Vicky-Katrina Wedding: ಕತ್ರೀನಾ ಮದುವೆಗೆ ಸೋಜತ್ ಮೆಹಂದಿ, ಇದರ ವಿಶೇಷತೆ ಗೊತ್ತೇ ?

Published : Dec 02, 2021, 09:29 PM ISTUpdated : Dec 02, 2021, 09:41 PM IST

ಕತ್ರೀನಾ ಕೈಫ್(Katrina Kaif) ಮತ್ತು ವಿಕ್ಕಿ ಕೌಶಲ್(Vicky Kaushal) ಮದುವೆ(Wedding) ಸಿದ್ಧತೆ ಜೋರಾಗಿದೆ. ಈ ಜೋಡಿ ಮದುವೆಗೆ ವಿಶೇಷ ಮೆಹಂದಿ ಸಿದ್ಧವಾಗ್ತಿರೋದು ನಿಮಗೆ ಗೊತ್ತೇ ಇದೆ. ಆದರೆ ಈ ನೈಸರ್ಗಿಕ ಮೆಹಂದಿ ತಯಾರಿಸೋದು ಹೇಗೆ ಗೊತ್ತಾ ?

PREV
18
Vicky-Katrina Wedding: ಕತ್ರೀನಾ ಮದುವೆಗೆ ಸೋಜತ್ ಮೆಹಂದಿ, ಇದರ ವಿಶೇಷತೆ ಗೊತ್ತೇ ?

ಐಶ್ವರ್ಯಾ ರೈ ಬಚ್ಚನ್‌ನಿಂದ ತೊಡಗಿ ಪ್ರಿಯಾಂಕ ಚೋಪ್ರಾ ತನಕ ಸೆಲೆಬ್ರಿಟಿ ವಧುಗಳಾಗಿದ್ದವು ತಮ್ಮ ಕೈಗಳಿಗೆ ನೈಸರ್ಗಿಕ ಮಹೆಂದಿಯ ರಂಗು ತುಂಬಿದ್ದರು. ರಾಜಸ್ಥಾನದ(Rajastham) ಪಾಲಿ ಜಿಲ್ಲೆಯಲ್ಲಿರುವ ಸೋಜತ್(Sojat) ನಗರದ ಮೆಹಂದಿಯನ್ನೇ ಆರಿಸಿಕೊಂಡಿದ್ದರು ಬಾಲಿವುಡ್ (Bollywood)ನಟಿಯರು. ಈಗ ಇದಕ್ಕೆ ನಟಿ ಕತ್ರೀನಾ ಕೈಫ್ ಕೂಡಾ ಹೊರತಲ್ಲ.

28

ವಿವಾಹಿತರಾಗಲಿರೋ ಕತ್ರೀನಾ ಹಾಗೂ ವಿಕ್ಕಿ ಜೋಡಿಗೂ ಸೋಜತ್ ಮೆಹಂದಿ ರಂಗು ತುಂಬಲಿದೆ. ಸೋಜತ್‌ನಿಂದ 20 ಕೆಜಿ ಹಾಗೂ 400 ಕೋನ್‌ಗಳನ್ನು ಮದುವೆಯ ಮೆಹಂದಿ ಶಾಸ್ತ್ರಕ್ಕಾಗಿ ಕಳುಹಿಸಿಕೊಡಲಾಗಿದೆ.

38

ಸೋಜತ್ ಮಹೆಂದಿ ಏಕೆ ಸ್ಪೆಷಲ್ ಎಂದು ಕೇಳಿದರೆ ಇದನ್ನು ನೈಸರ್ಗಿಕವಾಗಿ ತಯಾರಿಸುವುದೆ ಇದರ ವಿಶೇಷತೆ. ಹಾಗೆಯೇ ಇದಕ್ಕೆ ಪ್ರಾದೇಶಿಕ ಪ್ರಾಮುಖ್ಯತೆಯೂ ಇದೆ.

