ಅಲ್ಲು ಅರ್ಜುನ್‌ - ರಾಮ್‌ಚರಣ್‌ ಬ್ಯುಸಿನೆಸ್‌ ಕುಟುಂಬದ ಸುಂದರಿಯರ ವರಿಸಿದ ದಕ್ಷಿಣದ ನಟರು

Published : Jun 12, 2024, 05:02 PM ISTUpdated : Jun 12, 2024, 05:22 PM IST

ಸಿನಿಮಾ ನಟನನಟಿಯರು ಸಾಮಾನ್ಯವಾಗಿ ಅವರದೇ ಕ್ಷೇತ್ರದವರನ್ನು ಜೀವನಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವುದು ಎಲ್ಲರಿಗೂ ತಿಳಿದೇ ಇದೆ. ಆದರೆ ಸೌತ್‌ನ ಈ ಸ್ಟಾರ್‌ ನಟರು ಸಿನಿಮಾರಂಗದಿಂದ ಹೊರಗಿನವರನ್ನು ವಿವಾಹವಾಗಿದ್ದಾರೆ. ಅಲ್ಲು ಅರ್ಜುನ್‌ನಿಂದ ಹಿಡಿದು ಸೂರ್ಯವರಗೆ  ಈ ನಟರು ಬ್ಯುಸಿನೆಸ್‌  ಕುಟುಂಬದವರನ್ನು ಮದುವೆಯಾಗಿದ್ದಾರೆ.

PREV
17
ಅಲ್ಲು ಅರ್ಜುನ್‌ - ರಾಮ್‌ಚರಣ್‌ ಬ್ಯುಸಿನೆಸ್‌ ಕುಟುಂಬದ ಸುಂದರಿಯರ ವರಿಸಿದ ದಕ್ಷಿಣದ ನಟರು

ಅಲ್ಲು ಅರ್ಜುನ್‌:
ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್‌ ಪತ್ನಿ ಸ್ನೇಹಾ ರೆಡ್ಡಿ. ಸ್ನೇಹಾ  ಅವರು SCIENT ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರ ಮಗಳು ಮತ್ತು ಸ್ವತಃ ವೃತ್ತಿಯಲ್ಲಿ ಉದ್ಯಮಿ.

27

ಸೂರ್ಯ:
ಸೂರ್ಯ ಮತ್ತು ಜ್ಯೋತಿಕಾ ದಕ್ಷಿಣದ ಫೇಮಸ್‌ ಕಪಲ್‌ಗಳಲ್ಲಿ ಒಬ್ಬರು. ಅವರನ್ನು ವಿವಾಹವಾಗಿದ್ದಾರೆ, ನಟಿ ಜ್ಯೋತಿಕಾ ಅವರ ತಂದೆ ಚಲನಚಿತ್ರ ನಿರ್ಮಾಪಕರು.

37

ಜೂನಿಯರ್ ಎನ್.ಟಿ.ಆರ್:
ಜೂನಿಯರ್ ಎನ್‌ಟಿಆರ್ ಅವರ ಪತ್ನಿ ಲಕ್ಷ್ಮಿ ಪ್ರಣತಿ ಅವರು ತೆಲುಗು ನ್ಯೂಸ್‌ ಚಾನೆಲ್‌ನ ಮಾಲೀಕರ ಮಗಳು.

47

ದುಲ್ಖರ್ ಸಲ್ಮಾನ್:
ಸೂಪರ್‌ ಸ್ಟಾರ್‌ ಮುಮ್ಮುಟ್ಟಿ ಅವರ ಪುತ್ರ ನಟ ದುಲ್ಖರ್ ಸಲ್ಮಾನ್ ಫ್ಯಾನ್‌ಗಳ ಹಾರ್ಟ್‌ ಥ್ರೋಬ್‌. ದುಲ್ಖರ್ ಅವರು ಚೆನ್ನೈ ಉದ್ಯಮಿ ಸೈಯದ್ ನಿಜಾಮುದ್ದೀನ್ ಅವರ ಪುತ್ರಿ ಅಮಲ್ ಅವರನ್ನು ವಿವಾಹವಾಗಿದ್ದಾರೆ.

57

ರಾಣಾ ದಗ್ಗುಭಟ್ಟಿ:
ಬಾಹುಬಲಿ ಸಿನಿಮಾದಿಂದ ಖ್ಯಾತಿ ಪಡೆದಿರುವ ನಟ ರಾಣಾ ದುಗ್ಗುಬಾಟಿ ಅವರು ಉದ್ಯಮಿ ಮತ್ತು ಕ್ರಿಸ್ಲಾ ಜ್ಯುವೆಲ್ಸ್ ನಿರ್ದೇಶಕರ ಪುತ್ರಿ ಮಿಹೀಕಾ ಬಜಾಜ್ ಅವರನ್ನು ವಿವಾಹವಾಗಿದ್ದಾರೆ.

67

ತಲಪತಿ ವಿಜಯ್:
ತಮಿಳು ಸೂಪರ್‌ಸ್ಟಾರ್‌ ತಳಪತಿ ವಿಜಯ್ ಅವರು ಶ್ರೀಲಂಕಾದ ತಮಿಳು ಕೈಗಾರಿಕೋದ್ಯಮಿ ಮಗಳು ಸಂಗೀತಾ ಸೊರ್ನಲಿಂಗಂ ಅವರನ್ನು ವಿವಾಹವಾಗಿದ್ದಾರೆ.


 

77

ರಾಮ್ ಚರಣ್:
ತೆಲಗು ಸೂಪರ್‌ ಸ್ಟಾರ್‌ ಚಿರಂಜೀವಿಯ ಅವರ  ಪುತ್ರ ನಟ ರಾಮ್ ಚರಣ್ ಅವರು ಅಪೋಲೋ ಫೌಂಡೇಶನ್‌ನ ಉಪಾಧ್ಯಕ್ಷರಾದ ಉಪಾಸನಾ ಕುಮ್ನೇನಿ ಅವರನ್ನು ವಿವಾಹವಾಗಿದ್ದಾರೆ.

 

Read more Photos on
click me!

Recommended Stories