ಅಕ್ಷಯ್ ಕುಮಾರ್ ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಹಲವು ದೊಡ್ಡ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ತಮ್ಮ ಶೈಕ್ಷಣಿಕ ಮತ್ತು ಮುಂಬೈನಲ್ಲಿನ ಹೋರಾಟದ ಕಥೆಯ ಬಗ್ಗೆ ಮಾತನಾಡಿದ್ದಾರೆ. ನಟನಾಗುವ ಬಗ್ಗೆ ಯಾವಾಗ ಯೋಚಿಸಿದರು, ಹೀರೋ ಆಗಬಹುದು ಎಂದು ಯಾವಾಗ ಅನಿಸಿತು ಎಂಬುದನ್ನು ಹೇಳಿದ್ದಾರೆ.
ಜಾಲಿ ಎಲ್‌ಎಲ್‌ಬಿ 3 ನಟ ಅಕ್ಷಯ್ ಕುಮಾರ್ ಇತ್ತೀಚೆಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮಕ್ಕೆ ಬಂದಿದ್ದರು. ಇಲ್ಲಿ ಅವರು ತಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ತಾವು ಏಳನೇ ತರಗತಿಯಲ್ಲಿ ಫೇಲ್ ಆಗಿದ್ದಾಗಿ ಖಿಲಾಡಿ ಕುಮಾರ್ ಹೇಳಿದರು. ಆಗ ಪ್ರೇಕ್ಷಕರಿಂದ ಓಹ್... ಎಂಬ ಶಬ್ದ ಬಂತು. ಇದಕ್ಕೆ ನಟ, ಇದರಲ್ಲಿ ಆಶ್ಚರ್ಯಪಡುವಂಥದ್ದೇನಿದೆ? ಫೇಲ್ ಆದ್ರೆ ಆದೆ, ಇದೇನು ಸಾಯೋ ಬದುಕೋ ಪ್ರಶ್ನೆಯಲ್ಲ ಎಂದರು.
26
ಅಕ್ಷಯ್‌ಗೆ ತಂದೆಯಿಂದ ಬಿತ್ತು ಜೋರು ಪೆಟ್ಟು
ಈ ರಿಸಲ್ಟ್ ನಂತರ ಅಪ್ಪ ಮೂರ್ನಾಲ್ಕು ಬಾರಿಸಿದರು, ಇಡೀ ದೇಹವೇ ಅಲುಗಾಡಿತ್ತು ಎಂದು ಅಕ್ಷಯ್ ಒಪ್ಪಿಕೊಂಡರು. ಆಗ ಅವರು, 'ನೀನು ಏನು ಮಾಡಲು ಬಯಸುತ್ತೀಯಾ? ಏನಾಗಬೇಕು?' ಎಂದು ಕೇಳಿದ್ದರು. 'ನಾನು ಹೀರೋ ಆಗಬೇಕು' ಎಂದು ಹೇಳಬೇಕೆಂದು ಮನಸ್ಸಿಗೆ ಬಂತು. ಹೀರೋ ಆಗಬೇಕೆಂಬ ಆಲೋಚನೆ ಬಂದಿದ್ದು ಅದೇ ಮೊದಲ ಬಾರಿ.
36
ಸ್ಟುಡಿಯೋದಲ್ಲಿ ಲೈಟ್ ಸೆಟ್ ಮಾಡುತ್ತಿದ್ದ ಕುಮಾರ್
ಮುಂಬೈನಲ್ಲಿನ ತಮ್ಮ ಹೋರಾಟದ ಬಗ್ಗೆ ಹೇಳಿದ ಅಕ್ಷಯ್, ಜಯ್ ಸೇಠ್ ಎಂಬ ಫೋಟೋಗ್ರಾಫರ್‌ಗೆ ಸಹಾಯಕರಾಗಿದ್ದರು. ಸ್ಟುಡಿಯೋದಲ್ಲಿ ಲೈಟ್ ಫಿಕ್ಸ್ ಮಾಡುತ್ತಿದ್ದರು. ಹೀರೋಗಳ ಮುಖದ ಮೇಲೆ ಲೈಟ್ ಫೋಕಸ್ ಮಾಡುವುದು ಅವರ ಕೆಲಸವಾಗಿತ್ತು. ಈ ಸ್ಟುಡಿಯೋಗೆ ಅನಿಲ್ ಕಪೂರ್, ಜಾಕಿ ಶ್ರಾಫ್ ಅವರಂತಹ ಅನೇಕ ಸ್ಟಾರ್‌ಗಳು ಬರುತ್ತಿದ್ದರು.