48

ಹೆನ್ನಾ ಗಿಡದ ಎಲೆಗಳು Lawsonia inermis ಎಂದು ಕರೆಯಲ್ಪಡುತ್ತವೆ. ಇದನ್ನು ಕೈಯಲ್ಲೇ ಆರಿಸಿಕೊಯ್ಯಲಾಗುತ್ತದೆ. ಒಳ್ಳೆಯ ಎಲೆಗಳನ್ನು ಆರಿಸಿಡುತ್ತಾರೆ. ನಂತರ ಇದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡುತ್ತಾರೆ. ಇದಕ್ಕೆ ನೀಲಗಿರಿ ಹಾಗೂ ಲವಂಗ ತೈಲವನ್ನು ಸೇರಿಸಿ ಪೇಸ್ಟ್ ಮಾಡಲಾಗುತ್ತದೆ.

58

ಇದೇ ಹೆನ್ನಾವನ್ನು ಪಾಕಿಸ್ತಾನ ಹಾಗೂ ಪಾಶ್ಚಿಮಾತ್ಯ ಏಷ್ಯನ್ ರಾಷ್ಟ್ರಗಳಲ್ಲಿ ಬೆಳೆಯುತ್ತಾರಾದರೂ ಸೋಜತ್ ಮೆಹಂದಿಯ ಬಣ್ಣ ಭಿನ್ನವಾಗಿರುತ್ತದೆ. ಇದು ಮೆಹಂದಿ ಬೆಳೆಯುವ ಸೋಜತ್‌ನ ಮಣ್ಣಿನ ಗುಣ. ಸೋಜತ್ ಮಹೆಂದಿಯನ್ನು ಸುಮಾರು 100ಕ್ಕೂ ಹೆಚ್ಚು ದೇಶಕ್ಕೆ ಕಳುಹಿಸಲಾಗುತ್ತದೆ.

68

ಕತ್ರೀನಾ ಕೈಫ್ ಮದುವೆಗೆ ಮೆಹಂದಿ ಆರ್ಡರ್ ಪಡೆದ ನಿತೇಶ್ ಅಗರ್ವಾಲ್ ಅವರ ನ್ಯಾಚುರಲ್ ಹರ್ಬಲ್ಸ್ ಸೋಜತ್ ಕಂಪನಿ ತಮಗೆ 20 ಕೆಜಿ ಮೆಹಂದಿ ಹುಡಿ ಹಾಗೂ 400 ಕೋನ್‌ಗಳಿಗೆ ಆರ್ಡರ್ ಬಂದಿದೆ. ಇದು ನಮ್ಮ ಕಂಪನಿಗೆ ಹಾಗೂ ಸೋಜತ್‌ಗೆ ಹೆಮ್ಮೆ ಎಂದಿದ್ದಾರೆ.

78

ಸ್ಯಾಂಪಲ್ ಮೆಹಂದಿಯನ್ನು ಅ. 25ರಂದು ಕಳುಹಿಸಲಾಗಿದೆ. ಎರಡನೇ ಹಾಗೂ ಕೊನೆಯ ಸ್ಯಾಂಪಲ್ ನವೆಂಬರ್ 10ರಂದು ಕಳುಹಿಸಲಾಗಿದೆ. ಈಗ ಸಂಪೂರ್ಣ ಆರ್ಡರ್ ಡಿ.1ರಂದೇ ಜೈಪುರ ತಲುಪಿದೆ ಎಂದಿದ್ದಾರೆ ಅವರು.

88

ಇದು ದೊಡ್ಡ ಆರ್ಡರ್ ಆಗಿದ್ದರೂ ಇದಕ್ಕೆ ಹಣವನ್ನು ಪಡೆದಿಲ್ಲ. ಇದನ್ನು ವಧುವಾಗಲಿರೋ ಕತ್ರೀನಾಗೆ ವಿವಾಹ ಉಡುಗೊರೆಯಾಗಿ ಕಳುಹಿಸಿ ಇವೆಂಟ್ ಮ್ಯಾನೇಜ್ಮೆಂಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

Read more Photos on
click me!

Recommended Stories