ಪ್ರಿಯಾಂಕಾ - ಐಶ್ವರ್ಯಾ ರೈ: ತಮಗಿಂತ ಕಿರಿಯರನ್ನು ವರಿಸಿದ ಲಿವುಡ್ ನಟಿಯರು

Suvarna News   | Asianet News
Published : Sep 01, 2020, 04:18 PM IST

Age is just a number ಎನ್ನುವುದನ್ನು  ವಯಸ್ಸಿನಲ್ಲಿ ತಮ್ಮಿಗಿಂತ ಕಿರಿಯವರನ್ನು ಮದುವೆಯಾಗಿ ಸಾಬಿತುಪಡಿಸಿದ್ದಾರೆ ಕೆಲವು ಬಾಲಿವುಡ್‌ ನಟಿಯರು. ಬಿ ಟೌನ್‌ನ ಫೇಮಸ್‌ ನಟಿಯಾರಾದ ಐಶ್ವರ್ಯಾ ರೈರಿಂದ ಹಿಡಿದು ಪ್ರಿಯಾಂಕಾ ಚೋಪ್ರಾರವರೆಗೆ ಹಲವು ನಟಿಯರು ಇದಕ್ಕೆ ಉದಾಹರಣೆ. ತಮಗಿಂತ ಕಿರಿಯ ವಯಸ್ಸಿನವರ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿರುವ ಹಿಂದಿ ಸಿನಿಮಾ ತಾರೆಯರು ಇವರು.

PREV
112
ಪ್ರಿಯಾಂಕಾ - ಐಶ್ವರ್ಯಾ ರೈ: ತಮಗಿಂತ ಕಿರಿಯರನ್ನು ವರಿಸಿದ ಲಿವುಡ್ ನಟಿಯರು

ಕಿರಿಯ ಪುರುಷರ ಪ್ರೀತಿಯಲ್ಲಿ  ಬಿದ್ದ  ಬಾಲಿವುಡ್ ಸುಂದರಿಯರು ಇಲ್ಲಿದ್ದಾರೆ.

212

ನರ್ಗಿಸ್ ಮತ್ತು ಸುನಿಲ್ ದತ್ -
ಈ ಜೋಡಿ ಮದರ್ ಇಂಡಿಯಾದ ಚಿತ್ರೀಕರಣದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದರು. ಸಿನಿಮಾದ ನಾಟಕೀಯ ದೃಶ್ಯದಂತೆ, ಸೆಟ್‌ನಲ್ಲಿ, ಸುನೀಲ್ ದತ್ ನರ್ಗಿಸ್‌ನನ್ನು ಬೆಂಕಿಯ ಅಪಘಾತದಿಂದ ರಕ್ಷಿಸಿ, ಅವಳ ಹೃದಯವನ್ನು ಗೆದ್ದರು. ಒಂದು ವರ್ಷದ ನಂತರ ಇಬ್ಬರೂ ಮದುವೆಯಾಗಿ ಸಂಜಯ್, ಪ್ರಿಯಾ ಮತ್ತು ನಮ್ರತಾ ಎಂಬ ಮೂವರು ಮಕ್ಕಳನ್ನು ಪಡೆದರು.

312

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ -
ಗುರು ಚಿತ್ರದ ಶೂಟಿಂಗ್ ಸಮಯದಲ್ಲಿ ಈ ಕಪಲ್‌ ಡೇಟಿಂಗ್ ಪ್ರಾರಂಭಿಸಿದರು. ಏಪ್ರಿಲ್ 20, 2007 ರಂದು ಚಿತ್ರ ಬಿಡುಗಡೆಯಾದ ನಂತರ, ಮದುವೆಯಾದರು. 46 ವರ್ಷದ ನಟಿ ಐಶ್ವರ್ಯಾ ಮತ್ತು 44 ವರ್ಷದ ನಟ ಅಭಿಷೇಕ್‌ಗೆ ಆರಾಧ್ಯ ಎಂಬ ಮಗಳು ಇದ್ದಾಳೆ.

