ಬಾಲಿವುಡ್‌ನಲ್ಲಿ ಹೆಸರು ಬದಲಿಸಿ ಸೂಪರ್‌ಸ್ಟಾರ್ ಆದ ನಟಿ, ಆ ಒಂದು ಕಳಂಕದಿಂದ ಕೆರಿಯರ್‌ ಸಂಪೂರ್ಣ ಹಾಳಾಯ್ತು!

Published : Oct 22, 2023, 03:22 PM ISTUpdated : Oct 22, 2023, 04:04 PM IST

ಬಾಲಿವುಡ್‌ನಲ್ಲಿ ಚಿಕ್ಕ ವಯಸ್ಸಿನಲ್ಲೇ ಹೆಸರು ಮತ್ತು ಖ್ಯಾತಿ ಗಳಿಸುವಲ್ಲಿ ಯಶಸ್ವಿಯಾದ ಅನೇಕ ನಟಿಯರಿದ್ದಾರೆ. ಆದ್ರೆ ಈ ನಟಿ ತಮ್ಮ ಒಂದೇ ಒಂದು ಚಿತ್ರದ ಮೂಲಕ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆಗಿದ್ದರು. ಆದರೆ ಅವರ ಮೇಲೆ ಕೇಳಿ ಬಂದ ಆಪಾದನೆ ಸಿನಿಮಾ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಿತು.

PREV
19
ಬಾಲಿವುಡ್‌ನಲ್ಲಿ ಹೆಸರು ಬದಲಿಸಿ ಸೂಪರ್‌ಸ್ಟಾರ್ ಆದ ನಟಿ, ಆ ಒಂದು ಕಳಂಕದಿಂದ ಕೆರಿಯರ್‌ ಸಂಪೂರ್ಣ ಹಾಳಾಯ್ತು!

ಬಾಲಿವುಡ್‌ನಲ್ಲಿ ಚಿಕ್ಕ ವಯಸ್ಸಿನಲ್ಲೇ ಹೆಸರು ಮತ್ತು ಖ್ಯಾತಿ ಗಳಿಸುವಲ್ಲಿ ಯಶಸ್ವಿಯಾದ ಅನೇಕ ನಟಿಯರಿದ್ದಾರೆ. 1985ರಲ್ಲಿ, ಒಂದೇ ಒಂದು ಚಿತ್ರದ ಮೂಲಕ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದ ನಟಿಯೊಬ್ಬರಿದ್ದರು. ಆದರೆ ನಟಿ ಮಾಡಿದ ಒಂದೇ ಒಂದು ತಪ್ಪು ಅವರ ಸಿನಿಮಾ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಿತು.

29

ಆ ನಟಿ ಮತ್ಯಾರೂ ಅಲ್ಲ. ಬಾಲಿವುಡ್‌ನಲ್ಲಿ ದಶಕಗಳ ಹಿಂದೆ ಮಿಂಚಿದ ನಟಿ ಮಂದಾಕಿನಿ. ವರದಿಗಳ ಪ್ರಕಾರ, ಬಾಲಿವುಡ್‌ನ ಶೋಮ್ಯಾನ್ ನಿರ್ದೇಶಕ ಮತ್ತು ನಟ ರಾಜ್ ಕಪೂರ್ ಮಂದಾಕಿನಿಯನ್ನು ಮೊದಲ ಬಾರಿಗೆ ನೋಡಿದಾಗ, ಆಕೆಗೆ ಕೇವಲ 22 ವರ್ಷ.

39

ರಾಜ್ ಕಪೂರ್ ಮಂದಾಕಿನಿಯನ್ನು ನೋಡಿದ ತಕ್ಷಣ ಆಕೆಯನ್ನು ತನ್ನ ಚಿತ್ರಕ್ಕೆ ನಾಯಕಿಯನ್ನಾಗಿ ಮಾಡುತ್ತೇನೆ ಎಂದು ಮನಸ್ಸು ಮಾಡಿದ್ದರು. ಮಂದಾಕಿನಿ ಅಷ್ಟು ಸುಂದರವಾಗಿದ್ದರು. ಹಲವು ವರ್ಷಗಳ ಕಾಲ ಬಾಲಿವುಡ್‌ ಆಳುತ್ತಾರೆ ಎಂದು ಆಗಲೇ ಹಲವರು ಭವಿಷ್ಯ ನುಡಿದಿದ್ದರು.

