ಏನೋ ಅಲ್ಪಸ್ವಲ್ಪ ಬದಲಾವಣೆ ಅಂದರೆ ನಂಬಬಹುದು. ಆದರೆ, ಹೀರಾಮಂಡಿಯ ಬಿಬ್ಬೋಜಾನ್ ಅಂದು- ಇಂದಿನ ಫೋಟೋಗಳಿಗಿರುವ ಅಜಗಜಾಂತರ ನೋಡಿ ನೆಟ್ಟಿಗರು ಆಘಾತ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಅದಿತಿ ರಾವ್ ಹೈದರಿಯ ಹಳೆಯ ಫೋಟೋವೊಂದು ಸೋಷ್ಯಲ್ ಮೀಡಿಯಾದಲ್ಲಿ ಅಚ್ಚರಿಯ ಅಲೆಯನ್ನೆಬ್ಬಿಸಿದ್ದು, ನಿಜಕ್ಕೂ ಇವರೇ ಅವರಾ ಎಂದು ಜನ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಸಧ್ಯ ಅದಿತಿಯ ಬದುಕಲ್ಲಿ ಅದೃಷ್ಟದ ಸಮಯ. ಇತ್ತೀಚೆಗಷ್ಟೇ ನಟ ಸಿದ್ಧಾರ್ಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಖುಷಿಯಲ್ಲಿ ನಟಿ ಇದ್ದಾರೆ.
ಜೊತೆಗೆ, ಇದೀಗ ಸಂಜಯ್ ಲೀಲ ಬನ್ಸಾಲಿಯ ಹೀರಾಮಂಡಿಯ ಬಿಬ್ಬೋಜಾನ್ ಆಗಿ ಯಶಸ್ಸಿನ ಅಲೆಯಲ್ಲಿ ಮಿಂದೇಳುತ್ತಿದ್ದಾರೆ.
ಅದರ ಬೆನ್ನಲ್ಲೇ ಪ್ರತಿಷ್ಠಿತ ಕೇನ್ಸ್ ಫೆಸ್ಟಿವಲ್‌ನಲ್ಲಿ ಮಿಂಚಿ ಬಾರ್ಬಿ ಗೊಂಬೆ ಎಂಬ ಬಿರುದು ಗಳಿಸಿದ್ದರು. ನಟಿಯ ಲುಕ್‌ಗೆ ಎಲ್ಲರೂ ಹಾಲಿವುಡ್ ರೇಂಜ್ ಎಂದು ಹೊಗಳಿದ್ದರು.
ಆದರೀಗ ಅದಿತಿಯ ಹಳೆಯ ಫೋಟೋವೊಂದು ಅವರ ಸಂತೋಷದ ಬಲೂನ್‌ನ ಗುಳ್ಳೆ ಒಡೆಯುವಂತೆ ಸೋಷ್ಯಲ್ ಮೀಡಿಯಾದಲ್ಲಿ ಮೇಲೆ ಬಂದು ಸದ್ದು ಮಾಡುತ್ತಿದೆ.
ಆ ಮೂಗು, ಹುಬ್ಬು, ತುಟಿ, ಹಲ್ಲು, ತ್ವಚೆ ಪ್ರತಿಯೊಂದೂ ಇದು ಖಂಡಿತಾ ಮಹಾಸಮುದ್ರಂ ನಟಿ ಅದಿತಿ ಅಲ್ಲವೇ ಅಲ್ಲ ಎನ್ನುತ್ತಿವೆ. ಆದರೆ, ಅವರೇ ಇವರು ಎಂದು ಮಾಧ್ಯಮಗಳು ಹೇಳುವುದು ಕೇಳಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ.
ಸೌಂದರ್ಯ ಶಸ್ತ್ರಚಿಕಿತ್ಸೆ ಮತ್ತಿತರೆ ಪ್ರಕ್ರಿಯೆಗಳು ಈ ಮಟ್ಟಿಗೆ ಬದಲಾವಣೆ ತರಬಲ್ಲವೇ ಎಂದು ಹಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಮೂಗಿನ ಬದಲಾವಣೆಗೆ ರೈನೋಪ್ಲ್ಯಾಸ್ಟಿ, ತುಟಿಗಳ ಅಂದ ಹೆಚ್ಚಿಸಲು ಲಿಪ್ ಫಿಲ್ಲರ್ಸ್, ಹಲ್ಲುಗಳ ಬದಲಾವಣೆ, ತೆಳು ಕಡ್ಡಿಯಂತಿದ್ದ ಹುಬ್ಬನ್ನು ದಪ್ಪಗಾಗಿಸಿಕೊಂಡಿದ್ದು- ಯಾವುವೂ ಒರಿಜಿನಲ್ ಅಲ್ಲವೇ ಎಂದು ನೆಟಿಜನ್ಸ್ ಪ್ರಶ್ನಿಸುತ್ತಿದ್ದಾರೆ.
ಕಾಸ್ಮೆಟಿಕ್ ಚಿಕಿತ್ಸೆಗಳ ಬೆಸ್ಟ್ ರೂಪಾಂತರ ಅದಿತಿಯ ಮೇಲಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಈ ಸೌಂದರ್ಯದ ಹಿಂದೆ ಓಡುವ ಸಲುವಾಗಿ ಕತ್ತರಿ ಪ್ರಯೋಗಕ್ಕೊಳಗಾಗುವ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ.
ಅದಿತಿ 2006ರಲ್ಲಿ ಮಲಯಾಳಂ ಚಿತ್ರ ಪ್ರಜಾಪತಿಯೊಂದಿಗೆ ಶೋಬಿಜ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಚಂಡ ವೃತ್ತಿಜೀವನದ ಹಾದಿಯನ್ನು ಹೊಂದಿದ್ದಾರೆ.
ಕೆಲಸದ ಮುಂಭಾಗದಲ್ಲಿ, ಕೊನೆಯದಾಗಿ ಹೀರಾಮಂಡಿಯಲ್ಲಿ ಕಾಣಿಸಿಕೊಂಡ ಅದಿತಿ ರಾವ್ ಹೈದರಿ, ವಿಜಯ್ ಸೇತುಪತಿ ಜೊತೆ ಗಾಂಧಿ ಟಾಕ್ಸ್, ಲಯನೆಸ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.