ಬಾಲಿವುಡ್ ನ ಬ್ಯಾಡ್ ಮ್ಯಾನ್ ಎಂದೇ ಖ್ಯಾತಿ ಪಡೆದ ಸಲ್ಮಾನ್ ಖಾನ್ (Salman Khan) ಮತ್ತು ಕತ್ರಿನಾ ಕೈಫ್ ಲವ್ ಸ್ಟೋರಿ, ಬ್ರೇಕ್ ಅಪ್ ಸ್ಟೋರಿ ಎಲ್ಲವೂ ನಿಮಗೆ ಗೊತ್ತೇ ಇದೆ. ಕತ್ರಿನಾ ಸದ್ಯ ವಿಕ್ಕಿ ಕೌಶಲ್ ಜೊತೆ ಸಪ್ತಪದಿ ತುಳಿದಿದ್ದು, ತಮ್ಮ ವೈವಾಹಿಕ ಜೀವನ ಎಂಜಾಯ್ ಮಾಡ್ತಿದ್ದಾರೆ. ಸಲ್ಮಾನ್ ಖಾನ್ ಇನ್ನೂ ಸಿಂಗಲ್. ಭಾರಿ ಚರ್ಚೆಯಲ್ಲಿದ್ದ ಇವರ ಲವ್ ಸ್ಟೋರಿ ಕೊನೆಯಾಗೋದಕ್ಕೆ ಒಂದು ಕಿಸ್ ಕಾರಣ ಅನ್ನೋ ಮಾತು ಕೇಳಿ ಬರುತ್ತಿದೆ. ಅದರ ಬಗ್ಗೆ ತಿಳಿಯೋಣ.
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ (Katrina Kaif) 2005 ರ 'ಮೈನೆ ಪ್ಯಾರ್ ಕ್ಯೂನ್ ಕಿಯಾ' ಚಿತ್ರದಲ್ಲಿ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಭರ್ಜರಿ ಯಶಸ್ಸು ಕಂಡಿತು. ಮತ್ತು ಕತ್ರಿನಾ ಬಾಲಿವುಡ್ ನಲ್ಲಿ ಮಾನ್ಯತೆ ಪಡೆಯಲು ಪ್ರಾರಂಭಿಸಿದರು. ಈ ಚಿತ್ರದ ಜೊತೆಗೆ, ಅವರ ಸಂಬಂಧದ ಸುದ್ದಿಯೂ ಭಾರಿ ಚರ್ಚೆಯಾಗಿತ್ತು.
ಸಲ್ಮಾನ್ ಖಾನ್ ಅವರ ಹೆಸರು ಎಷ್ಟೋ ನಟಿಯರ ಜೊತೆ ಈ ಹಿಂದೆ ಕೇಳಿ ಬಂದಿತ್ತು. ಆದರೆ ಅಭಿಮಾನಿಗಳು ಭಾಯಿಜಾನ್ ಮತ್ತು ಕತ್ರಿನಾ ಅವರ ಜೋಡಿಯನ್ನು ಇಷ್ಟಪಡಲು ಪ್ರಾರಂಭಿಸಿದರು. ಸಲ್ಮಾನ್ ಮತ್ತು ಕತ್ರಿನಾ ಚಲನಚಿತ್ರ ಪ್ರಚಾರಗಳು, ರಿಯಾಲಿಟಿ ಶೋಗಳು, ಸಂದರ್ಶನಗಳು ಮತ್ತು ಅನೇಕ ಪ್ರಶಸ್ತಿ ಸಮಾರಂಭಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದದ್ದು, ಇವರಿಬ್ಬರ ಸಂಬಂಧಕ್ಕೆ ಹೆಚ್ಚು ಪುಷ್ಟಿ ನೀಡಿತ್ತು ಅನ್ನೋದು ಸುಳ್ಳಲ್ಲ.
ಸಲ್ಮಾನ್ ಮತ್ತು ಕತ್ರಿನಾ ತಮ್ಮ ರಿಲೇಶನ್ ಶಿಪ್ ಬಗ್ಗೆ ಎಂದಿಗೂ ಬಹಿರಂಗವಾಗಿ ಎಲ್ಲಿಯೂ, ಏನನ್ನೂ ಹೇಳಿಲ್ಲ. ಆದರೆ, ಇಬ್ಬರ ಪ್ರೀತಿಯು ಆ ಸಮಯದಲ್ಲಿ ಎಲ್ಲರ ಕಣ್ಣಿಗೂ ಕಾಣಿಸಿದ್ದು ಮಾತ್ರ ನಿಜಾ. ಇಬ್ಬರೂ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಸಹ ಭಾರಿ ಸದ್ದು ಮಾಡುತ್ತಿತ್ತು. ಆದರೆ ಅಷ್ಟರಲ್ಲೇ ಇಬ್ಬರ ಬ್ರೇಕ್ ಅಪ್ ಸುದ್ದಿ ಕೇಳಿ ಬಂದಿದ್ದು, ಅಭಿಮಾನಿಗಳಿಗೆ ಶಾಕ್ ಆಗಿತ್ತು. ಇವರಿಬ್ಬರ ಬ್ರೇಕ್ ಅಪ್ ಗೆ ಹಲವು ಕಾರಣಗಳನ್ನು ಮಾಧ್ಯಮಗಳು ಅಂದು ನೀಡಿದ್ದವು, ಆದರೆ ಇಬ್ಬರು ಬೇರೆಯಾಗೋದಕ್ಕೆ ಸಿನಿಮಾದಲ್ಲಿನ ಕಿಸ್ಸಿಂಗ್ ಸೀನ್ ಕಾರಣ ಅನ್ನೋದು ಹೆಚ್ಚು ಹೈಲೈಟ್ ಆಯ್ತು. ಈ ಕಥೆ ಏನು ಅನ್ನೋದನ್ನು ತಿಳಿಯೋಣ.
