ಕ್ಯಾನ್ಸರ್ ಗೆದ್ದ ಮನಿಷಾ ಕೊಯಿರಾಲ: ಹೀಗಾಗಿದ್ದಾರೆ ನೋಡಿ

Suvarna News   | Asianet News
Published : Jun 04, 2021, 01:14 PM ISTUpdated : Jun 04, 2021, 02:11 PM IST

ಸೌದಾಗರ್, ದಿಲ್ ಸೆ, 1942 ಎ ಲವ್ ಸ್ಟೋರಿ, ಬಾಂಬೆ, ಖಮೋಶಿ, ಮನ್ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ ನಟಿ ಮನೀಷಾ ಕೊಯಿರಾಲಾ. ತಮ್ಮ ವೃತ್ತಿ ಜೀವನದಲ್ಲಿ 29 ವರ್ಷಗಳ ಅವಧಿಯಲ್ಲಿ ಅನೇಕ ಬ್ಲಾಕ್‌ಬಸ್ಟರ್ ಫಿಲ್ಮ್‌ಗಳನ್ನು ನೀಡಿದ್ದಾರೆ ಈ ನೇಪಾಳಿ ಚೆಲುವೆ. ತಮ್ಮ ಚೊಚ್ಚಲ ಚಿತ್ರ ಸೌದಾಗರ್‌ನಲ್ಲಿ ದಿಲೀಪ್ ಕುಮಾರ್ ಮತ್ತು ರಾಜ್ ಕುಮಾರ್ ಅವರಂತಹ ಪ್ರಮುಖ ನಟರ ಜೊತೆ ಕೆಲಸ ಮಾಡಿದ ಮನೀಶಾ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ, ನಟಿ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಅವರ ಮೊದಲ ಫೋಟೋಶೂಟ್‌ನ ಫೋಟೋ ಸಖತ್‌ ವೈರಲ್ ಆಗುತ್ತಿದೆ. ಆ ಪೋಟೋದಲ್ಲಿ ತುಂಬಾ ಕ್ಯೂಟ್‌ ಆಗಿ ಕಾಣುವ ಮನೀಷಾರನ್ನು ಇಂದು ಗುರುತಿಸುವುದು ಸಹ ಕಷ್ಟ. ಫೋಟೋಗೆ  ಥ್ರೋಬ್ಯಾಕ್ ನನ್ನ ಮೊದಲ ಫೋಟೋಶೂಟ್ ಎಂದು ಕ್ಯಾಪ್ಷನ್‌ ನೀಡಿದ್ದಾರೆ ಮನೀಷಾ.  

PREV
111
ಕ್ಯಾನ್ಸರ್ ಗೆದ್ದ ಮನಿಷಾ ಕೊಯಿರಾಲ: ಹೀಗಾಗಿದ್ದಾರೆ ನೋಡಿ

ಮನೀಷಾ ಶೇರ್‌ ಮಾಡಿರುವ ಫೋಟೋ ಬಾಲಿವುಡ್ ಸೆಲೆಬ್ರೆಟಿಗಳು ಹಾಗೂ ಫ್ಯಾನ್ಸ್‌ನಿಂದ ಸಾಕಷ್ಟು ಕಾಮೆಂಟ್‌ ಗಿಟ್ಟಿಸಿದೆ. 

211

ನಟ ಗೇಬ್ರಿಯೆಲಾ ರೈಟ್ ಬ್ಯೂಟಿ ಎಂದು ಕಾಮೆಂಟ್‌ ಮಾಡಿದರೆ, ಆಯುಷ್ಮಾನ್ ಖುರಾನಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಶೇರ್‌ ಮಾಡಿದ ಮನೀಷಾ ಕೊಯಿರಾಲಾರ ಪ್ರಶಂಸೆಯ ಕಥೆ ಎಂದು ಬರೆದಿದ್ದಾರೆ.

311

ನಟಿ ಟಬು ಬ್ಯೂಟಿ ಎಂದು ಕಾಮೆಂಟ್‌ ಮಾಡಿದ್ದಾರೆ. ದಿಯಾ ಮಿರ್ಜಾ, ಶ್ರುತಿ ಹಾಸನ್, ಲಿಸಾ ರೇ ಹಾರ್ಟ್‌ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.

411

ತನ್ನ ಮೊದಲ ಚಿತ್ರ ಸೌದಾಗರ್‌ ಮೂಲಕ ಮನೀಷಾ ಕೊಯಿರಾಲಾ 'ಇಲು ಇಲು ಗರ್ಲ್' ಎಂದು ಫೇಮಸ್‌ ಆದರು. 

