ಗಂಡನ ಮಾಜಿ ಗೆಳತಿಯೇ ನಂಗೆ ಪ್ರೇರಣೆ ಎಂದ ಆಲಿಯಾ ಭಟ್

Published : Mar 09, 2024, 02:07 PM IST

ಆಲಿಯಾ ಭಟ್ ಬಾಲಿವುಡ್‌ನ  ಪ್ರತಿಭಾವಂತ ನಟಿ ನಟನೆಯ ಜೊತೆ ಉದ್ಯಮ ಲೋಕದಲ್ಲಿಯೂ ಹೆಸರು ಮಾಡಿರುವ ಆಲಿಯಾ ಹಲವು ಫ್ಯಾಷನ್ ಬ್ರಾಂಡ್‌ಗಳ ಮುಖವಾಣಿ ಎನಿಸಿದ್ದಾರೆ. ಇಂತಹ ಆಲಿಯಾ ತಮಗೆ ಪ್ರೇರಣೆ ಯಾರು ಎಂಬ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಆ ವೀಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ವೆರೈಟಿಯಾಗಿ ಕಾಮೆಂಟ್ ಮಾಡಿದ್ದಾರೆ. 

PREV
19
ಗಂಡನ ಮಾಜಿ ಗೆಳತಿಯೇ ನಂಗೆ ಪ್ರೇರಣೆ ಎಂದ ಆಲಿಯಾ ಭಟ್

ಆಲಿಯಾ ಭಟ್ ಬಾಲಿವುಡ್‌ನ  ಪ್ರತಿಭಾವಂತ ನಟಿ ನಟನೆಯ ಜೊತೆ ಉದ್ಯಮ ಲೋಕದಲ್ಲಿಯೂ ಹೆಸರು ಮಾಡಿರುವ ಆಲಿಯಾ ಹಲವು ಫ್ಯಾಷನ್ ಬ್ರಾಂಡ್‌ಗಳ ಮುಖವಾಣಿ ಎನಿಸಿದ್ದಾರೆ. ಒಂದೂವರೆ ವರ್ಷದ ಮುದ್ದು ಮಗುವಿನ ತಾಯಿಯಾಗಿರುವ ಆಲಿಯಾ ಸಿನಿಮಾ ಲೋಕದಲ್ಲಿ ತಮಗೆ ಪ್ರೇರಣೆ ಯಾರು ಎಂಬ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಆ ವೀಡಿಯೋ ಈಗ ವೈರಲ್ ಆಗಿದ್ದು, ನೆಟ್ಟಿಗರು ವೆರೈಟಿಯಾಗಿ ಕಾಮೆಂಟ್ ಮಾಡಿದ್ದಾರೆ. 

29

ಆಲಿಯಾ ಭಟ್ ಪೋರ್ಬ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತನಗೆ ಬಾಲಿವುಡ್‌ನ ಮತ್ತೋರ್ವ ನಟಿ ದೀಪಿಕಾ ಪಡುಕೋಣೆ  ಪ್ರೇರಣೆ ಎಂದು ಹೇಳಿದ್ದಾರೆ.  ಆದರೆ ಹೇಳಿಕೇಳಿ ಈ ದೀಪಿಕಾ ಪಡುಕೋಣೆ ಹಾಗೂ ಪ್ರಸ್ತುತ ಆಲಿಯಾ ಭಟ್ ಪತಿಯಾಗಿರುವ ರಣ್ಬೀರ್ ಕಪೂರ್ ಬಾಲಿವುಡ್‌ನ ಒಂದು ಕಾಲದ ಲವ್‌ಬರ್ಡ್ಸ್‌

39

ಹೀಗಾಗಿ ಆಲಿಯಾ ಭಟ್ ಹೇಳಿಕೆ ಮಹತ್ವ ಪಡೆದಿದೆ. ಅಲ್ಲದೇ ಆಲಿಯಾ ಏನೇ ಧಿರಿಸು ಧರಿಸಲ್ಲಿ ಅಲ್ಲಿ ನೆಟ್ಟಿಗರು ಈಕೆ ದೀಪಿಕಾ ಪಡುಕೋಣೆಯನ್ನು ಪ್ರತಿಯೊಂದರಲ್ಲೂ ಕಾಪಿ ಮಾಡುತ್ತಾಳೆ ಎಂಬ ಒಂದು ಕಾಮೆಂಟ್ ಇದ್ದೇ ಇರುತ್ತದೆ. 

49

ಹೀಗಿರುವಾಗ ಈ ಸಂದರ್ಶನದಲ್ಲಿ ಹಾಲಿವುಡ್‌ನಲ್ಲಿ ಕೆಲಸ ಮಾಡಿದ ಬಗ್ಗೆ ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಆಲಿಯಾ ಭಟ್, ಭಾರತದ ಇತರ ನಟಿಯರಾದ ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಬಚ್ಚನ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್‌ನಲ್ಲಿ ಕೆಲಸ ಮಾಡಿದ್ದು ಅವರು ನನಗೆ ಪ್ರೇರಣೆ ಎಂದು ಹೇಳಿದ್ದಾರೆ. 

