Tadap screening: ಅಥಿಯಾ ಜೊತೆ ಕಾಣಸಿಕೊಂಡ KL ರಾಹುಲ್!
First Published | Dec 2, 2021, 9:48 PM ISTಮುಂಬೈನ Jio PVR ನಲ್ಲಿ ತಡಪ್ (Tadap ) ಚಿತ್ರದ ವಿಶೇಷ ಪ್ರದರ್ಶನವನ್ನು (screening) ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅಹಾನ್ ಶೆಟ್ಟಿ (Ahan Shetty) ಸಹೋದರಿ ಅಥಿಯಾ ಶೆಟ್ಟಿ (Athiya Shetty) ತನ್ನ ಬಾಯ್ ಫ್ರೆಂಡ್ ಕ್ರಿಕೆಟಿಗ ಕೆಎಲ್ ರಾಹುಲ್ (KL Rahul) ಜೊತೆ ಆಗಮಿಸಿದ್ದಾರೆ. ಅದೇ ಸಮಯದಲ್ಲಿ, ಅಹಾನ್ ಶೆಟ್ಟಿ ಅವರ ಗರ್ಲ್‌ಫ್ರೆಂಡ್ ತಾನಿಯಾ ಶ್ರಾಫ್ (Tania Shroff) ಕೂಡ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಚಿತ್ರದ ಪ್ರಚಾರದಲ್ಲಿ ಸಹೋದರ ಮತ್ತು ಸಹೋದರಿ ಇಬ್ಬರೂ ತಮ್ಮ ಲವ್ ಜೊತೆ ಕಾಣಿಸಿಕೊಂಡರು. ಸುನೀಲ್ ಶೆಟ್ಟಿ ಕೂಡ ಮಗನ ಮೊದಲ ಸಿನಿಮಾ ನೋಡಲು ಬಂದಿದ್ದರು.