ಆಕೆ 70 ಮತ್ತು 80ರ ದಶಕವನ್ನು ಆಳಿದ ಸುರ ಸುಂದರಾಂಗಿ ನಟಿ. ತಮ್ಮ ಸೌಂದರ್ಯ ಹಾಗೂ ಅಭಿನಯದಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಆಕೆ ಮತ್ಯಾರೂ ಅಲ್ಲ ರೀನಾ ರಾಯ್. ಆದರೆ ಮದುವೆಯ ನಂತರ ರೀನಾ ರಾಯ್ ಅವರ ವೃತ್ತಿಜೀವನವು ಸಂಪೂರ್ಣವಾಗಿ ಹಾಳಾಗಿ ಹೋಯಿತು. ಪ್ರಸ್ತುತ ರೀನಾ ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ, 1972ರಲ್ಲಿ ರೀನಾ ರಾಯ್ ಚಿತ್ರೋದ್ಯಮಕ್ಕೆ ಪ್ರವೇಶಿಸಿದಾಗ, ಅವರ ಜೀವನಕ್ಕೆ ಪ್ರವೇಶಿಸಿದ ಮೊದಲ ವ್ಯಕ್ತಿ ಶತ್ರುಘ್ನ ಸಿನ್ಹಾ. ಆ ಸಮಯದಲ್ಲಿ ಅವರ ಲವ್ ಸ್ಟೋರಿ ಸಾಕಷ್ಟು ಸುದ್ದಿ ಮಾಡಿತ್ತು. ನಂತರ 7 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ರೀನಾ ಮತ್ತು ಶತ್ರುಘ್ನ ಸಿನ್ಹಾ ಬೇರೆಯಾದರು.
ವರದಿಗಳ ಪ್ರಕಾರ, ಶತ್ರುಘ್ನ ಸಿನ್ಹಾ ಅವರು ರೀನಾ ರಾಯ್ ಅವರಿಗೆ ತಿಳಿಸದೆ ಪೂನಂ ಸಿನ್ಹಾ ಅವರನ್ನು ವಿವಾಹವಾದರು, ಇದರಿಂದಾಗಿ ರೀನಾ ಸಾಕಷ್ಟು ಆಘಾತಕ್ಕೊಳಗಾಗಿದ್ದರು. ಶತ್ರುಘ್ನ ಸಿನ್ಹಾರಿಂದ ದೂರವಾದ ನಂತರ ಆ ಕಾಲದ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಮೊಹ್ಸಿನ್ ಖಾನ್ ರೀನಾ ಅವರ ಜೀವನದಲ್ಲಿ ಪ್ರವೇಶಿಸಿದರು. ಸ್ವಲ್ಪ ಸಮಯದ ವರೆಗೂ ಇಬ್ಬರೂ ಡೇಟಿಂಗ್ ಮಾಡಿ, ನಂತರ ವಿವಾಹವಾದರು.
ರೀನಾ ಮತ್ತು ಮೊಹ್ಸಿನ್ 1983ರಲ್ಲಿ ವಿವಾಹವಾದರು. ಮದುವೆಯ ನಂತರ ರೀನಾ ಪಾಕಿಸ್ತಾನಕ್ಕೆ ಹೋದರು. ರೀನಾ ರಾಯ್ ಮತ್ತು ಮೊಹ್ಸಿನ್ ಅವರಿಗೆ ಜನ್ನತ್ ಎಂಬ ಮಗಳಿದ್ದಾಳೆ. ಆದರೆ ಇವರಿಬ್ಬರ ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ. ಮದುವೆಯ ನಂತರ ರೀನಾ ಮತ್ತು ಮೊಹ್ಸಿನ್ ನಡುವೆ ಜಗಳ ಪ್ರಾರಂಭವಾಯಿತು. ಇಬ್ಬರೂ ಸಪರೇಟ್ ಆದರು. 1990ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡರು.
ಮೊಹ್ಸಿನ್ ಲಂಡನ್‌ನಲ್ಲಿ ನೆಲೆಯೂರಲು ಮತ್ತು ಬ್ರಿಟಿಷ್ ಪೌರತ್ವವನ್ನು ಪಡೆಯಲು ಬಯಸಿದ್ದರು. ವಿಚ್ಛೇದನದ ನಂತರ, ರೀನಾ ಭಾರತಕ್ಕೆ ಮರಳಿದರು, ಆದರೆ ಮಗುವಿನ ಪಾಲನೆ ಹಕ್ಕು ಮೊಹ್ಸಿನ್ ಅವರ ಬಳಿಯೇ ಇತ್ತು. ಯಾವುದೇ ರೀತಿಯಲ್ಲಿ ರೀನಾ ತನ್ನ ಮಗಳ ಪಾಲನೆಯ ಹಕ್ಕನ್ನು ಪಡೆಯಲು ಬಯಸಿದ್ದರು. ರೀನಾ ಅವರ ಮಾಜಿ ಗೆಳೆಯ ಶತ್ರುಘ್ನ ಸಿನ್ಹಾ, ಇದಕ್ಕೆ ನೆರವಾದರು ಎನ್ನಲಾಗುತ್ತಿದೆ.
ಆ ನಂತರ, ರೀನಾ ತನ್ನ ಮಗಳ ಪಾಲನೆಯನ್ನು ಪಡೆದರು ಮತ್ತು ಅವರು ತಮ್ಮ ಮಗಳನ್ನು ಭಾರತಕ್ಕೆ ಮರಳಿ ತಂದ ತಕ್ಷಣ, ರೀನಾ ರಾಯ್ ತನ್ನ ಹೆಸರನ್ನು ಜನ್ನತ್‌ನಿಂದ ಸನಮ್ ಎಂದು ಬದಲಾಯಿಸಿದರು. ಮೊಹ್ಸಿನ್‌ನಿಂದ ವಿಚ್ಛೇದನದ ನಂತರ, ರೀನಾ ರಾಯ್ ತನ್ನ ಜೀವನದುದ್ದಕ್ಕೂ ಏಕಾಂಗಿಯಾಗಿದ್ದರು. ಇಷ್ಟೆಲ್ಲ ಆದ ನಂತರ ರೀನಾ ಮತ್ತೆ ಬಾಲಿವುಡ್‌ನಲ್ಲಿ ಕೆಲಸ ಹುಡುಕಿಕೊಂಡು ಹೋದಾಗ ಅವರಿಗೆ ಯಶಸ್ಸು ಸಿಗಲಿಲ್ಲ.
ಅಂತಿಮವಾಗಿ, ರೀನಾ ರಾಯ್ ಬಾಲಿವುಡ್‌ನಿಂದ ದೂರವಾದರು. ವರದಿಗಳ ಪ್ರಕಾರ, ರೀನಾ ತನ್ನ ಮಗಳು ಸನಮ್ ಜೊತೆಗೆ ಮುಂಬೈನಲ್ಲಿ ನಟನಾ ತರಗತಿಗಳನ್ನು ನಡೆಸುತ್ತಿದ್ದಾರೆ. ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದಾರೆ.