ತಾಪ್ಸಿ ನಂತರ ರಿಯಾ ಬೆಂಬಲಕ್ಕೆ ಮತ್ತೊಬ್ಬ ಖ್ಯಾತ ನಟಿ, 'ಹೆಣ್ಣು ಮಗಳ ನೊಯಿಸಬೇಡಿ'

First Published | Sep 1, 2020, 9:40 PM IST

ಮುಂಬೈ (ಸೆ. 01)  ಸುಶಾಂತ್ ಸಿಂಗ್ ಸಾವಿನ ನಂತರ ಹುಟ್ಟಿಕೊಂಡ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಇಲ್ಲ. ಆರೋಪ ಪ್ರತ್ಯಾರೋಪ ಕೇಳಿ ಬರುತ್ತಲೇ ಇದೆ. ಸುಶಾಂತ್ ಒಂದು ಕಾಲದ ಗೆಳತಿ ರಿಯಾ ಚಕ್ರವರ್ತಿ ಆರೋಪಿ ಸ್ಥಾನದಲ್ಲಿ ಇದ್ದು ಸಿಬಿಐ ತನಿಖೆಯನ್ನು ಎದುರಿಸಬೇಕಾದ ಕಾಲ ಇದೆ.

ಕಂಗನಾ ರಣಾವತ್ ಸುಶಾಂತ್ ಸಾವಿನ ತನಿಖೆ ವಿಚಾರವನ್ನು ಮುಖ್ಯ ವಾಹಿನಿಯಲ್ಲಿ ಇರುವಂತೆ ನೋಡಿಕಂಡವರು.
ನಟಿ ತಪ್ಸಿ ಪನ್ನು ರಿಯಾ ಅವರ ಪರವಾಗಿ ಮಾತನಾಡಿದ್ದರು. ಈಗ ಮತ್ತೊಬ್ಬ ನಟಿ ವಿದ್ಯಾ ಬಾಲನ್ ಸರದಿ.
Tap to resize

ಸೋಶಿಯಲ್ ಮೀಡಿಯಾದಲ್ಲಿ ರಿಯಾ ಗೆ ಬೆಂಬಲ ನೀಡುವಂತಹ ಪೋಸ್ಟ್ ಒಂದನ್ನು ವಿದ್ಯಾ ಶೇರ್ ಮಾಡಿಕೊಂಡಿದ್ದಾರೆ.
ನಟಿ ಲಕ್ಷ್ಮೀ ಮಂಚು ರಿಯಾ ಪರವಾಗಿ ಮಾತನಾಡಿದ್ದನ್ನು ವಿದ್ಯಾ ಉಲ್ಲೇಖ ಮಾಡಿ ತಮ್ಮ ಬೆಂಬಲವನ್ನು ನೀಡಿದ್ದಾರೆ.
ಪ್ರತಿಭಾವಂತ ಸುಶಾಂತ್ ಸಾವು ನೋವಿನ ಸಂಗತಿ. ಸಾವು ಇಂದು ಮಾಧ್ಯಮದಲ್ಲಿ ಬೇರೆ ಬೇರೆ ಕಾರಣಕ್ಕೆ ಸುದ್ದಿಯಾಗುತ್ತಿದೆ. ಇದನ್ನೇ ಇಟ್ಟುಕೊಂಡು ಹೆಣ್ಣು ಮಗಳು(ರಿಯಾ)ನ್ನು ದೂರುತ್ತ ಇರುವುದು ಸರಿ ಅಲ್ಲ.
ಆರೋಪ ಸಾಬೀತು ಆಗುವವರೆಗೂ ನೋಯಿಸುವ ಮಾತುಗಳನ್ನು ಆಡಬಾರದು ಎಂದು ವಿದ್ಯಾ ಹೇಳಿದ್ದಾರೆ. ರಿಯಾ ಹೆಸರು ದುರ್ಬಳಕೆ ಆಗುತ್ತಿದೆ ಎಂದೆನಿಸುತ್ತಿದೆ ಎಂದು ವಿದ್ಯಾ ಹೇಳಿದ್ದಾರೆ.
ಸಂವಿಧಾನ ಮತ್ತು ಕಾನೂನಿಗೆ ಎಲ್ಲರೂ ಗೌರವ ನೀಡಬೇಕು ಅದನ್ನು ಪಾಲಿಸಬೇಕು ಎಂದಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಾಥಮಿಕವಾಗಿ ಹೇಳಿದ್ದರೂ ಇದೀಗ ಸಾವು ನಿಗೂಢವಾಗಿದ್ದು ಸಿಬಿಐ ತನಿಖೆ ನಡೆಸುತ್ತಿದೆ.

Latest Videos

click me!