412

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ -
ಎವರ್‌ಗ್ರೀನ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರಿಗಿಂತ ಮೂರು ತಿಂಗಳು ದೊಡ್ಡವರು. ತನ್ನ ಪರ್ಫೂಮ್‌  ಬ್ರಾಂಡ್ ಎಸ್ 2 ಪ್ರಚಾರಕ್ಕಾಗಿ ಶಿಲ್ಪಾಗೆ ಸಹಾಯ ಮಾಡುತ್ತಿದ್ದಾಗ ರಾಜ್ ನಟಿಯನ್ನು ಭೇಟಿಯಾದರು. ನವೆಂಬರ್ 22, 2009 ರಂದು ಸಪ್ತಪದಿ ತುಳಿದ ದಂಪತಿಗೆ ವಯಾನ್ ಮತ್ತು ಸಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

512

ಫರಾಹ್ ಖಾನ್ ಮತ್ತು ಶಿರೀಶ್ ಕುಂದರ್-
ಮೇನ್ ಹೂ ನಾ ಸೆಟ್‌ಗಳಲ್ಲಿ, ಫರಾಹ್ ಖಾನ್ ಶಿರಿಶ್ ಕುಂದರ್ ಅವರನ್ನು ಭೇಟಿಯಾದರು, ಎಂಟು ವರ್ಷದ ಅಂತರವನ್ನು ಹೊಂದಿರುವ ಇವರಿಬ್ಬರಿಗೆ ಅನ್ಯಾ, ದಿವಾ ಮತ್ತು  ಜಾರ್ ಎಂಬ ಮಕ್ಕಳಿದ್ದಾರೆ.

612

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ -
ಕರಣ್‌ಗೆ 34 ವರ್ಷ ಹಾಗೂ ನಟಿ ಬಿಪಾಶಾಗೆ 38 ವರ್ಷ. ಏಪ್ರಿಲ್ 30, 2016 ರಂದು 'ಮಂಕಿ-ಥೀಮ್ಡ್‌' ಮ್ಯಾರೇಜ್‌ನಲ್ಲಿ ಇಬ್ಬರು ವಿವಾಹವಾದರು. ವಯಸ್ಸಿನ ವ್ಯತ್ಯಾಸದಿಂದಾಗಿ ಕರಣ್ ತಾಯಿ ಆರಂಭದಲ್ಲಿ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು, ಆದರೆ ನಂತರ ಅವರು ಸಂಬಂಧವನ್ನು ಒಪ್ಪಿಕೊಂಡರು.

712

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ -
ಬಾಲಿವುಡ್ ನಟಿ ಮತ್ತು ಅಂತರರಾಷ್ಟ್ರೀಯ ಪಾಪ್ ತಾರೆ 2018 ರಲ್ಲಿ ಜೋಧ್‌ಪುರದಲ್ಲಿ ಮದುವೆಯಾದರು. ಕ್ವಾಂಟಿಕೋ ತಾರೆ 37 ವರ್ಷದವರಾಗಿದ್ದರೆ, ನಿಕ್‌ಗೆ 27 ವರ್ಷ. ಇವರಿಬ್ಬರ ನಡುವಿನ 10 ವರ್ಷದ ವಯಸ್ಸಿನ ಅಂತರಕ್ಕಾಗಿ ಕಪಲ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಟ್ರೋಲ್ ಮಾಡಲಾಗಿದೆ.

812

ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ -
ಪಟೌಡಿ ಸೈಫ್ ಅಲಿ ಖಾನ್ ಅಮೃತಾ ಸಿಂಗ್ ಗಿಂತ 12 ವರ್ಷ ಕಿರಿಯರು. ಮದುವೆಯಾದ 13 ವರ್ಷಗಳ ನಂತರ, ಇಬ್ಬರೂ ಬೇರ್ಪಟ್ಟರು. ಸಾರಾ ಮತ್ತು ಇಬ್ರಾಹಿಂ ಇವರ ಮಕ್ಕಳು. ಸೈಫ್ ಅವರ ಪ್ರಸ್ತುತ ಪತ್ನಿ ಕರೀನಾ ನಟನಿಗಿಂತ 10 ವರ್ಷ ಚಿಕ್ಕವರು.
 
