'ರಾಜ್‌ಗಿಂತ ಶ್ರೀಮಂತರು ನನ್ನ ಹಿಂದೆ..' ಹಣಕ್ಕಾಗಿ ರಾಜ್ ಕುಂದ್ರಾ ಮದುವೆಯಾದ್ರು ಅನ್ನೋರಿಗೆ ತಿರುಗೇಟು ಕೊಟ್ಟ ಶಿಲ್ಪಾ ಶೆಟ್ಟಿ

Published : Mar 09, 2024, 10:47 AM IST

ರಾಜ್ ಕುಂದ್ರಾ ಅವರು 108ನೇ ಶ್ರೀಮಂತ ಬ್ರಿಟಿಷ್ ಭಾರತೀಯರಾಗಿದ್ದ ಕಾರಣ ನಟಿ ಅವರನ್ನು ವಿವಾಹವಾದರು ಎಂದು ಹೇಳಿದ ಟ್ರೋಲ್‌ಗಳಿಗೆ ಶಿಲ್ಪಾ ಶೆಟ್ಟಿ ತಿರುಗೇಟು ನೀಡಿದ್ದಾರೆ.

PREV
110
'ರಾಜ್‌ಗಿಂತ ಶ್ರೀಮಂತರು ನನ್ನ ಹಿಂದೆ..' ಹಣಕ್ಕಾಗಿ ರಾಜ್ ಕುಂದ್ರಾ ಮದುವೆಯಾದ್ರು ಅನ್ನೋರಿಗೆ ತಿರುಗೇಟು ಕೊಟ್ಟ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಬಾಲಿವುಡ್‌ನ ಖ್ಯಾತ ಜೋಡಿ. ಇವರಿಬ್ಬರು 2009ರಲ್ಲಿ ವಿವಾಹವಾದರು ಮತ್ತು ಇವರಿಗೆ ವಿಯಾನ್ ರಾಜ್ ಕುಂದ್ರಾ ಮತ್ತು ಸಮೀಶಾ ಶೆಟ್ಟಿ ಕುಂದ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ. 

210

2021ರಲ್ಲಿ  ರಾಜ್ ಅವರನ್ನು ವಯಸ್ಕ ಚಲನಚಿತ್ರ ದಂಧೆ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಜೈಲು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. ಅದೇ ವರ್ಷ ಉದ್ಯಮಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಸಮಯದಲ್ಲಿ ಶಿಲ್ಪಾ ಜಗತ್ತು ತಲೆಕೆಳಗಾಗಿ ತಿರುಗಿತ್ತು. ಆದರೆ, ಶಿಲ್ಪಾ ಎಂದಿಗೂ ಪತಿಯನ್ನು ಬಿಟ್ಟು ಕೊಡಲಿಲ್ಲ. ರಾಜ್ ಪಕ್ಕದಲ್ಲಿ ಬಲವಾದ ಸ್ತಂಭದಂತೆ ನಿಂತರು. 

310

ರಾಜ್ ಕುಂದ್ರಾ ಅವರನ್ನು ಹಣಕ್ಕಾಗಿ ಮದುವೆಯಾದರೇ?
ಜೂಮ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಅವರನ್ನು ಮದುವೆಯಾದ ಕಾರಣದ ಬಗ್ಗೆ ಮಾತನಾಡಿದ್ದಾರೆ ಮತ್ತು ಹಣಕ್ಕಾಗಿ ಉದ್ಯಮಿಯನ್ನು ಮದುವೆಯಾದರು ಎಂದು ಹೇಳಿದ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ.

410

'ರಾಜ್ ಅವರನ್ನು ವಿವಾಹವಾದಾಗ, ಗೂಗಲ್ ಪ್ರಕಾರ, ಅವರು 108ನೇ ಶ್ರೀಮಂತ ಅಥವಾ ಕಿರಿಯ ಬ್ರಿಟಿಷ್ ಭಾರತೀಯರಾಗಿದ್ದರು. ಆದರೆ, ರಾಜ್‌ನ ಹಣಕ್ಕಾಗಿ ನಾನು ಮದುವೆಯಾಗಿದ್ದೇನೆ ಎನ್ನುವವರು ನಾನು ಆಗ ಎಷ್ಟು ಶ್ರೀಮಂತೆಯಾಗಿದ್ದೆ ಎಂಬುದನ್ನು ಗೂಗಲ್ ಮಾಡಲು ಮರೆತಿರಬಹುದು. ನಾನು ಆಗಲೂ, ಈಗಲೂ ಶ್ರೀಮಂತೆಯೇ ಆಗಿದ್ದೇನೆ. ಮತ್ತು ನನ್ನ ಎಲ್ಲಾ ಆದಾಯ ತೆರಿಗೆ ಬಿಲ್‌ಗಳು, ಜಿಎಸ್‌ಟಿ ಮತ್ತು ಎಲ್ಲವನ್ನೂ ನಾನು ಪಾವತಿಸುತ್ತೇನೆ' ಎಂದಿದ್ದಾರೆ. 
 

