ಶಾರ್ಟ್ ಹೇರ್ ಸ್ಟೈಲ್ ಐಡಿಯಾಗೆ ಸಮಂತಾ ಅಕ್ಕಿನೇನಿಯನ್ನ ಕಾಪಿ ಮಾಡಿ!

First Published | Apr 28, 2020, 6:03 PM IST

ಸಮಂತಾ ಅಕ್ಕಿನೇನಿ ತೆಲುಗು ಮತ್ತು ತಮಿಳು ಫಿಲ್ಮ್‌ ಇಂಡಸ್ಟ್ರೀಯಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಸ್ಟಾರ್‌ ನಟಿ. ತಮ್ಮ ನಟನೆಯಿಂದ ಜನಮನ ಸೂರೆಗೊಂಡು ಹಲವು ಆವಾರ್ಡ್‌ಗಳನ್ನು ಬಾಚಿಕೊಂಡಿದ್ದಾರೆ ಈ ಟ್ಯಾಲೆಂಡ್‌ ನಟಿ. ಸೌತ್‌ನ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ಸ್ಟೈಲ್‌ಗೂ ಫೇಮಸ್‌. ಇವರು ತಮ್ಮ ಪಾತ್ರಗಳಿಗಾಗಿ ಟ್ರೈ ಮಾಡಿರುವ ಶಾರ್ಟ್‌ ಹೇರ್‌ ಸ್ಟೈಲ್‌ಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ನೀವು ಗಿಡ್ಡ ಕೂದಲು ಹೊಂದಿದ್ದು,  ಸ್ಟೈಲಿಂಗ್ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೆಲವು ಹೇರ್‌ ಸ್ಟೈಲ್‌ ಐಡಿಯಾಗಳು ಇಲ್ಲಿವೆ. 

ದಕ್ಷಿಣ ಭಾರತೀಯಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ಅಕ್ಕಿನೇನಿ.
ನಟನೆ ಜೊತೆ ಸ್ಟೈಲ್ ಅನ್ನೂ ಗಂಭೀರವಾಗಿ ಪರಿಗಣಿಸುವ ತಾರೆ.
Tap to resize

ಸಮಂತಾ ಅವರ ಶಾರ್ಟ್ ಕೇಶವಿನ್ಯಾಸದ ಬ್ಯೂಟ್‌ಫುಲ್‌ ಲುಕ್‌ಬೇಸಿಗೆಗೆ ನಿಮಗೆ ಸ್ಫೂರ್ತಿಯಾಗಬಹುದು.
ಫಿಲ್ಮಂ ಪ್ರಮೋಶನ್‌ ವೇಳೆಯಲ್ಲಿ ಅತ್ಯಂತ ಅಸಾಮಾನ್ಯ ಸ್ಟೈಲ್‌ಗಳಿಂದ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಾವತ್ತೂ ವಿಫಲವಾಗುವುದಿಲ್ಲ ಸಮಂತಾ.
ಅವರ ಕೆಲವು ಶಾರ್ಟ್‌ ಕೇಶ ವಿನ್ಯಾಸಗಳು ಖಂಡಿತವಾಗಿಯೂ ನೀವೂ ಕಾಪಿ ಮಾಡಬಹುದು.
ಹೆಚ್ಚಿನ ನಟಿಯರು ಹೊಸ ಕೇಶವಿನ್ಯಾಸಗಳನ್ನು ಪ್ರಯೋಗಿಸಲು ಹಿಂಜರಿದರೆ, ಶಾರ್ಟ್‌ ಹೇರ್‌ಸ್ಟೈಲ್‌ಗಳನ್ನು ಆತ್ಮವಿಶ್ವಾಸದಿಂದ ಕ್ಯಾರಿ ಮಾಡುವ ಸ್ಯಾಮ್.
ಎಲ್ಲಾ ಡ್ರೆಸ್‌ಗಳಿಗೆ ಸೂಟ್‌ ಆಗುವ ಸೂಪರ್ ಚಿಕ್ ಬಾಬ್ ಹೇರ್‌ಸ್ಟೈಲ್‌.
ಕಳೆದ ವರ್ಷದ ಬ್ಲಾಕ್ಬಸ್ಟರ್ ಓಹ್! ಬೇಬಿ, ಚಿತ್ರದುದ್ದಕ್ಕೂ ನಟಿಯನ್ನು ಬಾಬ್ ಕೇಶವಿನ್ಯಾಸದಲ್ಲಿ ಕಾಣಬಹುದು.
ಓಹ್! ಬೇಬಿ ಫಿಲ್ಮಂ, ಸ್ಟುಡಿಯೋದಲ್ಲಿ ತನ್ನ ಚಿತ್ರವನ್ನು ತೆಗೆದುಕೊಂಡ ನಂತರ ಯೌವ್ವನಕ್ಕೆ ರೂಪಾಂತರಗೊಳ್ಳುವ ವಯಸ್ಸಾದ ಮಹಿಳೆಯ ಬಗ್ಗೆಯಾಗಿದೆ.
'ವಯಸ್ಸಾದ ಮಹಿಳೆ ಚಿಕ್ಕವಳಾಗಿ ಬದಲಾದಾಗ, ಅವಳು ಚಿಕ್ಕವಳಿದ್ದಾಗ ಯಾವುದು ಕೂಲ್‌ ಮತ್ತು ಫ್ಯಾಷನ್‌ ಅನಿಸಿಕೊಂಡಿತ್ತು ಎನ್ನುವ ನೆನಪಿನಿಂದ ಡ್ರೆಸ್‌ ಮಾಡಿಕೊಳ್ಳುತ್ತಾಳೆ. ಅವಳು ಕೇಶ ವಿನ್ಯಾಸಕಿ ಬಳಿ ಹೋಗಿ ಆ ಯುಗದ ನಟಿಯೊಬ್ಬರು ಹೊಂದಿದ ದೊಡ್ಡ ಬಾಬ್ ಹೇರ್‌ಸ್ಟೈಲ್‌ಗಾಗಿ ಕೇಳುತ್ತಾಳೆ. ನಾವು ವೇಷಭೂಷಣಗಳನ್ನು ವಿಂಟೇಜ್ ವೈಬ್‌ನೊಂದಿಗೆ ಪ್ಲಾನ್‌ ಮಾಡಿದ್ದೇವೆ.' ಎಂದಿದ್ದರು ಸಮಂತಾ.

Latest Videos

click me!