Sooryavanshi: ಮೊದಲ ದಿನವೇ ಭರ್ಜರಿ 26 ಕೋಟಿ ಬಾಚಿದ ಅಕ್ಷಯ್ ಸಿನಿಮಾ

Published : Nov 07, 2021, 10:31 AM ISTUpdated : Nov 07, 2021, 10:40 AM IST

Sooryavanshi: ಮೊದಲ ದಿನವೇ ಭರ್ಜರಿ ಗಳಿಕೆ Sooryavanshi box office collection ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸೂರ್ಯವಂಶಿ ಬೆಳ್ಳಿ ಪರದೆಯ ಮೇಲೆ ಅಕ್ಷಯ್-ಕತ್ರೀನಾ ಮೋಡಿ

PREV
19
Sooryavanshi: ಮೊದಲ ದಿನವೇ ಭರ್ಜರಿ 26 ಕೋಟಿ ಬಾಚಿದ ಅಕ್ಷಯ್ ಸಿನಿಮಾ

ದೇಶದ ಹಲವು ಭಾಗಗಳಲ್ಲಿ ಕೊರೋನಾ(COVID19) ಕಾರಣ ಚಿತ್ರಮಂದಿರಗಳಲ್ಲಿ ಶೇ.50 ಸಿಟ್ಟಿಂಗ್‌ಗೆ ಅವಕಾಶವಿರುವ ಹೊರತಾಗಿಯೂ ರೋಹಿತ್ ಶೆಟ್ಟಿ(Rohith Shetty) ಅವರ ಸೂರ್ಯವಂಶಿ(Sooryavanshi) ಥಿಯೇಟರ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಕ್ಷಯ್ ಕುಮಾರ್ (Akshay Kumar)ಕತ್ರೀನಾ ಕೈಫ್ ಜೋಡಿಯ ಪೊಲೀಸ್ ಸಿನಿಮಾ ಸೂರ್ಯವಂಶಿ ಮೊದಲ ದಿನವೇ ಭರ್ಜರಿ 26.29 ಕೋಟಿ ಬಾಚಿಕೊಂಡಿದೆ. ದೇಶಾದ್ಯಂತ ಮೊದಲ ದಿನದ ಪ್ರದರ್ಶನದ ಗಳಿಕೆ ಇದು.

29

ಭಾರತೀಯ ಸಿನಿಮಾ ವಿಮರ್ಶಕ ಹಾಗೂ ಟ್ರೇಡ್ ಅನಾಲಿಸ್ಟ್ ತರಣ್ ಆದರ್ಶ್‌ ಈ ಕುರಿತ ಅಂಕಿ ಅಂಶಗಳನ್ನು ಟ್ವೀಟ್ ಮಾಡಿದ್ದಾರೆ. ವೀಕೆಂಡ್‌ನಲ್ಲಿ ಸಿನಿಮಾ ಇನ್ನಷ್ಟು ಗಳಿಸುವ ಸಾಧ್ಯತೆ ಬಗ್ಗೆ ಅವರು ಸೂಚನೆ ಕೊಟ್ಟಿದ್ದಾರೆ.

39

ಮೊದಲ ದಿನ ಸೂರ್ಯವಂಶಿ ಅಬ್ಬರ. ಎಕ್ಸಲೆಂಟ್ ರೆಕಾರ್ಡ್. ಮಹಾರಾಷ್ಟ್ರದಲ್ಲಿ(Maharastra) ಶೇಕಡ 50 ಸಿಟ್ಟಿಂಗ್ ಇದ್ದರೂ ಎರಡನೇ ದಿನ ಸೂಪರ್ ಸ್ಟ್ರಾಂಗ್. ವೀಕೆಂಡ್‌ನಲ್ಲಿ ಇನ್ನಷ್ಟು ಗಳಿಸೋ ಸಾಧ್ಯತೆ, ಸಿನಿಮಾ ಈಸ್ ಬ್ಯಾಕ್. ಶುಕ್ರವಾರ 26.29 ಕೋಟಿ ಗಳಿಕೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

49

ನ.5ರಂದು ರೋಹಿತ್ ಶೆಟ್ಟಿ ಅವರ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ದೇಶಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುವುದಾಗಿ ರೋಹಿತ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದರು.

59

ಗುರುವಾರ ರಾತ್ರಿಯ ತನಕ ಅಕ್ಷಯ್ ಕುಮಾರ್ ಸಿನಿಮಾಗೆ ಪ್ರೀ ಬುಕ್ಕಿಂಗ್ ಓಪನ್(Pre-booking) ಆಗಿರಲಿಲ್ಲ. ನಿರ್ಮಾಪಕರೊಂದಿಗಿನ ಗೊಂದಲದಿಂದಾಗಿ ಪ್ರೀ ಬುಕ್ಕಿಂಗ್ ನಡೆದಿರಲಿಲ್ಲ.

69

ಮೊದಲವಾರದ ಸಿನಿಮಾ ಗಳಿಕೆಯಲ್ಲಿ ಶೇ.60 ತಮಗೆ ನೀಡಬೇಕು ಹಾಗೂ ಥಿಯೇಟರ್‌ಗಳಲ್ಲಿ ಸೂರ್ಯವಂಶಿ ಗರಿಷ್ಠ ಶೋಗಳನ್ನು ನೀಡಬೇಕೆಂದು ನಿರ್ಮಾಪಕರು ಬೇಡಿಕೆ ಇಟ್ಟಿದ್ದರು. ನಂತರ ನಿರ್ಮಾಪಕರು ಹಾಗೂ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ನಡುವಿನ ಮನಸ್ತಾಪ ಕೊನೆಯಾಗಿದೆ.

79

ಸಿನಿಮಾ ಕಳೆದ ಮಾರ್ಚ್ 24ರಂದು ರಿಲೀಸ್ ಆಗಬೇಕಿತ್ತು. ಸೂರ್ಯವಂಶಿಯಲ್ಲಿ ಅಕ್ಷಯ್ ಜೊತೆ ಕತ್ರೀನಾ ಕೈಫ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅಕ್ಷಯ್ ಡಿಎಸ್‌ಪಿ ಪಾತ್ರ ಮಾಡಿದ್ದಾರೆ.

89

ಕತ್ರೀನಾ ಅಕ್ಷಯ್ ಕುಮಾರ್ ಲವರ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ವಾರ ವಿಶೇಷ ಪಾತ್ರಗಳೂ ಇವೆ

99

ದೀಪಾವಳಿಗೆ ಬಹಳಷ್ಟು ಸಿನಿಮಾಗಳು ರಿಲೀಸ್ ಆಗಿವೆ. ಈಗ ಅಕ್ಷಯ್ ಕುಮಾರ್ ಸಿನಿಮಾ ಕೂಡಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದು ಬಿಗ್‌ಬಜೆಟ್ ಸಿನಿಮಾಗಳು ಮತ್ತೆ ಚಿತ್ರಮಂದಿರಗಳತ್ತ ಬರುತ್ತಿವೆ

Read more Photos on
click me!

Recommended Stories