510

ಅದೇ ಸಂದರ್ಶನದಲ್ಲಿ, ಶಿಲ್ಪಾ ಶೆಟ್ಟಿ ತನ್ನ ಸಂಗಾತಿಯ ಆಯ್ಕೆಯಲ್ಲಿ ಹಣವು ಎಂದಿಗೂ ನಿರ್ಧರಿಸುವ ಅಂಶವಲ್ಲ ಎಂದು ಹೇಳಿದರು. ತಾನು ಮದುವೆಯಾಗಲು ನಿರ್ಧರಿಸಿದಾಗ ಅನೇಕ ಶ್ರೀಮಂತರು ತನ್ನನ್ನು ಓಲೈಸುತ್ತಿದ್ದರು ಎಂದು ನಟಿ ಹೇಳಿದ್ದಾರೆ. 

610

'ಆ ಸಮಯದಲ್ಲಿ ಅವನಿಗಿಂತ ಹೆಚ್ಚು ಶ್ರೀಮಂತರು ನನ್ನನ್ನು ಓಲೈಸುತ್ತಿದ್ದರು. ಆದರೆ ಹಣವು ನಿಜವಾಗಿಯೂ ನನ್ನ ಜೀವನದಲ್ಲಿ ಯಾವುದಕ್ಕೂ ನಿರ್ಧರಿಸುವ ಅಂಶವಾಗಿರಲಿಲ್ಲ,' ಎಂದು ಶಿಲ್ಪಾ ಹೇಳಿದ್ದಾರೆ.

710

'ಸುಖಿ' ಚಿತ್ರದ ನಟನೆಗೆ ರಾಜ್ ಕಾರಣ
ಶಿಲ್ಪಾ ಶೆಟ್ಟಿ ಅವರು ಕಳೆದ ವರ್ಷ 'ಸುಖೀ' ಚಿತ್ರದ ಮೂಲಕ ಶೋಬಿಜ್‌ಗೆ ಮರಳಿದರು. ಆದರೆ, ಮೊದಲಿಗೆ ಕೆಲವು ನಿರ್ದಿಷ್ಟ ಕಾರಣಗಳಿಂದ ದಿವಾ ಚಿತ್ರಕ್ಕೆ 'ನೋ' ಅಂದಿದ್ದರು.

 

810

ಒಂದು ದಿನ, ಆಕೆ ಮನೆಯಲ್ಲಿಲ್ಲದಾಗ, ರಾಜ್ ಸ್ಕ್ರಿಪ್ಟ್ ಅನ್ನು ಓದಿ ವಿಸ್ಮಯಗೊಂಡಿದ್ದನ್ನು ಹಂಚಿಕೊಂಡಿರುವ ನಟಿ, ಪತಿಯ ಓಲೈಕೆಯಿಂದಾಗಿ ತಾನು ಈ ಚಿತ್ರದಲ್ಲಿ ನಟಿಸಿದೆ ಎಂದಿದ್ದಾರೆ. 

910

ರಾಜ್ ಚಿತ್ರಕ್ಕೆ ಶಿಲ್ಪಾ ಪ್ರತಿಕ್ರಿಯೆ
2023ರಲ್ಲಿ ರಾಜ್ ಕುಂದ್ರಾ ಅವರ UT69 ಚಿತ್ರ ಬಿಡುಗಡೆಯಾಯಿತು. ಇದು ಅವರ 63 ದಿನಗಳ ಜೈಲು ವಾಸದ ಕಥಾಹಂದರವನ್ನು ಒಳಗೊಂಡಿದೆ.

1010
Valentine Day

ಶಿಲ್ಪಾ ಆರಂಭದಲ್ಲಿ ಈ ಚಿತ್ರ ಮಾಡುವ ಬಗ್ಗೆ ಬಹಳ ಭಯ ಪಡುತ್ತಿದ್ದರಂತೆ. ಆದರೆ, ಸ್ಕ್ರಿಪ್ಟ್ ಕೇಳಿದ ನಂತರ, ಶಿಲ್ಪಾ ಅವರನ್ನು ಉದ್ದಕ್ಕೂ ಬೆಂಬಲಿಸಿದರು ಎಂದು ರಾಜ್ ಹೇಳಿದ್ದಾರೆ. 
 

Read more Photos on
click me!

Recommended Stories