ್ ಫ್ಯಾಷನಿಸ್ಟ್ ಸೋನಮ್ ಕಪೂರ್ (Sonam Kapoor) ಈಗಾಗಲೇ ದೀಪಾವಳಿಗೆ ಸಾಂಪ್ರದಾಯಿಕ ಉಡುಗೆ ಹೇಗಿರಬೇಕು ಅನ್ನೋ ಟಿಪ್ಸ್ ನೀಡುತ್ತಿದ್ದಾರೆ. ಈ ಬಾರಿ ಸೋನಂ ವಿಶೇಷ ಅವತಾರದಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ, ಇದನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ, ಜೊತೆಗೆ ಹೊಗಳುತ್ತಿದ್ದಾರೆ ಇದಕ್ಕೆ ಕಾರಣವೂ ಇದೆ. 
 

ಸೋನಮ್ ಕಪೂರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಫೋಟೊಗಳಲ್ಲಿ ಮಣ್ಣಿನ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದರಲ್ಲಿನ ಟ್ವಿಸ್ಟ್ ಏನೆಂದರೆ, ಸೋನಂ ಖಾದಿ ಬಟ್ಟೆಯಿಂದ (khadi lehenga) ಮಾಡಿದ ಲೆಹೆಂಗಾವನ್ನು ಧರಿಸಿದ್ದರೂ, ಅದರೊಂದಿಗಿದ್ದ ಬ್ಲೌಸ್ ಧರಿಸದೇ ಕೇವಲ ಜೇಡಿಮಣ್ಣಿನಿಂದ ತಮ್ಮ ಮೈ ಮುಚ್ಚಿಕೊಂಡಿದ್ದಾರೆ. ತಮ್ಮ ಮೈಯಲ್ಲಿ ಕೆಂಪು ಮಣ್ಣು ಮತ್ತು ಮುಲ್ತಾನಿ ಮಿಟ್ಟಿಯಲ್ಲಿ ಮುಚ್ಚಿರೋದಕ್ಕೂ ಸೋನಂ ಕಾರಣ ತಿಳಿಸಿದ್ದಾರೆ. 

Tap to resize

ಕರ್ನಾಟಕದ ಕೆಂಪು ಮಣ್ಣು ಮತ್ತು ಮುಲ್ತಾನಿ ಮಿಟ್ಟಿಯಿಂದ ಮಾಡಿದ ರವಿಕೆ  
ಈ ಫೋಟೋಗಳಲ್ಲಿ ಸೋನಮ್ ಕಪೂರ್ ಆಫ್-ಶೋಲ್ಡರ್ ಕಾರ್ಸೆಟ್ ಶೈಲಿಯ ಬ್ಲೌಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಕೆಂಪು ಜೇಡಿಮಣ್ಣು, ಮುಲ್ತಾನಿ ಮಿಟ್ಟಿ, ಪೇಪರ್ ಮೆಶ್ ಮತ್ತು ಖಾದಿಯನ್ನು ಬೆರೆಸಿ ಈ ಬ್ಲೌಸ್ ತಯಾರಿಸಲಾಗಿದೆ. ಈ ಕಾರಣಕ್ಕಾಗಿಯೇ ಇದು ಒಂದು ಕಡೆ ಸೋನಮ್ ಅವರ ದೇಹವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ದೇಹಕ್ಕೆ ಪರ್ಫೆಕ್ಟ್ ಶೇಪ್ ನೀಡಿದೆ.

ಸೋನಮ್ ಕಪೂರ್ ಖಾದಿಯಿಂದ ಮಾಡಿದ ಲೆಹೆಂಗಾ ಮತ್ತು ದುಪಟ್ಟಾವನ್ನು ಹಾಗೂ  ಮಣ್ಣಿನಿಂದ ತಯಾರಿಸಿದ ರವಿಕೆಯೊಂದಿಗೆ ಸಖತ್ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ. ಆ ಮೂಲಕ ತಾವು ಲೇಟೆಸ್ಟ್ ಫ್ಯಾಷನ್ ಐಕಾನ್ ಅನ್ನೋದನ್ನ ಮತ್ತೆ ಸಾಬೀತು ಮಾಡಿದ್ದಾರೆ. ನಟಿ ಗೋಲ್ಡನ್ ಬಾರ್ಡರ್ ಇರುವ ಮಣ್ಣಿನ ಬಣ್ಣದ ಖಾದಿ ಲೆಹೆಂಗಾ ಧರಿಸಿದ್ದು, ಇದರ ಜೊತೆಗೆ ಜ್ಯುವೆಲ್ಲರಿ ಧರಿಸಿದ್ದು ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. 