59

ಈ ಎಲ್ಲಾ ನಟಿಯರು ನನಗೆ ಸ್ನೇಹಿತರಾಗಿದ್ದು ಅವರನ್ನು ನಾನು ತುಂಬಾ ಇಷ್ಟಪಡುತ್ತೇನೆ. ಭಾರತೀಯ ನಟಿಯರಿಗೆ ಹಾಲಿವುಡ್‌ನಲ್ಲಿ ತಮ್ಮ ಕೌಶಲ್ಯವನ್ನು ತೋರಿಸಲು ದಾರಿ ಮಾಡಿಕೊಟ್ಟಿದ್ದಕ್ಕಾಗಿ ಈ ನಟಿಯರನ್ನು ನಾನು ಸದಾ ಮೆಚ್ಚುತ್ತೇನೆ ಸದಾ ಅವರಿಗೆ ಮನ್ನಣೆ ನೀಡಲು ಇಷ್ಟಪಡುತ್ತೇನೆ ಎಂದು ಆಲಿಯಾ ಹೇಳಿದ್ದಾರೆ. 

69

ಈ ವೀಡಿಯೋ ಸ್ವಲ್ಪ ಹೊತ್ತಿನಲ್ಲೇ ಸಖತ್ ವೈರಲ್ ಆಗಿದ್ದು, ಆಲಿಯಾ ಈ ಮಾತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಅನೇಕರು ಅಲಿಯಾ ತುಂಬಾ ಡೌನ್ ಟು ಅರ್ಥ್ ಎಂದಿದ್ದರೆ ಮತ್ತೆ ಕೆಲವರು ಆಲಿಯಾ ತುಂಬಾ ಬದಲಾಗಿದ್ದಾಳೆ, ಅಲಿಯಾ ತುಂಬಾ ಪ್ರೌಢಿಮೆ ಬೆಳೆಸಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ ಜೊತೆಗೆ ಆಲಿಯಾ ಮುಖದ ಹೊಳಪಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಗುವಾದ ನಂತರದ ಹೊಳಪು ಅವರ ಮುಖದಲ್ಲಿ ಎದ್ದು ಕಾಣಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ

79

ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ರಣ್ವೀರ್ ಜೋಡಿ ತಾವು ಪೋಷಕರಾಗುವುದಾಗಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಯಶ್‌ ರಾಜ್ ಸಿನಿಮಾದಿಂದ ಹೊರಗೆ ಬಂದಿದ್ದರು. ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸಲು ಆಗದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿದ್ದರು. ಆದರೆ  ದೀಪಿಕಾ ಬಿಟ್ಟ ಈ ಸಿನಿಮಾಗೆ ಆಲಿಯಾ ಆಸಕ್ತಿ ತೋರಿಸಿದ್ದರು ಆದರೆ ನೆಟ್ಟಿಗರು ಇದಕ್ಕೆ ಆಲಿಯಾರನ್ನು ತೀವ್ರ ಟೀಕೆ ಮಾಡಿದ್ದರು. 

89

ಇತ್ತ ಆಲಿಯಾ ಪತಿ ರಣ್‌ಬೀರ್ ಕಪೂರ್ ವೈಯಕ್ತಿಕ ಜೀವ ಬಹಳವಾಗಿ ಚರ್ಚಿತವಾದ ವಿಚಾರ  ಹಲವು ವರ್ಷಗಳ ಹಿಂದೆ ಈ ನಟ ದೀಪಿಕಾ ಪಡುಕೋಣೆ ಜೊತೆ ಪ್ರೇಮ ಸಂಬಂಧದಲ್ಲಿದ್ದರು. ಜೊತೆಗೆ ಊರೆಲ್ಲಾ ಸುತ್ತಿದ್ದರು.  ಆದರೆ ಅವರ ಸಂಬಂಧ ಮದುವೆವರೆಗೂ ಮುಂದುವರೆಯಲಿಲ್ಲ,  ರಣ್‌ಬೀರ್ ಮಾಡಿದ ಮೋಸವೇ  ಈ ಬ್ರೇಕಾಫ್‌ಗೆ ಕಾರಣ ಎಂದು ವರದಿಯಾಗಿತ್ತು.

99

ಆದರೂ ಇವರಿಬ್ಬರ ನಡುವಣ ಈಗ ಉತ್ತಮವಾದ ಸ್ನೇಹವಿದೆ. ಮಾಜಿ ಪ್ರೇಮಿಗಳಾದರೂ ಇವರಿಬ್ಬರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋಗೆ ಬಂದ ಆಲಿಯಾಗೆ ಕರಣ್ ಜೋಹರ್ ನಿಮ್ಮ ಮಾಜಿ ಪ್ರೇಮಿಗಳೊಂದಿಗೆ ಚೆನ್ನಾಗಿರಲು ಬಯಸುವಿರೋ ಅಥವಾ ನಿಮ್ಮ ಪತಿಯ ಮಾಜಿಪ್ರೇಮಿಗಳ ಜೊತೆ ಚೆನ್ನಾಗಿರಲು ಬಯಸುವಿರೋ ಎಂದು ಕೇಳಿದ ಪ್ರಶ್ನೆಗೆ ಆಲಿಯಾ ತನ್ನ ಗಂಡನ ಮಾಜಿ ಪ್ರೇಮಿಗಳೊಂದಿಗೆ ಚೆನ್ನಾಗಿರುವೆ  ತಾನು ರಣ್‌ಬೀರ್‌ನ ಎಲ್ಲಾ ಮಾಜಿ ಗೆಳತಿಯರ ಜೊತೆ ಚೆನ್ನಾಗಿರುವೆ ಎಂದು ಹೇಳಿಕೊಂಡಿದ್ದರು.

Read more Photos on
click me!

Recommended Stories