ಅಕ್ಷಯ್ ಕುಮಾರ್‌ಗೆ ಹೀರೋ ಆಗಲು ಸಲಹೆ ನೀಡಿದ ಸೂಪರ್‌ಸ್ಟಾರ್ ಯಾರು?
ಒಮ್ಮೆ ಗೋವಿಂದ ಬಂದರು. ನಾನು ಅವರಿಗಾಗಿ ಲೈಟ್ ಸೆಟ್ ಮಾಡುತ್ತಿದ್ದೆ. ಒಂದು ದಿನ ಗೋವಿಂದ ಅವರು, 'ನೀನು ನೋಡಲು ಚೆನ್ನಾಗಿದ್ದೀಯ, ಹೈಟ್ ಕೂಡ ಚೆನ್ನಾಗಿದೆ, ಹೀರೋ ಆಗು' ಎಂದರು. ಅವರ ಮಾತಿನ ನಂತರ, ನಾನೂ ಹೀರೋ ಆಗಬಹುದು ಎಂದು ಮೊದಲ ಬಾರಿಗೆ ಅನಿಸಿತು. ಅಷ್ಟು ದೊಡ್ಡ ಸೂಪರ್‌ಸ್ಟಾರ್ ಸುಮ್ಮನೆ ಹೇಳುವುದಿಲ್ಲ ಎಂದುಕೊಂಡೆ.
56
ಅದೃಷ್ಟದಿಂದ ಫಿಲ್ಮ್ ಸ್ಟುಡಿಯೋ ತಲುಪಿದರು
ಒಂದು ಮಾಡೆಲಿಂಗ್ ಶೋನಲ್ಲಿ ಭಾಗವಹಿಸಲು ಫ್ಲೈಟ್ ಹಿಡಿಯಬೇಕಿತ್ತು, ಆದರೆ ಏರ್‌ಪೋರ್ಟ್‌ಗೆ ತಡವಾಗಿ ತಲುಪಿದ್ದೆ. ಎಂಟ್ರಿ ಸಿಗಲಿಲ್ಲ. ನಿರಾಶೆಯಿಂದ ಹಿಂತಿರುಗುವಾಗ, ದಾರಿಯಲ್ಲಿ ನಟರಾಜ್ ಸ್ಟುಡಿಯೋದಲ್ಲಿ ನಿಂತೆ ಎಂದು ಅಕ್ಷಯ್ ಇದೇ ಶೋನಲ್ಲಿ ಹೇಳಿದರು.
66
ಫ್ಲೈಟ್ ಮಿಸ್ ಆಯ್ತು, ಹೀರೋ ಆದ್ರು
ನಟರಾಜ್ ಸ್ಟುಡಿಯೋದಲ್ಲಿ ಮೇಕಪ್‌ಮ್ಯಾನ್ ನರೇಂದ್ರ ದಾದಾ, 'ಹೀರೋ ಆಗ್ಬೇಕಾ?' ಎಂದು ಕೇಳಿದರು. ನಾನು ಹೌದು ಎಂದೆ. ಅವರು ಫೋಟೋ ತೆಗೆದುಕೊಂಡು ಒಳಗೆ ಹೋದರು. ಹೊರಬಂದಾಗ ಐದು ಸಾವಿರ ಸೈನಿಂಗ್ ಅಮೌಂಟ್ ಇತ್ತು. ಆಗ ಸಂಜೆ 6 ಗಂಟೆಯಾಗಿತ್ತು. ಅದು ನನ್ನ ಫ್ಲೈಟ್‌ನ ಸಮಯವಾಗಿತ್ತು. ಫ್ಲೈಟ್ ಮಿಸ್ ಆದ ಕಾರಣ ನಾನು ಹೀರೋ ಆದೆ ಎನ್ನಬಹುದು.