Published : May 03, 2025, 05:34 PM ISTUpdated : May 03, 2025, 05:38 PM IST
ಪ್ರಶಾಂತ್ ನೀಲ್ ನಿರ್ದೇಶನದ, ಜೂ. ಎನ್‌ಟಿಆರ್ ನಟನೆಯ ‘ಡ್ರ್ಯಾಗನ್’ ಚಿತ್ರದ ವಿಶೇಷ ಹಾಡಿಗೆ ನಟಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದು, ಈ ಕುರಿತು ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ಅವರ ಜತೆಗೆ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ.
ಬೇಡಿಕೆಯಲ್ಲಿರುವ ಸ್ಟಾರ್ ನಟಿಯರು ಚಿತ್ರದ ಸ್ಪೆಷಲ್ ಅಥವಾ ಐಟಂ ಸಾಂಗುಗಳಿಗೆ ಹೆಜ್ಜೆ ಹಾಕುವುದು ಹೊಸದೇನೂ ಅಲ್ಲ. ಈಗ ಈ ಸಾಲಿಗೆ ನಟಿ ರಶ್ಮಿಕಾ ಮಂದಣ್ಣ ಸೇರ್ಪಡೆಯಾಗುತ್ತಿದ್ದಾರೆಂಬ ಸುದ್ದಿ ಜೋರಾಗಿದೆ.
25
ಪ್ರಶಾಂತ್ ನೀಲ್ ನಿರ್ದೇಶನದ, ಜೂ. ಎನ್‌ಟಿಆರ್ ನಟನೆಯ ‘ಡ್ರ್ಯಾಗನ್’ ಚಿತ್ರದ ವಿಶೇಷ ಹಾಡಿಗೆ ನಟಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಲಿದ್ದು, ಈ ಕುರಿತು ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ಅವರ ಜತೆಗೆ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ.
35
ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಬೆಂಗಾಲ್ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುತ್ತಂತೆ. 1960ರ ಕಥೆ ಇರಬಹುದು. ನಕ್ಸಲರು ಹುಟ್ಟೋಕೆ ಮುಂಚೆ ಬೆಂಗಾಲ್ ರಾಜಕೀಯ ತೋರಿಸೋ ತರ ಸಿನಿಮಾ ಇರುತ್ತೆ.
ಜೂ.ಎನ್‌ಟಿಆರ್, ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಇನ್ನೊಂದು ಇಂಟರೆಸ್ಟಿಂಗ್ ರೂಮರ್ ಕೇಳಿ ಬರ್ತಿದೆ. ಇದರಲ್ಲಿ ತಾರಕ್ ಡಬಲ್ ರೋಲ್ ಮಾಡ್ತಾರಂತೆ. ಇದರಲ್ಲಿ ನಿಜ ಎಷ್ಟಿದೆ ನೋಡಬೇಕು. ಇನ್ನು ತಾರಕ್ 'ದೇವರ' ಚಿತ್ರದ ಮೂಲಕ ಬಂದಿದ್ರು.
55
ಇನ್ನು ಕೆಲವು ದಿನಗಳಿಂದ ಡ್ರ್ಯಾಗನ್ ಚಿತ್ರಕ್ಕೆ ಕುಮುಟಾ ಬಳಿ ಚಿತ್ರೀಕರಣ ನಡೆಯುತ್ತಿದೆ. ಕ್ಲೈಮ್ಯಾಕ್ಸ್ ಹಾಗೂ ಎರಡು ಹಾಡುಗಳ ಚಿತ್ರೀಕರಣವೂ ಇಲ್ಲೇ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ ಇದೆ.