ಒಂದೇ ಡಿಸೈನರ್ ಡ್ರೆಸ್ಸಲ್ಲಿ ಬಾಲಿವುಡ್ ನಟಿಯರ ಪ್ರೆಗ್ನೆನ್ಸಿ ರಿವೀಲ್: ಏನೀದರ ಗುಟ್ಟು?

First Published | Jun 28, 2022, 4:08 PM IST

ಪ್ರೆಗ್ನೆನ್ಸಿ ರಿವೀಲ್ ಮಾಡುವಾಗ ಒಂದೇ ಡಿಸೈನರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಬಾಲಿವುಡ್ ನಟಿಯರು. ಏನಿದರ ಗುಟ್ಟು?

ಬಾಲಿವುಡ್ ಸ್ಟಾರ್ ನಟ-ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಂತೆ ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಾರೆ ಅನ್ನೋದು ಬಿಗ್ ಗಾಸಿಪ್. ಏಕೆಂದರೆ ಕೆಲವರು ಮದುವೆಯಾದ ಮೂರ್ನಾಲ್ಕು ತಿಂಗಳಿಗೆ ಹೊಸ ಮಗುವಿನ ಎಂಟ್ರಿ ಬಗ್ಗೆ ಸುಳಿವು ಕೊಡುತ್ತಾರೆ. ಅದರ ಬೆನ್ನಲೆ ಗಾಸಿಪ್ ಕ್ರಿಯೇಟ್ ಆಗುತ್ತದೆ.

ನಟಿ ಅನುಷ್ಕಾ ಶರ್ಮಾ Polka dotted ಡ್ರೆಸ್‌ ಧರಿಸಿ ಪ್ರೆಗ್ನೆನ್ಸಿ ರಿವೀಲ್ ಮಾಡಿದ್ದೇ ಮಾಡಿದ್ದು..ಎಲ್ಲರೂ ಅದೇ ರೀತಿಯ ಡ್ರೆಸ್‌ ಧರಿಸಿ ಪ್ರೆಗ್ನೆನ್ಸಿ ರಿವೀಲ್ ಮಾಡುತ್ತಿದ್ದಾರೆ.

Tap to resize

 ಅನುಷ್ಕಾ ಶರ್ಮಾ ನಂತರ ಹಾರ್ದಿಕ ಪಾಂಡ್ಯ ಪತ್ನಿ, ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್, ಕರೀನಾ ಕಪೂರ್ ಸೇರಿಂದಂತೆ ಅನೇಕರು ಪೋಲ್ಕಾ ಡ್ರೆಸ್‌ನಲ್ಲಿ ಮಿಂಚಿದ್ದಾರೆ. 

ಈ ಡ್ರೆಸ್ ಟ್ರೆಂಡ್‌ನಲ್ಲಿರುವ ಕಾರಣ ನೆಟ್ಟಿಗರಿಗೆ ನಯನತಾರಾ, ದೀಪಿಕಾ ಪಡುಕೋಣೆ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಕೆಲವರು ಇದು ಬ್ರ್ಯಾಂಡ್ ಮಾರ್ಕೆಟಿಂಗ್ ಎನ್ನುತ್ತಾರೆ.

ಪೋಲ್ಕಾ ಡಾಟ್ ಡ್ರೆಸ್ ಧರಿಸಿದ್ದರೆ ಸಣ್ಣ ಕಾಣಬಹುದು ಅಥವಾ ಹೊಟ್ಟೆ ಕಾಣಿಸುವುದಿಲ್ಲ ಎನ್ನುವ ಉದ್ದೇಶದಿಂದ ಈ ಡಿಸೈನ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಫ್ಯಾಷನ್ ಡಿಸೈನರ್‌ಗಳು ಹೇಳುತ್ತಾರೆ.  

ಪೋಲ್ಕಾ ಡಾಟ್ ಡ್ರೆಸ್ ಫಾರ್ ಎವರ್ ಟ್ರೆಂಡ್‌ನಲ್ಲಿರುತ್ತದೆ. ಯಾರೇ ಧರಿಸಿದ್ದರೂ ಎರಡು -ಮೂರು ವರ್ಷ ಚಿಕ್ಕವರಂತೆ ಕಾಣಿಸುತ್ತಾರೆ. ಅಲ್ಲದೆ ಸಮರ್‌ ವೆಕೇಷನ್‌ಗೆ ಈ ಡ್ರೆಸ್‌ನ ಬಹುತೇಕರು ಅಯ್ಕೆ ಮಾಡಿಕೊಳ್ಳುತ್ತಾರೆ.

ಮಗು ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲಿರುವ ದೀಪಿಕಾ ಪಡುಕೋಣೆ ಮತ್ತು ಈಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಯನತಾರಾ ಇದೇ ಡಿಸೈನ್ ಆಯ್ಕೆ ಮಾಡಿಕೊಂಡರೆ ಖಂಡಿತಾ ಏನೋ ಗುಟ್ಟಿದೆ. 

Latest Videos

click me!