ಅಕ್ಷಯ್ ಕುಮಾರ್ ಮಗ ಆರವ್ ಫೋಟೋ ವೈರಲ್, ಜೊತೆಯಲ್ಲಿರುವ ಮಿಸ್ಟರಿ ಗರ್ಲ್‌ ಯಾರು?

First Published | Jan 9, 2023, 4:30 PM IST

ಅಕ್ಷಯ್ ಕುಮಾರ್ (Akshay Kumar)ಮತ್ತು ಟ್ವಿಂಕಲ್ ಖನ್ನಾ (Twinkle Khanna) ಅವರ ಪುತ್ರ ಆರವ್ ಭಾಟಿಯಾ (Aarav Bhatia) ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಅವರು ಒಂದು ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಆರವ್ ಜೊತೆಗಿನ ಫೋಟೋಗಳಲ್ಲಿರುವ ಮಿಸ್ಟರಿ ಗರ್ಲ್‌ ಯಾರು?

ಅಕ್ಷಯ್ ಕುಮಾರ್ ಅವರ 20 ವರ್ಷದ ಮಗ ಆರವ್ ನಿಗೂಢ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ವೈರಲ್ ಆಗಿರುವ ಫೋಟೋಗಳನ್ನು ನೋಡಿದ ನಂತರ  ಆರವ್ ಜೊತೆ ಇರುವ ಹುಡುಗಿ ಯಾರೆಂದು ಎಲ್ಲರಲ್ಲಿ ಕುತೂಹಲ ಸೃಷ್ಟಿಯಾಗಿದೆ.

 ಈ ಹುಡುಗಿ ಬೇರೆ ಯಾರೂ ಅಲ್ಲ ಆರವ್ ಅವರ ಚಿಕ್ಕಮ್ಮ ರಿಂಕಿ ಖನ್ನಾ ಅವರ ಮಗಳು ನವೋಮಿಕಾ ಸರನ್ . ನವೋಮಿಕಾ ಶನಿವಾರ ತಮ್ಮ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ದೊಡ್ಡಮ್ಮನ ಮಗ ಆರವ್‌ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದು ಈಗ ವೈರಲ್ ಆಗುತ್ತಿದೆ. 

Tap to resize

ನವೋಮಿಕಾ ಹಂಚಿಕೊಂಡಿರುವ ಸೆಲ್ಫಿಯಲ್ಲಿ ಆರವ್ ಇಂಡಿಗೋ ಶರ್ಟ್ ಮತ್ತು ನೆಕ್ಲೇಸ್ ಧರಿಸಿದ್ದರೆ, ನವೋಮಿಕಾ ಬಿಳಿ ಉಡುಗೆ ಮತ್ತು ಲಾಕೆಟ್ ಧರಿಸಿದ್ದಾರೆ. 

ನವೋಮಿಕಾ ರಿಂಕಿ ಖನ್ನಾ ಮತ್ತು ಸಮೀರ್ ಸರಣ್ ಅವರ  ಮಗಳು. ರಿಂಕಿ ಹಿರಿಯ ನಟರಾದ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಕಿರಿಯ ಮಗಳು. 

ನವೋಮಿಕಾ ಮತ್ತು ಆರವ್ ಒಟ್ಟಿಗೆ ಇರುವ ಮುದ್ದಾದ ಫೋಟೋವನ್ನು ನೋಡಿ ಒಬ್ಬರು ಬರೆದಿದ್ದಾರೆ. 'ಈ ಇಬ್ಬರು ನಟನೆಯನ್ನು ಪ್ರಾರಂಭಿಸಬೇಕೆಂದು ನಾನು ಬಯಸುತ್ತೇನೆ. ಒಟ್ಟಿಗೆ ಆಡುವ ಸೋದರ ಸಂಬಂಧಿಗಳು, ಒಟ್ಟಿಗೆ ಇರಿ ಎಂದು ಇನ್ನೊಬ್ಬರು ಬರೆದಿದ್ದಾರೆ.

