ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಚಿತ್ರದಲ್ಲಿ ತಗ್ಗೇದೇ ಲೇ ಅಂತ ಹೊಸ ಟ್ರೆಂಡ್ ಸೆಟ್ ಮಾಡಿದ್ರು. ತಗ್ಗೇದೇ ಲೇ ಡೈಲಾಗ್ ಜೊತೆಗೆ ಬನ್ನಿ ಗಡ್ಡ ನಿಮಿರುವ ಸ್ಟೈಲ್ ದೇಶದಲ್ಲೆ ಸದ್ದು ಮಾಡಿತ್ತು. ಪುಷ್ಪ ಫೀವರ್ ಇನ್ನೂ ಹೋಗುವ ಮುಂಚೆಯೇ ಅಲ್ಲು ಅರ್ಜುನ್ ಮತ್ತೊಂದು ಹೊಸ ಟ್ರೆಂಡ್ ಶುರು ಮಾಡಿದ್ದಾರೆ. ಸಾಮಾನ್ಯವಾಗಿ ಹೀರೋಗಳು ಸ್ಟೈಲಿಶ್ ಆಗಿ ಕಾಣುವ ಟಿ ಶರ್ಟ್‌ಗಳನ್ನು ಧರಿಸುತ್ತಾರೆ. ಅವಶ್ಯಕತೆ ಇದ್ದರೆ ಆ ಟಿ ಶರ್ಟ್‌ಗಳ ಮೇಲೆ ಒಳ್ಳೆಯ ಕೋಟೇಶನ್ಸ್ ಇರುವ ಹಾಗೆ ನೋಡಿಕೊಳ್ಳುತ್ತಾರೆ.