Keerthy Suresh; ಸಖತ್ ಹಾಟಾಗಿ ಹೊಸ ವರ್ಷ ಆಚರಿಸಿದ 'ಮಹಾನಟಿ'; ಫ್ಯಾನ್ಸ್ ಹೇಳಿದ್ದೇನು?

Published : Jan 09, 2023, 12:00 PM IST

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಹೊಸ ವರ್ಷವನ್ನು ಮಾಲ್ಡೀವ್ಸ್‌ನಲ್ಲಿ ಸ್ವಾಗತಿಸಿದ್ದಾರೆ. ಫೋಟೋಗಳು ವೈರಲ್ ಆಗಿವೆ.

PREV
17
Keerthy Suresh; ಸಖತ್ ಹಾಟಾಗಿ ಹೊಸ ವರ್ಷ ಆಚರಿಸಿದ 'ಮಹಾನಟಿ'; ಫ್ಯಾನ್ಸ್ ಹೇಳಿದ್ದೇನು?

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಆಗಾಗ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್ ಈ ವರ್ಷ ತೆಲುಗು ಸ್ಟಾರ್ ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ ಸಿನಿಮಾ ಮತ್ತು ಮಲಯಾಳಂನ ವಾಶಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

27

ಸದ್ಯ ಕೀರ್ತಿ ಸುರೇಶ್ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದಾರೆ. 2023ಯನ್ನು ಇಡೀ ಜಗತ್ತು ಅದ್ದೂರಿಯಾಗಿ ಸ್ವಾಗತ ಮಾಡಿದೆ. ಸಿನಿಮಾ ಸೆಲೆಬ್ರಿಟಿಗಳು ಸಹ ಅಷ್ಟೆ ಗ್ರ್ಯಾಂಡ್ ವೆಲ್ ಕಮ್ ಮಾಡಿದ್ದಾರೆ. ಕಾಲಿವುಡ್ ಸುಂದರಿ ಕೀರ್ತಿ ಸುರೇಶ್  ವಿದೇಶದಲ್ಲಿ 2023ಯನ್ನು ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ. 

37

ಅಂದಹಾಗೆ ಕೀರ್ತಿ ಸುರೇಶ್ ಸದ್ಯ ವಿದೇಶಿ ಪ್ರವಾಸದಲ್ಲಿದ್ದಾರೆ. ಥೈಲ್ಯಾಂಡ್‌ಗೆ ಹಾರಿರುವ ಕೀರ್ತಿ ಅಲ್ಲೇ ಅದ್ದೂರಿಯಾಗಿ ಹೊಸ ವರ್ಷ ಆಚರಿಸಿದ್ದಾರೆ. 2022ಗೆ ಗುಡ್ ಬೈ ಹೇಳಿ 2023ಗೆ ಹಾಯ್ ಹೇಳಿರುವ ಸಂಬ್ರಮದ ಒಂದಿಷ್ಟು ಫೋಟೋಗಳನ್ನು ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

47

ಸಮುದ್ರಾ ತೀರದಲ್ಲಿ ಕೀರ್ತಿ ಸಖತ್ ಹಾಟ್ ಆಗಿ ಹೊಸ ವರ್ಷ ಆಚರಿಸಿದ್ದಾರೆ. ಮಹಾನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ಶೇರ್ ಮಾಡಿದ್ದಾರೆ. ಫೋಟೋಗಳಿಗೆ ಕೀರ್ತಿ ಪ್ಯೂರ್ ಬ್ಯೂಟಿ ಎಂದು ಶೇರ್ ಮಾಡಿದ್ದಾರೆ. 

57

ಕೀರ್ತಿ ಸುರೇಶ್ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ನಿಮ್ಮಿಂದ ಈ ರೀತಿಯ ಫೋಟೋಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳುತ್ತಿದ್ದಾರೆ. ಅಂದಹಾಗೆ ಕೀರ್ತಿ ಸದಾ ಸೀರೆ, ಸೆಲ್ವರ್‌ಗಳಲ್ಲಿ ಹೆಚ್ಚಾಗಿ ತಕಾಣಿಸಿಕೊಳ್ಳುತ್ತಾರೆ. ಆದರೆ ಬೀಚ್ ನಲ್ಲಿ ಬಿಕಿನಿ ಧರಿಸಿ ಪೋಸ್ ನೀಡಿದ ಫೋಟೋಗಳಿಗೆ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. 
 

67

ಕೀರ್ತಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹಾನಟಿ ಸಿನಿಮಾ ಬಳಿಕ ಕೀರ್ತಿ ಸುರೇಶ್ ಅವರಿಗೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ.ಹಾಗಂತ ಸಿನಿಮಾ ಅವಕಾಶಗಳು ಕಡಿಮೆಯಾಗಿಲ್ಲ.  ಮತ್ತೊಂದು ದೊಡ್ಡ ಹಿಟ್ ಗಾಗಿ ಕಾಯುತ್ತಿರುವ ಕಾರ್ತಿ ಸದ್ಯ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
 

77

ಅಂದಹಾಗೆ ನಟಿ ಕನ್ನಡದ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ಘೋಷಣೆಯಾಗಿದ್ದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾಗೆ ರಘುನಾಥ ಎಂದು ಟೈಟಲ್ ಇಡಲಾಗಿದೆ.  ಸುಮನ್ ಕುಮಾರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಮಹಿಳಾ ಪ್ರದಾನ ಸಿನಿಮಾವಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories