ಹಾಲಿವುಡ್ ಸ್ಟಾರ್ ಜೊತೆ One Night Stand…. ಆತನಿಗಾಗಿ ಏನು ಬೇಕಾದ್ರು ಮಾಡ್ತೀನಿ ಎಂದ ಅಮೀಷಾ ಪಟೇಲ್

Published : Sep 26, 2025, 03:23 PM IST

ಬಾಲಿವುಡ್ ನಲ್ಲಿ ಕಹೋನಾ ಪ್ಯಾರ್ ಹೇ, ಗದಾರ್ ನಂತಹ ಹಿಟ್ ಚಿತ್ರಗಳನ್ನು ನೀಡಿರುವ ನಟಿ ಅಮೀಷಾ ಪಟೇಲ್ ತಮಗೆ ಹಾಲಿವುಡ್ ನಟ ಟಾಮ್ ಕ್ರೂಸ್ ಮೇಲೆ ಕ್ರಶ್ ಇರೋದಾಗಿಯೂ, ಅವರಿಗಾಗಿ ಏನು ಬೇಕಾದರೂ ಮಾಡೋದಕ್ಕೆ ಸಿದ್ಧ ಎಂದು ಸಹ ಹೇಳಿದ್ದಾರೆ.

PREV
16
ಬಾಲಿವುಡ್ ನಟಿ ಅಮೀಷಾ ಪಟೇಲ್

ಬಾಲಿವುಡ್ ನಟಿ ಅಮೀಷಾ ಪಟೇಲ್ (Ameesha Patel) ಇತ್ತೀಚೆಗೆ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ . ಇತ್ತೀಚಿಗೆ ಅಮೀಷಾ ಪಟೇಲ್ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ನಟಿ ತಮ್ಮ ವೈಯಕ್ತಿಕ ಜೀವನ, ಮದುವೆಯಾಗದಿರುವುದು, ಮಿಷನ್ ಇಂಪಾಸಿಬಲ್ ನಟ ಟಾಮ್ ಕ್ರೂಸ್ ಮೇಲೆ ಸೆಲೆಬ್ರಿಟಿ ಕ್ರಷ್ ಹೊಂದಿರುವವರೆಗೆ ಹಲವು ವಿಷಯಗಳನ್ನು ತೆರೆದಿಟ್ಟರು.

26
'ಟಾಮ್ ಕ್ರೂಸ್' ಮೇಲೆ ಕ್ರಶ್

ರಣವೀರ್ ಅಲ್ಲಾಬಾಡಿಯಾಗೆ, ಸೆಲೆಬ್ರಿಟಿ ಕ್ರಶ್ (celebrity crush) ಬಗ್ಗೆ, ಅಮೀಷಾ ಪಟೇಲ್ ಅವರನ್ನು ಕೇಳಿದಾಗ, "ನನಗೆ ಟಾಮ್ ಕ್ರೂಸ್ ಮೇಲೆ ಕ್ರಶ್ ಇದೆ. ನೀವು ಅವರೊಂದಿಗೆ ಪಾಡ್‌ಕ್ಯಾಸ್ಟ್ ಮಾಡುವ ಪ್ಲ್ಯಾನ್ ಇದ್ದರೆ, ದಯವಿಟ್ಟು ನನ್ನನ್ನು ಆಹ್ವಾನಿಸಿ. ನಾನು ಬಾಲ್ಯದಿಂದಲೂ ಟಾಮ್ ಕ್ರೂಸ್ ಅವರನ್ನು ಇಷ್ಟಪಡುತ್ತೇನೆ ಎಂದರು.

36
ಒನ್ ನೈಟ್ ಸ್ಟಾಂಡ್ ಗೂ ನಾನು ರೆಡಿ

ಅಷ್ಟೇ ಅಲ್ಲ ನನ್ನ ಪೆನ್ಸಿಲ್ ಬಾಕ್ಸ್‌ನಲ್ಲಿ ಅವರ ಚಿತ್ರವಿತ್ತು. ನನ್ನ ಫೈಲ್‌ಗಳಲ್ಲಿ ಅವರ ಚಿತ್ರವಿತ್ತು. ನನ್ನ ಕೋಣೆಯಲ್ಲಿ ನನ್ನ ಬಳಿ ಇದ್ದ ಏಕೈಕ ಪೋಸ್ಟರ್ ಅಂದ್ರೆ ಟಾಮ್ ಕ್ರೂಸ್ (Tom Cruise) ಅವರದ್ದು. ಅವರು ನನ್ನ ಫಾರೆವರ್ ಕ್ರಶ್. ನನ್ನ ತತ್ವಗಳನ್ನು ಬದಿಗಿಡೋದು ನಾನು ಕೇವಲ ಅವರಿಗಾಗಿ ಮಾತ್ರ. ನಾನು ಅವರಿಗಾಗಿ ಏನು ಬೇಕಾದರೂ ಮಾಡಲು ರೆಡಿ. ಅವರೊಂದಿಗೆ ಒನ್ ನೈಟ್ ಸ್ಟಾಂಡ್ ಗೂ ನಾನು ರೆಡಿ ಎಂದಿದ್ದಾರೆ ಅಮೀಷಾ.