49

ನಂತರ ರಾಜ್ ಕಪೂರ್ ಅವರು ತಮ್ಮ 'ರಾಮ್ ತೇರಿ ಗಂಗಾ ಮೈಲಿ' ಚಿತ್ರಕ್ಕೆ ಮಂದಾಕಿನಿಯನ್ನು ನಾಯಕಿಯನ್ನಾಗಿ ಮಾಡಿದರು. ಯಾಸ್ಮಿನ್ ಎಂಬ ನಟಿಯ ಹೆಸರನ್ನು ಮಂದಾಕಿನಿ ಎಂದು ಬದಲಾಯಿಸಿದವರು

59

ರಾಜ್ ಕಪೂರ್. 1985ರಲ್ಲಿ ಬಿಡುಗಡೆಯಾದ ರಾಜ್ ಕಪೂರ್ ಅವರ ಬ್ಲಾಕ್‌ಬಸ್ಟರ್ ಚಿತ್ರ 'ರಾಮ್ ತೇರಿ ಗಂಗಾ ಮೈಲಿ' ನಲ್ಲಿ ಮಂದಾಕಿನಿ 'ಗಂಗಾ' ಪಾತ್ರವನ್ನು ನಿರ್ವಹಿಸಿದ್ದಾರೆ. 

69

ಮಂದಾಕಿನಿ ತನ್ನ ದಿಟ್ಟ ವ್ಯಕ್ತಿತ್ವದಿಂದ ಎಲ್ಲರನ್ನು ಬೆರಗುಗೊಳಿಸಿದರು. ಚಿತ್ರದಲ್ಲಿನ ಜಲಪಾತದ ದೃಶ್ಯವು ಆ ಸಮಯದಲ್ಲಿ ಸಾಕಷ್ಟು ವಿವಾದವನ್ನು ಸೃಷ್ಟಿಸಿದವು. ಚಿತ್ರ ಹಲವು ಪ್ರಶಸ್ತಿಗಳನ್ನು ಸಹ ಗೆದ್ದುಕೊಂಡಿತು. ಈ ಚಿತ್ರದ ಮೂಲಕ ಮಂದಾಕಿನಿ ರಾತ್ರೋರಾತ್ರಿ ಸ್ಟಾರ್ ಆದರು. ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಸಹ ಬಂದವು. 

79

ಮಂದಾಕಿನಿಯ ವೃತ್ತಿಜೀವನವು ಉತ್ತಮವಾಗಿ ಸಾಗುತ್ತಿತ್ತು. ಆದರೆ ಇದೇ ಸಂದರ್ಭದಲ್ಲಿ ಆಕೆಯ ಹೆಸರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಥಳುಕು ಹಾಕಿಕೊಂಡಿತು. ಆದರೂ ಮಂದಾಕಿನಿ ಈ ಸಂಬಂಧವನ್ನು ಬಲವಾಗಿ ನಿರಾಕರಿಸಿದರು.

89

ಆದರೂ ಈ ಕಳಂಕ ಅವರನ್ನು ಬೆಂಬಿಡದೆ ಕಾಡಿತು. ಮಂದಾಕಿನಿ ತನ್ನ ವೃತ್ತಿಜೀವನದ ಉತ್ತುಂಗದಲ್ಲಿ ಮಾಡಿದ ಒಂದು ತಪ್ಪು ಅವರ ವೃತ್ತಿಜೀವನವನ್ನು ಹಾಳುಮಾಡಿತು.

99

ಬಾಲಿವುಡ್ ತೊರೆದ ನಂತರ, ಮಂದಾಕಿನಿ ಮಾಜಿ ಬೌದ್ಧ ಸನ್ಯಾಸಿ ಡಾ. ಕಗ್ಯೂರ್ ಟಿ. ರಿಂಪೋಚೆ ಠಾಕೂರ್ ಅವರನ್ನು ವಿವಾಹವಾದರು. ಬೌದ್ಧ ಧರ್ಮವನ್ನು ಸ್ವೀಕರಿಸಿದರು. ದಂಪತಿಗೆ ರಬ್ಬಿಲ್ ಎಂಬ ಮಗ ಮತ್ತು ರಬ್ಜೆ ಇನ್ನಾಯ ಎಂಬ ಮಗಳು ಇದ್ದಾರೆ.

Read more Photos on
click me!

Recommended Stories