ಹ್ಯಾಪಿ ವೀಕೆಂಡ್ ಎಂದು ಮುದ್ದಾದ ಫೋಟೋ ಶೇರ್ ಮಾಡಿದ ವಸಿಷ್ಠ ಸಿಂಹ-ಹರಿಪ್ರಿಯಾ

First Published Sep 3, 2023, 1:58 PM IST

ಸ್ಯಾಂಡಲ್​ವುಡ್​ ತಾರಾ ಜೋಡಿಯಾದ  ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವೀಕೆಂಡ್ ಜೊತೆಯಾಗಿ ಕಳೆದಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರ ಮುದ್ದಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸ್ಯಾಂಡಲ್​ವುಡ್​ ತಾರಾ ಜೋಡಿಯಾದ  ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ವೀಕೆಂಡ್ ಜೊತೆಯಾಗಿ ಕಳೆದಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರ ಮುದ್ದಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ವಸಿಷ್ಠ ಸಿಂಹ ಹಳದಿ ಬಣ್ಣದ ಶರ್ಟ್‌ನಲ್ಲಿ ಮತ್ತು ಹರಿಪ್ರಿಯಾ ಹಳದಿ ಬಣ್ಣದ ಸಲ್ವಾರ್ ಹಾಗೂ ಬ್ಲೂ ಕಲರ್ ದುಪ್ಪಟ್ಟಾ ಹಾಕಿಕೊಂಡು ಜೊತೆಯಾಗಿ ಪೋಟೋಗೆ ಫೋಸ್ ನೀಡಿದ್ದಾರೆ.

ಮುದ್ದಾದ ಜೋಡಿಯ ಫೋಟೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ವಾವ್‌, ಮುದ್ದಾಗಿದೆ, ಕ್ಯೂಟ್ ಪೇರ್ ಎಂದೆಲ್ಲಾ ಹೇಳಿದ್ದಾರೆ. ಒಬ್ಬ ಅಭಿಮಾನಿ, ಶ್ರಾವಣದ ಹಳದಿ ಜೋಡಿ ಸಿಂಹಗಳು ಎಂದು ಕಮೆಂಟಿಸಿದ್ದಾರೆ.

ವಸಿಷ್ಠ ಸಿಂಹ ಹ್ಯಾಪಿ ವೀಕೆಂಡ್ ಎಂದು ಶೀರ್ಷಿಕೆ ನೀಡಿ ಈ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದಕ್ಕೆ ವೀಕೆಂಡ್ ವೈಬ್ಸ್‌, ಸಿಂಹಪ್ರಿಯ ಎಂದು ಹ್ಯಾಶ್‌ಟ್ಯಾಗ್ ನೀಡಿದ್ದಾರೆ.

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜನವರಿ 26ರಂದು ಗಣರಾಜ್ಯ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ಮದುವೆ ಸಮಾರಂಭ ನಡೆದಿತ್ತು.  ಇಬ್ಬರು ಸರಳವಾಗಿ ಹಸೆಮಣೆ ಏರಿದ್ದು ಫೋಟೋಗಳು ಎಲ್ಲಾ ಕಡೆ ವೈರಲ್ ಆಗಿತ್ತು.

ವಸಿಷ್ಠ ಮತ್ತು ಹರಿಪ್ರಿಯಾ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಹಾಜರಾಗಿದ್ದರು. ಗೆಳೆಯ ಧನಂಜಯ್, ಅಮೃತಾ ಐಯ್ಯಂಗರ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. 

click me!