ಕೇಸರಿ ಈಜುಡುಗೆ ಧರಿಸಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬೋಲ್ಡ್ ಫೋಟೋಶೂಟ್‌ಗೆ ಪೋಸ್‌ ನೀಡಿದ ಮಲ್ಲಿಕಾ ಶೆರಾವತ್‌

Published : Jan 09, 2023, 04:18 PM IST

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ (Mallika Sherawat) ಮತ್ತೊಮ್ಮ ಸದ್ದು ಮಾಡುತ್ತಿದ್ದಾರೆ.ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತನ್ನ ಹಾಲಿಡೇ ಎಂಜಾಯ್‌ ಮಾಡಿದ ನಟಿ, ಜೊತೆಗೆ ಕೆಲವು ಪೂಲ್ ಸಮಯವನ್ನು ಸಹ ಆನಂದಿಸಿದ್ದಾರೆ. ಈ ಸಮಯದಲ್ಲಿನ ಅವರ ಬಿಕಿನಿ ಫೋಟೋಗಳು ಇಂಟರ್‌ನೆಟ್‌ನ  ತಾಪಮಾನವನ್ನು ಹೆಚ್ಚಿಸಿದೆ.

PREV
17
ಕೇಸರಿ  ಈಜುಡುಗೆ ಧರಿಸಿ  ಸ್ವಿಮ್ಮಿಂಗ್ ಪೂಲ್‌ನಲ್ಲಿ ಬೋಲ್ಡ್ ಫೋಟೋಶೂಟ್‌ಗೆ ಪೋಸ್‌ ನೀಡಿದ ಮಲ್ಲಿಕಾ ಶೆರಾವತ್‌

ಮಲ್ಲಿಕಾ ಶೆರಾವತ್‌  ತಮ್ಮ ಇತ್ತೀಚಿನ ಈಜುಡುಗೆಯ ಹಾಟ್‌ ಲುಕ್‌ನಿಂದ ಯುವಕರ ಹೃದಯ ಬಡಿತ ಹೆಚ್ಚಿಸಿದ್ದಾರೆ. ಕೆಲವು ಗಂಟೆಗಳ ಹಿಂದೆ ನಟಿ  ತಮ್ಮ ಇನ್‌ಸ್ಟಾಗ್ರಾಮ್‌ ಹ್ಯಾಂಡಲ್‌ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

27

ಮಲ್ಲಿಕಾ ಸದ್ಯ ಅಂಡಮಾನ್‌ನಲ್ಲಿ ರಜೆ ಕಳೆಯುತ್ತಿದ್ದಾರೆ ಮತ್ತು 'ತಾಜ್' ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬೋಲ್ಡ್ ಫೋಟೋಶೂಟ್ ಮಾಡಿದ್ದಾರೆ. ಈಜುಕೊಳದಲ್ಲಿ ಮಲ್ಲಿಕಾ ಕೇಸರಿ ಬಣ್ಣದ ಬಿಕಿನಿಯಲ್ಲಿ ಪೋಸ್‌ ನೀಡಿದ್ದಾರೆ.

37

ಮಲ್ಲಿಕಾ ಅವರ ಈ ಹಾಟ್ ಲುಕ್ ನೋಡಿ ಅಭಿಮಾನಿಗಳು 'ಮರ್ಡರ್ 4' ಅಥವಾ ಚಿತ್ರನಾ ಎಂದು ಕೇಳಿದ್ದಾರೆ ಮತ್ತು ಕೆಲವು ಕಾಮೆಂಟ್‌ಗಳಲ್ಲಿ ಅವರು 'ಭೀಗೆ ಹೊಟ್ಟೆ ತೇರೆ' ಮತ್ತು  ಹಳೆಯ ಚಿತ್ರದ ಹಾಡನ್ನು ನೆನಪಿಸಿಕೊಂಡಿದ್ದಾರೆ.

47

'ಖ್ವಾಹಿಶ್' ಮತ್ತು 'ಮರ್ಡರ್' ಚಿತ್ರಗಳಿಗೆ ಹೆಸರುವಾಸಿಯಾಗಿರುವ ಮಲ್ಲಿಕಾ ಶೆರಾವತ್ ಬಾಲಿವುಡ್‌ನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಲಿಕಾ ಅವರು ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ 'ಪ್ಯಾರ್ ಕೆ ಸೈಡ್ ಎಫೆಕ್ಟ್ಸ್' ಗಾಗಿ ಸಾಕಷ್ಟು ಮೆಚ್ಚುಗೆ ಸಹ ಗಳಿಸಿದ್ದರು.
 

57

ಇದಲ್ಲದೆ, ಮಲ್ಲಿಕಾ  ಅವರು 'ಆಪ್ ಕಾ ಸುರೂರ್ - ದಿ ರಿಯಲ್ ಲವ್ ಸ್ಟೋರಿ', 'ವೆಲ್‌ಕಮ್' ಮತ್ತು 'ಡಬಲ್ ಧಮಾಲ್' ಸೇರಿದಂತೆ ಕೆಲವು ದೊಡ್ಡ  ಕಮರ್ಷಿಯಲ್‌ ಹಿಟ್‌ಗಳಲ್ಲೂ ನಟಿಸಿದ್ದಾರೆ.

67

ಹಾಲಿವುಡ್‌ನಲ್ಲಿ ತಮ್ಮ ಆದೃಷ್ಟ ಪ್ರಯತ್ನಿಸಿದ ಕೆಲವೇ ಕೆಲವು ಬಾಲಿವುಡ್ ತಾರೆಗಳಲ್ಲಿ ಮಲ್ಲಿಕಾ ಕೂಡ ಒಬ್ಬರು. ಅವರು 'ಹಿಸ್ಸ್' ಮತ್ತು 'ಪಾಲಿಟಿಕ್ಸ್ ಆಫ್ ಲವ್' ಚಿತ್ರಗಳಲ್ಲಿ ಕಾಣಿಸಿಕೊಂಡರು. 

77

ನಟನೆಯ ಹೊರತಾಗಿ ಮಲ್ಲಿಕಾ ಶೆರಾವತ್ ಮಹಿಳಾ ಹಕ್ಕುಗಳ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ  ಮಲ್ಲಿಕಾ ಅವರ ಫೋಟೋಗಳು ಮತ್ತು ಫಿಟ್‌ನೆಸ್ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories