ಈ ದಿನಗಳಲ್ಲಿ ಆಲಿಯಾ ಭಟ್ (Alia Bhatt) ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು (National Award) ಪಡೆದ ನಟಿ ಖುಷಿಯಲ್ಲಿ ತೇಲುತ್ತಿದ್ದಾರೆ. ಇದೇ ಖುಷಿಯಲ್ಲಿ ಅವರು ತಮಗೆ ಬಾರೀ ದುಬಾರಿ ಕಾರನ್ನು ಗಿಫ್ಟ್ ಮಾಡಿಕೊಂಡಿದ್ದಾರೆ. ಆ ಕಾರು ಬೆಲೆ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ.
ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ 'ಗಂಗೂಬಾಯಿ ಕಥಿಯಾವಾಡಿ' ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿ ಪಡೆದ ನಂತರ ಅವರ ಸಂತೋಷಕ್ಕೆ ಮಿತಿಯೇ ಇಲ್ಲ.
210
ಆಲಿಯಾ ಸ್ವರ್ಣ ಕಮಲ ಪುರಸ್ಕಾರ ಪಡೆದ ಸಂದರ್ಭದಲ್ಲಿ ಮತ್ತು ನವರಾತ್ರಿಯ ಶುಭ ಗಳಿಗೆಯಲ್ಲಿ ತನಗೆ ತಾನೇ ಬಾರೀ ಮೊತ್ತದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
310
ಇದೀಗ ಇತ್ತೀಚೆಗೆ ಈ ಐಷಾರಾಮಿ ಕಾರಿನ ವಿಡಿಯೋ ಕೂಡ ಹೊರ ಬಿದ್ದಿದ್ದು, ಅದನ್ನು ಪಾಪರಾಜಿ ಖಾತೆ ಶೇರ್ ಮಾಡಿದೆ. ಅಷ್ಷಕ್ಕೂ ಆಲಿಯಾ ಅವರ ಕಾರಿನ ಬೆಲೆ ಎಷ್ಷು ಗೊತ್ತಾ?
410
ವೈರಲ್ ಆಗಿರುವ ವೀಡಿಯೊದಲ್ಲಿ, ಆಲಿಯಾ ಭಟ್ ಅವರ ಹೊಸ ಐಷರಾಮಿ ಕಪ್ಪು ಬಣ್ಣದ ಕಾರಿನ ಮೇಲೆ ಹೂವಿನ ಹಾರವನ್ನು ಹಾಕಲಾಗಿದೆ.
510
ಮಾಧ್ಯಮ ವರದಿಗಳ ಪ್ರಕಾರ, ಆಲಿಯಾ ರೇಂಜ್ ರೋವರ್ ಆಟೋಬಯೋಗ್ರಫಿ ಲಾಂಗ್ ವೀಲ್ ಬೇಸ್ ಅನ್ನು ಖರೀದಿಸಿದ್ದಾರೆ, ಇದರ ಬೆಲೆ 3.81 ಕೋಟಿ ರೂ ಎನ್ನಲಾಗಿದೆ.
610
ಇದೀಗ ಈ ಕಾರಿನ ಬೆಲೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದು ಹಲವು ವರ್ಷಗಳ ಅನೇಕ ಜನರ ಸಂಬಳ ಎಂದು ಬಳಕೆದಾರರು ಹೇಳುತ್ತಾರೆ.
710
ಇದೇ ಆಲಿಯಾ ಭಟ್ ಅವರ ಮೊದಲ ಕಾರಲ್ಲ. ನಟಿ ಇದರ ಹೊರತಾಗಿ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 2.5 ಕೋಟಿ ರೂ. ರೇಂಜ್ ರೋವರ್ ವೋಗ್ ಮತ್ತು 1.38 ಕೋಟಿ ರೂ. ಬೆಲೆಯ BMW 7 ಸರಣಿ 730D,
810
ಮೂರನೆಯದ್ದ Audi A6, ಇದರ ಬೆಲೆ ಸುಮಾರು 60 ಲಕ್ಷ ರೂ. ಆಲಿಯಾ ಅವರ ನೆಚ್ಚಿನ ಕಾರುಗಳ ಪಟ್ಟಿಯಲ್ಲಿ ಆಡಿಯ ಎಸ್‌ಯುವಿ ಕ್ಯೂ7 ಕೂಡ ಸೇರಿದೆ, ಇದರ ಬೆಲೆ ಸುಮಾರು 1 ಕೋಟಿ ರೂ ಎಂದು ಹೇಳಲಾಗಿದೆ.
910
ಆಲಿಯಾ ಇತ್ತೀಚೆಗೆ ತಮ್ಮ ವೃತ್ತಿ ಜೀವನದ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಸಂದರ್ಭದಲ್ಲಿ ಅವರ ಪತಿ ರಣಬೀರ್ ಕಪೂರ್ ಕೂಡ ಆಲಿಯಾಗೆ ಬೆಂಬಲ ಸಮಾರಂಭದಲ್ಲಿ ಹಾಜರಾಗಿದ್ದರು.
1010
ಈ ಪ್ರಶಸ್ತಿ ಸ್ವೀಕರಿಸಿದ ನಂತರ ಆಲಿಯಾಗೆ ಗಂಗೂಬಾಯಿ ಕಾಠಿವಾಡಿಯಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರು ನನ್ನನ್ನು ಎಷ್ಟರಮಟ್ಟಿಗೆ ಸುಧಾರಿಸಿದರೆಂದರೆ ಇಂದು ರಾಷ್ಟ್ರಪ್ರಶಸ್ತಿ ಗಳಿಸಲು ಸಾಧ್ಯವಾಯಿತು ಎಂದೂ ಹೇಳಿದ್ದಾರೆ.