ಈ ಲೆಹೆಂಗಾವನ್ನು ಭಾರತದ ಪ್ರಸಿದ್ಧ ಫ್ಯಾಷನ್ ಡಿಸೈನರ್ ಜೋಡಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ (Sandeep Khosla) ಅವರ ಸಂಗ್ರಹದಿಂದ ತೆಗೆದುಕೊಳ್ಳಲಾಗಿದೆ.  ನಟಿ ಫೋಟೊಗಳ ಜೊತೆಗೆ ಖಾದಿ ಮತ್ತು ಭೂಮಿಯ ಸಾರದಲ್ಲಿ ನನ್ನನ್ನು ಸುತ್ತಿಕೊಂಡಿರುವ, ಸಂಪ್ರದಾಯ ಮತ್ತು ದೈವೀಕತೆಯನ್ನು ಗೌರವಿಸಲು ಹೀಗೆ ರೆಡಿಯಾಗಿರೋದಾಗಿ ತಿಳಿಸಿದ್ದಾರೆ. 
 

ಸೋನಮ್ ಕಪೂರ್ ತಮ್ಮ ಲುಕ್ ಗೆ ಅನುಗುಣವಾದ ಆಭರಣಗಳನ್ನು ಆಯ್ಕೆ ಮಾಡಿದ್ದಾರೆ, ಅದು ಆಕೆಗೆ ಟ್ರೆಡಿಶನಲ್ ಲುಕ್ ಜೊತೆಗೆ ರಿಚ್ ಲುಕ್ ಕೂಡ ನೀಡಿದೆ. ಸೋನಂ ಲೇಯರ್ ಗಳುಳ್ಳ ಪಚ್ಚೆ ಹಾರವನ್ನು ಧರಿಸಿದ್ದು, ಜೊತೆಗೆ ಚೋಕರ್ ಹಾರವನ್ನು ಕೂಡ ಧರಿಸಿದ್ದಾರೆ. ಅಷ್ಟೇ ಅಲ್ಲ ಅದಕ್ಕೆ ಮ್ಯಾಚ್ ಆಗುವ ಕಿವಿಯೋಲೆ ಮತ್ತು ಉಂಗುರವನ್ನು ಸಹ ಸೋನಂ ಧರಿಸಿದ್ದಾರೆ. 
 

ಭೂಮಿ ಮತ್ತು ದೇವರುಗಳ ಹೆಸರಿನಲ್ಲಿ ದೀಪಾವಳಿ
ಜೇಡಿಮಣ್ಣಿನಿಂದ ಮಾಡಿದ ರವಿಕೆಯನ್ನು ಧರಿಸುವುದು ತಾಯಿ ಭೂಮಿಯೊಂದಿಗೆ ಸಂಪರ್ಕ ಸಾಧಿಸುವ ಒಂದು ಮಾರ್ಗವಾಗಿದೆ ಎಂದು ಸೋನಮ್ ಕಪೂರ್ ತಿಳಿಸಿದ್ದಾರೆ. ತಮ್ಮ ಈ ಹೊಸ ಅವತಾರದ ಮೂಲಕ ಸೋನಂ ಕಪೂರ್ ತಮ್ಮ ಸಂಪೂರ್ಣ ಲುಕ್ ಮತ್ತು ದೀಪಾವಳಿಯನ್ನು (deepavali) ದೇವರು, ಮಹಿಳೆಯರು ಮತ್ತು ಭೂಮಿಗೆ ಡೆಡಿಕೇಟ್ ಮಾಡಿದ್ದಾರೆ.
 

Latest Videos

click me!