511

ಮನಿಷಾಗೆ ತನ್ನ ವೃತ್ತಿ ಜೀವನದ ಆರಂಭದಲ್ಲಿ ದೊರೆತ ಸ್ಟಾರ್ಡಮ್ ಅನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಕೆಲವು ಫ್ಲಾಪ್ ಚಿತ್ರಗಳ ನಂತರ ಒತ್ತಡದಿಂದಾಗಿ, ಮನೀಷಾ ಡ್ರಗ್ಸ್‌ ಹಾಗೂ ಡ್ರಿಂಕ್ಸ್‌ ಚಟಕ್ಕೆ ಸಿಲುಕಿದರು. ಇದರಿಂದಾಗಿ ಚಲನಚಿತ್ರಗಳಲ್ಲಿ ನಟಿಸುವ ಅವಕಾಶವೂ ಕ್ರಮೇಣ ಕಡಿಮೆಯಾಯಿತು. ಆರೋಗ್ಯವೂ ಹದಗೆಟ್ಟಿತ್ತು.

611

ಇದರ ಮಧ್ಯೆ, ಅವರು ನೇಪಾಳದ ಉದ್ಯಮಿ ಸಾಮ್ರಾತ್ ದಹಲ್ ಅವರನ್ನು  ಪ್ರೀತಿಸಿ 2010ರಲ್ಲಿ ವಿವಾಹವಾದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ.  2 ವರ್ಷಗಳ ನಂತರ, 2012 ರಲ್ಲಿ, ಅವರ ಸಂಬಂಧ ಮುರಿದುಹೋಯಿತು ಮತ್ತು ಮನೀಷಾ ವಿಚ್ಛೇದನ ಪಡೆದರು. 

711

ವೃತ್ತಿ ಮತ್ತು ಜೀವನದ ಕಹಿ ಘಟನೆಗಳ ಕಾರಣದಿಂದ ಮನೀಷಾ ಕುಸಿಯಲು ಪ್ರಾರಂಭಿಸಿದರು. ದುಃಖವನ್ನು ಮರೆಯಲು, ಮತ್ತೊಮ್ಮೆ ಆಲ್ಕೊಹಾಲ್ ಮತ್ತು ಮಾದಕ ವಸ್ತುಗಳನ್ನು ಆಶ್ರಯಿಸಲು ಪ್ರಾರಂಭಿಸಿದರು.
 
811

2003ರವರೆಗೆ, ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದ ಮನೀಷಾರ ಕೆರಿಯರ್‌ ಗ್ರಾಫ್‌ ನಂತರ ಇಳಿಯಿತು. 2012 ರಲ್ಲಿ ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು.

911

ಕ್ಯಾನ್ಸರ್ ವಿರುದ್ಧದ ಯುದ್ಧವನ್ನು ಗೆದ್ದ ನಂತರ, ಮತ್ತೆ ಲೈಫ್‌ ಟ್ರ್ಯಾಕ್‌ಗೆ ತರಲು ಅವರಿಗೆ ಬಹಳ ಸಮಯ ಹಿಡಿಯಿತು. 2018 ರಲ್ಲಿ ಮನೀಷಾ ಸಂಜು ಚಿತ್ರದಲ್ಲಿ ಕಾಣಿಸಿಕೊಂಡರು. 

1011

ನೇಪಾಳದ ರಾಜ ಕುಟುಂಬಕ್ಕೆ ಸೇರಿದ ಮನೀಷಾರ ತಂದೆ ಪ್ರಕಾಶ್ ಕೊಯಿರಾಲಾ ಮತ್ತು ತಾಯಿ ಸುಷ್ಮಾ ಕೊಯಿರಾಲಾ. ತಂದೆ ನೇಪಾಳದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದಾರೆ, ನೇಪಾಳದ ಮಾಜಿ ಪ್ರಧಾನಿ ಬಿಶ್ವೇಶ್ವರ
ಪ್ರಸಾದ್ ಕೊಯಿರಾಲಾರ ಮೊಮ್ಮಗಳು. ನಟಿಯ ಸಹೋದರ ಸಿದ್ಧಾರ್ಥ್ ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

1111

ಮನೀಷಾ ಧನ್ವಾನ್, ಮಿಲನ್‌,1942 ಎ ಲವ್ ಸ್ಟೋರಿ, ಬಾಂಬೆ, ಅಕೆಲೆ ಹಮ್ ಅಕೆಲೆ ತುಮ್,  ಅಗ್ನಿಸಾಕ್ಷಿ, ಗುಪ್ತ್‌, ದಿಲ್ ಸೆ, ಮನ್, ಲಜ್ಜಾ, ಸಂಜು ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

click me!

Recommended Stories