ನಿಮ್ಮಿಬ್ಬರಿಗೂ ಸುಂದರವಾದ ಕಣ್ಣುಗಳಿವೆ ಎಂದು ಮತ್ತೊಬ್ಬರು ಬರೆದಿದ್ದಾರೆ.  ಒಬ್ಬ ವ್ಯಕ್ತಿ ಅವನನ್ನು ನನ್ನ ನೆಚ್ಚಿನ ಸಹೋದರ ಮತ್ತು ಸಹೋದರಿ ಎಂದು ಕರೆದರೆ, ಅನೇಕರು ಅವರನ್ನು ಕ್ಯೂಟ್‌ ಎಂದು  ಕಾಮೆಂಟ್‌ ಮಾಡಿದ್ದಾರೆ.

ರಿಂಕಿ ಖನ್ನಾ 1999 ರಲ್ಲಿ ಪ್ಯಾರ್ ಮೇ ಕಭಿ ಕಭಿ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ಜಿಸ್ ದೇಶ್ ಮೇ ಗಂಗಾ ರೆಹತಾ ಹೈ, ಮುಜೆ ಕುಚ್ ಕೆಹನಾ ಹೈ, ಯೇ ಹೈ ಜಲ್ವಾ, ಝಂಕರ್ ಬೀಟ್ಸ್ ಮತ್ತು ಚಮೇಲಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. 
 

ಅಕ್ಕ ಟ್ವಿಂಕಲ್ ಅವರಂತೆ, ರಿಂಕಿ ಸಹ  ಚಲನಚಿತ್ರಗಳನ್ನು ತೊರೆದರು ಮತ್ತು ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.

ಆರವ್ ಭಾಟಿಯಾ ಇತ್ತೀಚೆಗೆ ಲಂಡನ್‌ಗೆ ತೆರಳುವ ಮೊದಲು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರು ಹೊಸ ವರ್ಷದ ರಜಾದಿನಗಳು ಮತ್ತು ಅವರ ತಾಯಿಯ ಹುಟ್ಟುಹಬ್ಬಕ್ಕಾಗಿ ಗೋವಾದಲ್ಲಿ ಟ್ವಿಂಕಲ್, ಅಕ್ಷಯ್ ಮತ್ತು ಸಹೋದರಿ ನಿತಾರಾ ಅವರೊಂದಿಗೆ ಕಾಣಿಸಿಕೊಂಡರು.

ಇತ್ತೀಚಿನ ಸಂದರ್ಶನವೊಂದರಲ್ಲಿ, ಆರವ್ ಅವರ ಭವಿಷ್ಯದ ಯೋಜನೆ ಕುರಿತು ಅಕ್ಷಯ್ ಅವರನ್ನು ಕೇಳಿದಾಗ, ಮಗನಿಗೆ ಚಲನಚಿತ್ರಗಳಲ್ಲಿ ಅಥವಾ ನಟನಾಗಲು ಆಸಕ್ತಿ ಇಲ್ಲ ಎಂದು ಹೇಳಿದರು. 'ನಾನು ಅವನನ್ನು ಈ ಎಲ್ಲದರಲ್ಲೂ ತೊಡಗಿಸಿಕೊಳ್ಳಲಿ ಎಂದು ಬಯಸುತ್ತೇನೆ. ಆದರೆ ಅವನು ಏನನ್ನೂ ನೋಡಲು ಬಯಸುವುದಿಲ್ಲ, ಅವನು ತನ್ನ ಕೆಲಸವನ್ನು ಮಾಡಲು ಬಯಸುತ್ತಾನೆ. ಅವನು ಅಧ್ಯಯನ ಅಥವಾ  ಫ್ಯಾಷನ್ ಡಿಸೈನಿಂಗ್ ಮಾಡಲು ಬಯಸುತ್ತಾನೆ' ಎಂದು ಅಕ್ಷಯ್‌ ಕುಮಾರ್‌ ಹೇಳಿದ್ದರು.

Latest Videos

click me!