ಮುಂಬೈ(ಜೂ. 04) 'ಚಲಿಸುವಾ ಚೆಲುವೆ...' ಈ ಹಾಡು ಹಲವರಿಗೆ ನೆನಪಿರಬಹುದು. ಉಲ್ಲಾಸ ಉತ್ಸಾಹ ಚಿತ್ರದ ಗೀತೆ. ನಾಯಕಿ ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ನಟಿ ಯಾಮಿ ಗೌತಮ್ ಮತ್ತು ನಿರ್ದೇಶಕ ಆದಿತ್ಯ ಧಾರ್ ವೈವಾಹಿಜ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಮದುವೆ ಸಂಭ್ರಮದ ವಿಚಾರ ತಿಳಿಸಿದ್ದಾರೆ. 2019ರ ಬ್ಲಾಕ್‌ಬಸ್ಟರ್ ಚಲನಚಿತ್ರ "ಉರಿ: ದಿ ಸರ್ಜಿಕಲ್ ಸ್ಟ್ರೈಕ್ಸ್" ನಲ್ಲಿ ಯಾಮಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. 32 ವರ್ಷದ ಗೌತಮ್ ಮತ್ತು 38 ವರ್ಷದ ಆದಿತ್ಯ ಧಾರ್ ಉರಿ ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ನಮ್ಮ ಕುಟುಂಬದ ಆಶೀರ್ವಾದದೊಂದಿಗೆ, ನಾವು ಇಂದು ಆತ್ಮೀಯ ವಿವಾಹ ಸಮಾರಂಭದಲ್ಲಿ ಸತಿಪತಿಗಳಾಗಿದ್ದೇವೆ. ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎಂಬುದನ್ನು ತಿಳಿಸಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಯಾಮಿ ಕೇಳಿಕೊಂಡಿದ್ದಾರೆ. ಕನ್ನಡದ ಉಲ್ಲಾಸ ಉತ್ಸಾಹ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಕನ್ನಡ ಚಿತ್ರರಂಗದಿಂದಲೇ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಇನ್ನು ಆದಿತ್ಯ ಈಗ 'ದಿ ಇಮ್ಮೊರ್ಟಲ್ ಅಶ್ವತ್ಥಾಮ' ಸಿನಿಮಾವನ್ನು ನಿರ್ದೇಶಿಸಲಿದ್ದು, ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. Bollywood actor Yami Gautam has tied the knot with director Aditya Dhar. ಬಾಲಿವುಡ್ ನಿರ್ದೇಶಕನ ಜತೆ ಯಾಂಇ ಗೌತಮ್ ಹೊಸಜೀವನ