912

ನಮ್ರತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು
2005 ರಲ್ಲಿ ತೆಲುಗು ಚಿತ್ರರಂಗದ ಹ್ಯಾಂಡ್‌ಸಮ್ ಹಂಕ್ ಮಹೇಶ್ ಬಾಬು ನಮ್ರತಾ ಶಿರೋಡ್ಕರ್ ಅವರನ್ನು ವಿವಾಹವಾದರು. ದಕ್ಷಿಣ ಸೂಪರ್‌ಸ್ಟಾರ್ ಬಾಲಿವುಡ್ ನಟಿಗಿಂತ ಎರಡು ವರ್ಷ ಕಿರಿಯರು. ದಂಪತಿಗೆ ಗೌತಮ್ ಗಟ್ಟಮನೇಣಿ ಎಂಬ ಮಗನಿದ್ದಾನೆ.

1012

ಜರೀನಾ ವಹಾಬ್ ಮತ್ತು ಆದಿತ್ಯ ಪಾಂಚೋಲಿ -
ಕಲಾಂಕ್ ಕಾ ಟಿಕಾ ಸಿನಿಮಾ ಸೆಟ್‌ಗಳಲ್ಲಿ ಇವರಿಬ್ಬರು ಭೇಟಿಯಾದರು. 1986ರಲ್ಲಿ, ಮದುವೆಯಾದ ಆದಿತ್ಯ ಪಾಂಚೋಲಿ ಜರೀನಾಗಿಂತ ಆರು ವರ್ಷ ಚಿಕ್ಕವರು. ಮಗಳು ಸನಾ ಮತ್ತು ಮಗ, ಸೂರಜ್ ಹೊಂದಿದ್ದಾರೆ ಈ ಕಪಲ್‌.

1112

ಮೆಹರ್ ಜೆಸ್ಸಿಯಾ ಮತ್ತು ಅರ್ಜುನ್ ರಾಂಪಾಲ್ -
1998 ರಲ್ಲಿ, ಮಾಜಿ ಮಿಸ್ ಇಂಡಿಯಾ ಮೆಹರ್ ಜೆಸ್ಸಿಯಾ ತನಗಿಂತ ಎರಡು ವರ್ಷ ಚಿಕ್ಕವನಾದ ನಟ ಅರ್ಜುನ್ ರಾಂಪಾಲ್‌ರನ್ನು ವಿವಾಹವಾದರು. ದಂಪತಿಗೆ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 20 ದೀರ್ಘ ವರ್ಷಗಳ ನಂತರ, 2018 ರಲ್ಲಿ, ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸ್ಸಿಯಾ ತಮ್ಮ ಸಂಬಂಧವನ್ನು ಕೊನೆಗೊಳಿಸಿದರು.

1212

ಅಧುನಾ ಭಬಾನಿ ಮತ್ತು ಫರ್ಹಾನ್ ಅಖ್ತರ್ -
ನಟ-ನಿರ್ದೇಶಕ ಫರ್ಹಾನ್ ಅಖ್ತರ್ ಪತ್ನಿ ಅಧುನಾ ಭಬಾನಿ ಅವರಿಗಿಂತ ಆರು ವರ್ಷ ಹಿರಿಯರು. ದಿಲ್ ಚಾಹ್ತಾ ಹೈ ಸಿನಿಮಾದ ಚಿತ್ರಕಥೆ ಮಾಡುವಾಗ, ಚಲನಚಿತ್ರ ನಿರ್ಮಾಪಕ ಪ್ರಸಿದ್ಧ ಕೇಶ ವಿನ್ಯಾಸಕಿಯನ್ನು ಭೇಟಿಯಾದರು. ಈ ಜೋಡಿ 2000ರಲ್ಲಿ ಮದುವೆಯಾಗಿ ಶಕ್ಯ ಮತ್ತು ಅಕಿರಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ, 2017ರಲ್ಲಿ, ಫರ್ಹಾನ್ ಅಖ್ತರ್  ಅಧುನಾ ಭಬಾನಿಯೊಂದಿಗಿನ 17 ವರ್ಷಗಳ ಸುದೀರ್ಘ ಸಂಬಂಧವನ್ನು ಕೊನೆಗೊಳಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories