ಈ ಸಮಯದಲ್ಲಿ, ಅವರು ಅಲ್ಲಿನ ಹುಡುಗಿಯರಿಗಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದರು. ಮುಂಬೈನ ಕಾಮಟಿಪುರ ರೆಡ್ ಲೈಟ್ ಏರಿಯಾದಲ್ಲಿ (Red Light Area) ಗಂಗೂಬಾಯಿ ಹಲವಾರು ಕೋಠಗಳನ್ನು ನಡೆಸುತ್ತಿದ್ದರು ಮತ್ತು ಯಾವುದೇ ಹುಡುಗಿಯ ಒಪ್ಪಿಗೆಯಿಲ್ಲದೇ ಗಂಗೂಬಾಯಿ ಅವಳನ್ನು ತನ್ನ ಕೋಣೆಯಲ್ಲಿ ಇರಿಸಲಿಲ್ಲ ಎಂದು ಹೇಳಲಾಗುತ್ತದೆ. ವೇಶ್ಯೆಯರನ್ನು ಸಶಕ್ತಗೊಳಿಸಲು ಮತ್ತು ಸಬಲಗೊಳಿಸಲು ಗಂಗೂಬಾಯಿ ತನ್ನ ಪವರ್ ಬಳಸುತ್ತಿದ್ದಳು.