Published : Oct 18, 2023, 04:10 PM ISTUpdated : Oct 18, 2023, 04:12 PM IST
ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್‌ಬಾಸ್ ರಿಯಾಲಿಟಿ ಶೋನ 10ನೇ ಆವೃತ್ತಿ ಶುರುವಾಗಿದೆ. ನಟ-ನಟಿಯರು, ಕಾಮೆಡಿಯನ್ ಹೀಗೆ ಹಲವು ಕಂಟೆಸ್ಟೆಂಟ್‌ಗಳ ಮಧ್ಯೆ ಫೈಟ್, ಲವ್, ಡ್ರಾಮಾ ಎಲ್ಲವೂ ಹೆಚ್ಚಾಗಿದೆ. ಇಷ್ಟಕ್ಕೂ ದೊಡ್ಮನೆಯಲ್ಲಿರುವ ಸ್ಪರ್ಧಿಗಳ ವಯಸ್ಸೆಸ್ಸು ನಿಮ್ಗೆ ಗೊತ್ತಾ?
ತನಿಶಾ ಕುಪ್ಪಂಡ
ಕನ್ನಡ ಧಾರಾವಾಹಿ, ಸಿನಿಮಾ ನಟಿ ತನಿಶಾ ಕುಪ್ಪಂಡ ಅವರಿಗೆ 1990ರಲ್ಲಿ ಜನಿಸಿದ್ದಾರೆ. ಅವರ ವಯಸ್ಸು 33. ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ತನಿಶಾ ನಟಿಸಿದ್ದರು.
28
ವಿನಯ್ ಗೌಡ
ಕಿರುತೆರೆ ನಟ ವಿನಯ್ ಗೌಡ ಅವರಿಗೆ 44 ವರ್ಷ ವಯಸ್ಸು. ಇವರಿಗೆ 14 ವರ್ಷದ ಮಗನಿದ್ದಾನೆ. ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ಬಾರಿ ಶಿವನ ಪಾತ್ರ ಮಾಡಿದ ಹೆಗ್ಗಳಿಕೆ ವಿನಯ್ ಗೌಡ ಅವರಿಗಿದೆ.
38
ಸ್ನೇಹಿತ್
'ನಮ್ಮನೆ ಯುವರಾಣಿ' ಸೀರಿಯಲ್‌ನಿಂದ ಫೇಮಸ್ ಆಗಿರೋ ಸ್ನೇಹಿತ್, ಬಿಗ್‌ಬಾಸ್ ಮನೆಯಲ್ಲಿ ತನ್ನ ಡೇಟ್ ಆಫ್ ಇಯರ್ 1994 ಎಂದಿದ್ದಾರೆ. ಅದರ ಪ್ರಕಾರ, ಅಬರಿಗೆ 29 ವರ್ಷ ವಯಸ್ಸು.
48
ನಮ್ರತಾ ಗೌಡ
ಪುಟ್ಟಗೌರಿ ಮದುವೆ, ನಾಗಿಣಿ ಧಾರಾವಾಹಿಯಲ್ಲಿ ನಟಿಸಿರುವ ನಮ್ರತಾ ಗೌಡಗೆ 30 ವರ್ಷ ವಯಸ್ಸು. 1993ರಲ್ಲಿ ಅವರು ಜನಿಸಿದ್ದಾರೆ.
58
ಸಂಗೀತಾ ಶೃಂಗೇರಿ
'777 ಚಾರ್ಲಿ' ನಟಿ ಸಂಗೀತ ಶೃಂಗೇರಿ ಅವರಿಗೆ 27 ವರ್ಷ ವಯಸ್ಸು. ಅವರು 1996ರಲ್ಲಿ ಜನಿಸಿದ್ದಾರೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿ ಸಂಗೀತಾ-ಕಾರ್ತಿಕ್ ನಡುವೆ ಫ್ರೆಂಡ್‌ಶಿಪ್ ಇದೆ.
68
ತುಕಾಲಿ ಸಂತೋಷ್
'ಕಾಮಿಡಿ ಕಿಲಾಡಿಗಳು' ಖ್ಯಾತಿಯ ತುಕಾಲಿ ಸ್ಟಾರ್ ಸಂತು ತಮಗೆ 33 ವರ್ಷ ಎಂದು ಬಿಗ್‌ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.
78
ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್, ಬಿಗ್‌ಬಾಸ್ ಸೀಸನ್-10ರಲ್ಲಿ ತಮಗೆ 26 ವರ್ಷ ವಯಸ್ಸು ಎಂದು ಹೇಳಿಕೊಂಡಿದ್ದಾರೆ. ಈಗಾಗಲೇ ಬಿಗ್‌ಬಾಸ್ ಮನೆಯೊಳಗೆ ಹಲವರಿಗೆ ಟೀಕೆಗೆ ಒಳಗಾಗಿದ್ದಾರೆ.
88
ರಕ್ಷಕ್ ಬುಲೆಟ್
ಬಿಗ್‌ಬಾಸ್ ಮನೆಯ ಅತೀ ಕಿರಿಯ ಸ್ಪರ್ಧಿ ರಕ್ಷಕ್ ಬುಲೆಟ್. ಇವರಿಗೆ 21 ವರ್ಷ ವಯಸ್ಸು. 2002ರಲ್ಲಿ ಜನಿಸಿದರು.