ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಜೊತೆಗಿನ ಮದುವೆಯ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಜೂನ್ 23 ರಂದು ಅವರು ತಮ್ಮ ಗೆಳೆಯನನ್ನು ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳಿವೆ. ಈ ಮದುವೆಯ ಬಗ್ಗೆ ಇಬ್ಬರೂ ಇನ್ನೂ ಯಾವುದೇ ಅಪ್‌ಡೇಟ್ ನೀಡದಿದ್ದರೂ, ಅವರ ಮದುವೆಯ ಬಗ್ಗೆ ಚರ್ಚೆಗಳು ಜೋರಾಗಿವೆ. ಈಗ ಸೋನಾಕ್ಷಿ ಮತ್ತು ಜಹೀರ್ ಮದುವೆಯ ಹೊಸ ಅಪ್‌ಡೇಟ್ ಹೊರಬಿದ್ದಿದೆ.
ಸೋನಾಕ್ಷಿ ಜಹೀರ್‌ರನ್ನು ಕೈ ಹಿಡಿಯತ್ತಾರೆ ಎಂದಾಗಿನಿಂದ ಅವರ ಮದುವೆಯಲ್ಲಿ ಯಾವ ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು.
ಇದೀಗ ಸೋನಾಕ್ಷಿ ಮದುವೆ ಬಗ್ಗೆ ಬೆಸ್ಟ್ ಫ್ರೆಂಡ್ ಗುಟ್ಟು ರಟ್ಟು ಮಾಡಿದ್ದಾರೆ. ಮುಂಬೈನಲ್ಲಿ ಇಬ್ಬರೂ ವಿವಾಹವಾಗಲಿದ್ದು, ಹತ್ತಿರದ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಮಾತ್ರ ಹಾಜರಾಗಲಿದ್ದಾರೆ.
ವಿವಾಹದಲ್ಲಿ ಸಪ್ತಪದಿಯೂ ಇಲ್ಲ, ನಿಕಾಹ್ ಕೂಡಾ ಅಲ್ಲ- ಇದೊಂದು ರಿಜಿಸ್ಟರ್ಡ್ ಮ್ಯಾರೇಜ್ ಅಂದರೆ ಸೋನಾಕ್ಷಿ ಮೊದಲು ಜಹೀರ್ ಜೊತೆ ತನ್ನ ಮದುವೆಯನ್ನು ನೋಂದಾಯಿಸಿಕೊಳ್ಳುತ್ತಾಳೆ.
ಇದಾದ ನಂತರ ಜೂನ್ 23 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಪಾರ್ಟಿಯಲ್ಲಿ ಸೋನಾಕ್ಷಿ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಇರಲಿದ್ದಾರೆ.
ಮತ್ತೊಂದು ಮೂಲದ ಪ್ರಕಾರ ಅವರಿಬ್ಬರೂ ಈಗಾಗಲೇ ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದು, 23ರಂದು ಆರತಕ್ಷತೆ ಇಟ್ಟುಕೊಂಡಿದ್ದಾರಷ್ಟೇ. ಇದರಲ್ಲಿ ಯಾವುದೇ ಸಂಪ್ರದಾಯಗಳ ಆಚರಣೆ ಇರುವುದಿಲ್ಲ.
ಈ ಅತಿಥಿಗಳು ಮದುವೆಗೆ ಹಾಜರಾಗಬಹುದು
ಸೋನಾಕ್ಷಿಯ ಕುಟುಂಬದ ಯಾವುದೇ ಸದಸ್ಯರು ಇದುವರೆಗೆ ಮದುವೆಯ ಬಗ್ಗೆ ಮಾತನಾಡದಿದ್ದರೂ, ಸೋನಾಕ್ಷಿ ಅವರ ಕುಟುಂಬದ ಆಪ್ತ ಮೂಲಗಳು ಮದುವೆಯ ಸುದ್ದಿ ನಿಜ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ. ಈ ಮದುವೆಗೆ ಹಲವು ದೊಡ್ಡ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎಂಬ ಮಾಹಿತಿ ಇದೆ.
ಸಲ್ಮಾನ್ ಖಾನ್, ಆಯುಷ್ ಶರ್ಮಾ, ಹುಮಾ ಖುರೇಷಿ ಮತ್ತು ವರುಣ್ ಶರ್ಮಾ ಸೇರಿ ಹಿರಾಮಂಡಿಯ ಇಡೀ ತಾರಾ ಬಳಗವು ಮದುವೆಗೆ ಹಾಜರಾಗಬಹುದು.
ಸೋನಾಕ್ಷಿ ಮದುವೆ ಬಗ್ಗೆ ಮನೆಯವರಿಗೆ ತಿಳಿದಿಲ್ಲವೇ?
ಇತ್ತೀಚೆಗೆ ಸೋನಾಕ್ಷಿಯ ಮದುವೆಯ ಬಗ್ಗೆ ಆಕೆಯ ತಂದೆಯನ್ನು ಕೇಳಿದಾಗ, ಶತ್ರುಘ್ನ ಸಿನ್ಹಾ ಅವರು ಮದುವೆಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು. ಅದೇ ಸಮಯದಲ್ಲಿ, ಸೋನಾಕ್ಷಿಯ ಸಹೋದರ ಲವ್ ಸಿನ್ಹಾ ಕೂಡ ಈ ಮದುವೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದಿದ್ದಾರೆ. ಮನೆಯವರ ಇಚ್ಚೆಗೆ ವಿರುದ್ಧವಾಗಿ ಸೋನಾಕ್ಷಿ ವಿವಾಹವಾಗುತ್ತಿದ್ದಾರೆ ಎಂಬ ಅನುಮಾನಗಳಿವೆ.