ರಾಹಾ ಕಪೂರ್ 1ನೇ ಜನ್ಮದಿನ: ಈ ಕಾರಣದಿಂದ ಇನ್ನೂ ಮಗಳ ಮುಖ ತೋರಿಸಿಲ್ಲ ಎಂದ ಆಲಿಯಾ!

Published : Nov 05, 2023, 05:12 PM IST

ಆಲಿಯಾ ಭಟ್ (Alia Bhatt) ತನ್ನ ಮಗಳ ಮುಖವನ್ನು ಬಹಿರಂಗಪಡಿಸದ ಹಿಂದಿನ ಕಾರಣವನ್ನು ರಾಹಾ ಕಪೂರ್‌ (Raha Kapoor)ಮೊದಲ ಹುಟ್ಟುಹಬ್ಬದ ಮೊದಲು  ಬಹಿರಂಗಪಡಿಸಿದ್ದಾರೆ. ನಟಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಕಾರಣ ಇಲ್ಲಿದೆ.

PREV
19
ರಾಹಾ ಕಪೂರ್ 1ನೇ ಜನ್ಮದಿನ: ಈ ಕಾರಣದಿಂದ ಇನ್ನೂ ಮಗಳ ಮುಖ ತೋರಿಸಿಲ್ಲ ಎಂದ  ಆಲಿಯಾ!

ಬಿ-ಟೌನ್‌ನ ಪವರ್‌ ಕಪಲ್‌ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಪುತ್ರಿ ರಾಹಾ ಕಪೂರ್‌ಗೆ ನವೆಂಬರ್ 6 ರಂದು ಒಂದು ವರ್ಷ ತುಂಬಲಿದೆ ಆದರೆ ಇದುವರೆಗೂ ಆಲಿಯಾ ರಣಬೀರ್‌ ತನ್ನ ಮಗಳ ಮುಖವನ್ನು ಇನ್ನೂ ಬಹಿರಂಗಪಡಿಸಿಲ್ಲ. 

29

ಆಲಿಯಾ ಆಗಾಗ್ಗೆ ರಾಹಾ ಜೊತೆ ಕಾಣಿಸಿಕೊಳ್ಳುತ್ತಾರೆ. ಆದರೆ ಮಾಧ್ಯಮದವರನ್ನು ಕಂಡರೆ ರಾಹಾಳ ಮುಖವನ್ನು ಕವರ್ ಮಾಡುತ್ತಾರೆ. ಈ ಕಾರಣಕ್ಕಾಗಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಬಾರಿ ಟ್ರೋಲ್ ಆಗಿದ್ದಾರೆ. 

39

ಇತ್ತೀಚೆಗೆ, ಆಲಿಯಾ ಈವೆಂಟ್‌ನಲ್ಲಿ ಮಗಳ ಮುಖವನ್ನು ಇನ್ನೂ ಬಹಿರಂಗಪಡಿಸದ ಹಿಂದಿನ  ಕಾರಣವನ್ನು ಬಹಿರಂಗಪಡಿಸಿದರು ಮತ್ತು ಟ್ರೋಲರ್‌ಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.

49

ಇತ್ತೀಚೆಗೆ, ಆಲಿಯಾ ಚಾಟ್ ಶೋನಲ್ಲಿ ಕಾಣಿಸಿಕೊಂಡಿದ್ದರು, ಅಲ್ಲಿ   ಅಭಿಮಾನಿಗಳಿಗೆ ಮಗಳು ರಾಹಾ ಮುಖವನ್ನು ಯಾವಾಗ ತೋರಿಸುತ್ತೀರಿ ಎಂದು ಕೇಳಲಾಯಿತು. 'ನಾವು ಯಾರಿಗೂ ಆಕೆಯ ಮುಖವನ್ನು ನೋಡಲು ಬಿಡುವುದಿಲ್ಲ ಎಂಬುದು ನಿಜವಲ್ಲ ಆದರೆ ಈ ಪಾಲನೆಯ ವಿಷಯದೊಂದಿಗೆ ನಾವು ಹೆಚ್ಚು ಆರಾಮದಾಯಕವಾಗಬೇಕು' ಎಂದು ಆಲಿಯಾ  ಹೇಳಿದ್ದಾರೆ.

59

'ಸಮಯ ಸರಿಯಾಗಿದೆ ಎಂದು ನಾವು ಭಾವಿಸಿದಾಗ ಮತ್ತು ನಾವು ಅದಕ್ಕೆ ಸಿದ್ಧರಿದ್ದೇವೆ. ನಂತರ ನಾವು ಅಭಿಮಾನಿಗಳಿಗೆ ಮಗಳ ಮುಖವನ್ನು  ಬಹಿರಂಗಪಡಿಸುತ್ತೇವೆ' ಎಂದು ಆಲಿಯಾ ಭಟ್‌ ಹೇಳಿದ್ದಾರೆ.

69

ನಟಿಯ ಈ ಹೇಳಿಕೆಯಿಂದಾಗಿ, ಬಹುಶಃ ಅಭಿಮಾನಿಗಳು ರಾಹಾಳ ಮೊದಲ ಹುಟ್ಟುಹಬ್ಬದಂದು ಮಗುವಿನ ಮುಖವನ್ನು ನೋಡಬಹುದು ಎಂಬ ಊಹಾಪೋಹಗಳನ್ನು ಮಾಡಲಾಗುತ್ತಿದೆ.

79

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 14 ಏಪ್ರಿಲ್ 2022 ರಂದು ವಿವಾಹವಾದರು. ಮದುವೆಯಾದ ಎರಡೇ ತಿಂಗಳಲ್ಲಿ ನಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅದರ ನಂತರ  ನವೆಂಬರ್ 6 ರಂದು ಈ ಜೋಡಿ ಮಗಳು ರಾಹಳನ್ನು ಸ್ಗಾಗತಿಸಿದರು.

89

ಆಲಿಯಾ ಭಟ್ ಕೊನೆಯದಾಗಿ ರಣವೀರ್ ಸಿಂಗ್ ಅವರೊಂದಿಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ಅವರು ಅನೇಕ ದೊಡ್ಡ ಯೋಜನೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

99

ಈ ನಡುವೆ  ರಾಹಾಳ ತಂದೆ ರಣಬೀರ್ ಕಪೂರ್ ಶೀಘ್ರದಲ್ಲೇ 'ಅನಿಮಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಟನ ಡ್ಯಾಶಿಂಗ್ ಲುಕ್ ಕಂಡುಬಂದಿದೆ. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

Read more Photos on
click me!

Recommended Stories