ಸಲ್ಮಾನ್ ಖಾನ್ ಅವರ ಪಾಸೆಸಿವ್ ಸ್ವಭಾವದಿಂದಾಗಿಯೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಕತ್ರಿನಾ ಮತ್ತು ಅವರ ಸಂಬಂಧದ ಮುರಿದು ಬೀಳಲು ಈ ಸ್ವಭಾವವೇ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಕತ್ರಿನಾ ಮತ್ತು ಜಾನ್ ಅಬ್ರಹಾಂ (John Abraham) ಅವರ 'ನ್ಯೂಯಾರ್ಕ್' ಚಿತ್ರ 2009 ರಲ್ಲಿ ಬಿಡುಗಡೆಯಾಗಿತ್ತು, ಈ ಚಿತ್ರದಲ್ಲಿ ಜಾನ್ ಮತ್ತು ಕತ್ರಿನಾ ಕಿಸ್ಸಿಂಗ್ ಸೀನ್ ನೋಡಿ ಸಲ್ಮಾನ್ ಖಾನ್ ಕೋಪಗೊಂಡಿದ್ದರಂತೆ, ಇದರಿಂದಲೇ ಅವರ ಸಂಬಂಧದಲ್ಲಿ ಬಿರುಕು ಆರಂಭವಾಯಿತು ಎನ್ನಲಾಗುತ್ತೆ.
ಒಂದು ಕಿಸ್ಸಿಂಗ್ ಸೀನ್ (Kissing scene) ಈ ಪ್ರೇಮಿಗಳ ನಡುವೆ ಮನಸ್ಥಾಪಕ್ಕೆ ಕಾರಣವಾಯಿತು. ಪಾಸೆಸಿವ್ ಗುಣವುಳ್ಳ ಸಲ್ಮಾನ್ ಖಾನ್ ಗೆ ಕಿಸ್ಸಿಂಗ್ ಸೀನ್ ಸಹಿಸಿಕೊಳ್ಳೋದಕ್ಕೆ ಸಾಧ್ಯವಾಗಲಿಲ್ಲ. ಇದರಿಂದ ಪ್ರೀತಿಯಲ್ಲಿ ಬಿರುಕು ಮೂಡಿ, ಕೊನೆಗೆ ಸಲ್ಮಾನ್ ಮತ್ತು ಕತ್ರಿನಾ ಕೈಫ್ 2010 ರಲ್ಲಿ ಬೇರ್ಪಟ್ಟರು. ಇದರ ಹಿಂದೆ ಮತ್ತಷ್ಟು ಕಾರಣಗಳನ್ನು ನೀಡಲಾಗಿದೆ. ಸಲ್ಮಾನ್ ಅವರ ಪಾಸೆಸಿವ್ (possessiveness)ಮತ್ತು ಆಕ್ರಮಣಕಾರಿ ಸ್ವಭಾವವನ್ನು ನಿಭಾಯಿಸಲು ಕತ್ರಿನಾಗೆ ಸಾಧ್ಯವಾಗಲಿಲ್ಲ ಎಂದು ಕೂಡ ಮಾಧ್ಯಮ ವರದಿ ಮಾಡಿತ್ತು.
ಸಲ್ಮಾನ್ ಅವರ ಸ್ವಭಾವ ಕತ್ರಿನಾರನ್ನು ಕೆಟ್ಟದಾಗಿ ಕಾಡುತ್ತಿತ್ತು ಮತ್ತು ಅದಕ್ಕಾಗಿಯೇ ಅವರು ಸಲ್ಮಾನ್ ಅವರಿಂದ ದೂರವಿದ್ದರು. 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ' ಚಿತ್ರದ ಸಮಯದಲ್ಲಿ, ಕತ್ರಿನಾ, ರಣಬೀರ್ ಕಪೂರ್ ಗೆ ಹತ್ತಿರವಾಗಲು ಪ್ರಾರಂಭಿಸಿದರು. ಅದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಅವರು ತನಗೆ ಈ ರಿಲೇಶನ್ ಶಿಪ್ ನಲ್ಲಿ ಇರೋದಕ್ಕೆ ಸಾಧ್ಯ ಇಲ್ಲ ಎಂದು ಸಲ್ಮಾನ್ ಖಾನ್ ಗೆ ಮೆಸೇಜ್ ಮಾಡಿರೋದಾಗಿ ವರದಿಗಳು ತಿಳಿಸಿವೆ.
ಆದಾಗ್ಯೂ, ಅವರಿಬ್ಬರೂ ತಮ್ಮ ಬ್ರೇಕಪ್ (breakup) ಬಗ್ಗೆ ಬಹಿರಂಗವಾಗಿ ಇಲ್ಲಿವರೆಗೂ ಏನನ್ನೂ ಹೇಳಲಿಲ್ಲ. ಆದರೆ ಇಂದಿಗೂ ಇಬ್ಬರೂ ಕೂಡ ಉತ್ತಮ ಸ್ನೇಹಿತರಾಗಿದ್ದಾರೆ, ಅಲ್ಲದೆ ಅವರವರ ಜೀವನದಲ್ಲಿ ಮುಂದೆ ಸಾಗಿದ್ದಾರೆ ಅನ್ನೋದು ಸುಳ್ಳಲ್ಲ.