46
50ನೇ ವಯಸ್ಸಿನಲ್ಲೂ ಅಮೀಷಾ ಪಟೇಲ್ ಸಿಂಗಲ್

"ನಾನು ಶಾಲೆಯಲ್ಲಿ ಹುಡುಗರನ್ನು ಬೆನ್ನಟ್ಟುತ್ತಿರಲಿಲ್ಲ; ಆದರೆ ಅವರು ನನ್ನ ಹಿಂದೆ ಬೀಳುತ್ತಿದ್ದರು. ಅಂದಿನಿಂದ ನನಗೆ ಬಹಳಷ್ಟು ಪ್ರಪೋಸಲ್‌ಗಳು (porposals) ಬಂದಿವೆ, ಮತ್ತು ಅವು ಇಂದಿಗೂ ಬರುತ್ತಲೇ ಇವೆ. ಆದರೆ ನಾನು ಭೇಟಿಯಾದ ಅನೇಕ ಜನರು ಮದುವೆಯ ನಂತರ ನಾನು ಮನೆಯಲ್ಲಿಯೇ ಇರಬೇಕೆಂದು ಮತ್ತು ಕೆಲಸ ಮಾಡಬಾರದೆಂದು ಬಯಸಿದ್ದರು, ಮತ್ತು ಅದು ನನಗೆ ಸರಿ ಅನಿಸಿಲ್ಲ ಎಂದಿದ್ದಾರೆ ಅಮೀಷಾ ಪಟೇಲ್ .

56
ನಾನು ಮೊದಲು ಅಮೀಷಾ ಪಟೇಲ್ ಆಗಬೇಕು

ನಾನು ಮೊದಲು ಅಮೀಷಾ ಪಟೇಲ್ ಆಗಲು ಬಯಸಿದ್ದೆ, ಏಕೆಂದರೆ ನಾನು ನನ್ನ ಜೀವನದ ಬಹುಭಾಗವನ್ನು ಈಗಾಗಲೇ ಯಾರೊಬ್ಬರ ಮಗಳಾಗಿ ಕಳೆದಿದ್ದೇನೆ ಮತ್ತು ನನ್ನ ಪ್ರೌಢಾವಸ್ಥೆಯನ್ನು ಯಾರೊಬ್ಬರ ಹೆಂಡತಿಯಾಗಿ ಕಳೆಯಲು ನನಗೆ ಇಷ್ಟ ಇಲ್ಲ. ನಾನು ನಾನಾಗಿರಬೇಕು ಎಂದು ಹೇಳಿದ್ದಾರೆ ಅಮೀಷಾ.

66
ಯೋಗ್ಯ ವ್ಯಕ್ತಿ ಸಿಕ್ಕರೆ ಮದುವೆಗೆ ಸಿದ್ಧ

"ನನಗೆ ಯೋಗ್ಯ ವ್ಯಕ್ತಿ ಸಿಕ್ಕರೆ ಮಾತ್ರ ನಾನು ಮದುವೆಗೆ ಸಿದ್ಧ. ನನಗೆ ಇನ್ನೂ ಅನೇಕ ಶ್ರೀಮಂತ ಕುಟುಂಬಗಳಿಂದ ಪ್ರಪೋಸಲ್ ಗಳು ಬರುತ್ತಿವೆ. ನನ್ನ ಅರ್ಧದಷ್ಟು ವಯಸ್ಸಿನ ಜನರು ನನ್ನನ್ನು ಡೇಟ್‌ಗೆ ಕರೆದೊಯ್ಯಲು ಬಯಸುತ್ತಾರ. ನಾನು ಅದಕ್ಕೆ ರೆಡಿ ಇದ್ದೇನೆ. ಯಾಕಂದ್ರೆ ಒಬ್ಬ ಪುರುಷ ಮಾನಸಿಕವಾಗಿ ಪ್ರಬುದ್ಧನಾಗಿರಬೇಕು. ನನಗಿಂತ ಹಿರಿಯರಾಗಿದ್ರೂ ಐಕ್ಯೂ ಲೆವೆಲ್ ಕಡಿಮೆ ಇರುವ ವ್ಯಕ್ತಿಗಳನ್ನೂ ಸಹ ನಾನು ಭೇಟಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Read more Photos on
click me!

Recommended Stories