ಪೋಲಿಸ್‌ ಫೌಂಡೇಶನ್‌ಗೆ 2 ಕೋಟಿ ನೀಡಿದ ಬಾಲಿವುಡ್ ಕೊಡುಗೈ ದಾನಿ

First Published Apr 28, 2020, 6:43 PM IST

ಇಡೀ ಜಗತ್ತೇ ಪ್ರಸ್ತುತ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ಬಾಲಿವುಡ್ ಸೆಲಬ್ರೆಟಿಗಳು  ಜನರಿಗೆ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಮೊದಲಿಗರು. ಪಿಎಂ ಕೇರ್ಸ್ ನಿಧಿಗೆ 25 ಕೋಟಿ ಮತ್ತು ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ 3 ಕೋಟಿ ರೂ. ದೇಣಿಗೆ ನೀಡಿರುವ ಅಕ್ಷಯ್ ಕುಮಾರ್ ಮತ್ತೊಮ್ಮೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಅಕ್ಷಯ್ ಕುಮಾರ್ ಈಗ ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ 2 ಕೋಟಿ ದೇಣಿಗೆ ನೀಡಿದ್ದು, ಇದಕ್ಕಾಗಿ ಅವರಿಗೆ ಮುಂಬೈ ಪೊಲೀಸ್ ಆಯುಕ್ತರು ಧನ್ಯವಾದ ಅರ್ಪಿಸಿದ್ದಾರೆ.

ಬಾಲಿವುಡ್‌ನ ಕೊಡುಗೈ ದಾನಿ ಅಕ್ಷಯ್‌ ಕುಮಾರ್.
undefined
ಈಗ ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ 2 ಕೋಟಿ ದೇಣಿಗೆ ನೀಡುವ ಮೂಲಕ ಮತ್ತೆ ಹೃದಯವಂತಿಕೆ ಮೆರೆದಿರುವ ಸ್ಟಾರ್‌ನಟ.
undefined
ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ 2 ಕೋಟಿ ರೂ.ಗಳನ್ನು ಸಂಗ್ರಹಿಸಲು ಸಹಾಯ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
undefined
ನಗರದ ಸುರಕ್ಷತೆಗಾಗಿ ಮೀಸಲಾಗಿರುವ ಮುಂಬೈ ಪೋಲಿಸ್‌ ಮಹಿಳಾ ಮತ್ತು ಪುರುಷ ಸಹಚರರ ಪ್ರಾಣ ಉಳಿಸಲು ನಿಮ್ಮ ಸಹಕಾರವು ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ ಎಂದು ಪೊಲೀಸ್ ಆಯುಕ್ತರ ಅಧಿಕೃತ ಟ್ವಿಟರ್‌ನಲ್ಲಿ ಟ್ವೀಟ್‌ ಮಾಡಿ ಥ್ಯಾಂಕ್ಸ್‌ ಹೇಳಿದ್ದಾರೆ ಈ ನಟನಿಗೆ.
undefined
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 28 ರಂದು ಆರಂಭಿಸಿದಪಿಎಂ ಕೇರ್ಸ್ ಫಂಡ್‌ಗೆ ಅಕ್ಷಯ್ ಕುಮಾರ್ 25 ಕೋಟಿ ದೇಣಿಗೆ ನೀಡಿದ ಮೊದಲ ಬಾಲಿವುಡ್ ನಟ.
undefined
'ಈ ಸಮಯದಲ್ಲಿ, ನಮ್ಮ ಜನರು ಜೀವಂತವಾಗಿರುವುದು ಅತ್ಯಂತ ಮುಖ್ಯವಾದ ವಿಷಯ. ಇದಕ್ಕಾಗಿ ನಾವು ಏನಾದರೂ ಮಾಡಬೇಕಾಗಿದೆ. ನನ್ನ ಉಳಿತಾಯದಿಂದ 25 ಕೋಟಿ ರೂ.ಗಳನ್ನು ಪಿಎಂ ಕೇರ್ಸ್ ಫಂಡ್‌ಗೆ ನೀಡುವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ. ನೀವೂ ಬಂದು ಜೀವಗಳನ್ನು ಉಳಿಸಿ. ಜೀವ ಇದ್ದರೆ ಜಗತ್ತು ಇದೆ' ಎಂದು ಅಕ್ಷಯ್ ಟ್ವಿಟ್ಟರ್ ನಲ್ಲಿ ಹೀಗೆ ಬರೆದುಕೊಂಡಿದ್ದರು.
undefined
ಅಕ್ಷಯ್ ಕುಮಾರ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ #DilSeThankYou ಎಂಬ ಅಭಿಯಾನವನ್ನು ಶುರು ಮಾಡಿದ್ದು, ಸಹ ನಟಟಿಯರಿಂದ ಒಳ್ಳೆ ಸಾಥ್‌ ಸಿಕ್ಕಿತ್ತು.
undefined
ಮಾರ್ಚ್ 24 ರಂದು ಬಿಡುಗಡೆಗೆ ತಯಾರಾಗಿದ ಅಕ್ಷಯ್ ಕುಮಾರ್ ಪೊಲೀಸ್ ಅಧಿಕಾರಿಯ ಪಾತ್ರನಿರ್ವಹಿಸಿರುವ ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಚಿತ್ರ ಲಾಕ್‌ಡೌನ್ ಕಾರಣದಿಂದ ಮುಂದೂಡಲ್ಪಟ್ಟಿದೆ.
undefined
ಅಕ್ಷಯ್ ಕುಮಾರ್ ಅಲ್ಲದೆ, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಜೊತೆಗೆ ಕತ್ರಿನಾ ಕೈಫ್ ಲೀಡ್‌ ಕೆಲಸ ಮಾಡುತ್ತಿದ್ದಾರೆ.
undefined
click me!