ಸಿಂಪಲ್ ಸೀರೆಯುಟ್ಟ ವಿದ್ಯಾ ಬಾಲನ್: ಈ ಬಾರಿ ಪೋಸ್ ಚೇಂಜ್

First Published | Sep 15, 2021, 5:29 PM IST
  • ಬಾಲಿವುಡ್ ನಟಿ ವಿದ್ಯಾ ಬಾಲನ್ ಹೊಸ ಸೀರೆ ಲುಕ್
  • ಬ್ಲಾಕ್ ಕಲರ್ ಸೀರೆಯಲ್ಲಿ ಸಿಂಪಲ್ ಆಗಿ ಕಾಣಿಸಿದ ನಟಿ

ಬಾಲಿವುಡ್ ನಟಿ ವಿದ್ಯಾಬಾಲನ್ ಅವರ ಸೀರೆಗಳ ಕಲೆಕ್ಷನ್ ಯಾರಿಗಿಷ್ಟ ಇಲ್ಲ ಹೇಳಿ ? ಸೀರೆಯಲ್ಲೇ ಕಾಣಿಸಿಕೊಳ್ಳುವ ನಟಿಯ ಇನ್‌ಸ್ಟಾಗ್ರಾಮ್ ತುಂಬಾ ಅಂದ ಚಂದದ ಸೀರೆಗಳು

ಈ ಬಾರಿ ನಟಿ ಬ್ಲಾಕ್ & ವೈಟ್ ಕಾಂಬಿನೇಷನ್ ಸೀರೆ ಉಟ್ಟಿದ್ದಾರೆ. ಪ್ರತಿಬಾರಿಯಂತೆ ಈ ಬಾರಿಯೂ ನಟಿಯ ಲುಕ್ ಬಗ್ಗೆ ಎರಡು ಮಾತಿಲ್ಲ. ಆದರೆ ಏನೋ ಸ್ವಲ್ಪ ಬದಲಾಗಿದೆ

Tap to resize

ವಿದ್ಯಾ ಬಾಲನ್ ಅವರ ಸೀರೆಗಳ ಆಯ್ಕೆ ಕ್ಲಾಸಿಯಾಗಿರುತ್ತದೆ. ಅವರ ಪೋಸ್‌ಗಳೂ ಅಷ್ಟೇ. ಈ ಬಾರಿ ಕ್ಯಾಮೆರಾಗೆ ಪೋಸ್ ಕೊಡುವಾಗ ಸ್ವಲ್ಪ ಬದಲಾವಣೆ ಇದೆ

ಕಪ್ಪು ಅಂಚಿನ ಸೀರೆಗೆ ಬಿಳಿಯ ಪ್ರಿಂಟ್, ಸೀರೆಯ ಮೈ ಬೂದು ಬಣ್ಣ. ಒಂಥಾರ ಸ್ಪೆಷಲ್ ಕಾಂಬಿನೇಷನ್. ಇದಕ್ಕೆ ಬ್ಲಾಕ್ ಕಲರ್ ಬ್ಲೌಸ್. ಕಾಟನ್ ಮೆಟೀರಿಯಲ್‌ನಂತೆ ಕಾಣುವ ಸೀರೆಯಲ್ಲಿ ಸುಂದರಿಯಾಗಿ ಕಾಣಸಿದ್ದಾರೆ ನಟಿ.

ಬೂದು ಬಣ್ಣದ ಸೀರೆಗೆ ಆಕ್ಸೈಡೈಸ್ ಜ್ಯುವೆಲ್ಲರಿ ಮ್ಯಾಚ್ ಮಾಡಿಕೊಂಡಿದ್ದಾರೆ. ಚಂದದ ವಿಭಿನ್ನ ವಿನ್ಯಾಸದ ಜುಮ್ಕಾ ಧರಿಸಿದ್ದು ಇದು ಉದ್ದನೆ ಇಳಿಬಿಟ್ಟಿದೆ. ಕೈ ಬೆರಳಿಗೆ ದೊಡ್ಡ ಉಂಗುರವನ್ನು ಧರಿಸಿದ್ದು ಯಾವುದೇ ಬಿಂದಿ ಇಟ್ಟಿಲ್ಲ. ಸರವನ್ನೂ ಧರಿಸಿಲ್ಲ.

ಎತ್ತರದ ಜಾಗದಲ್ಲಿ ಕಾಲು ಚಾಚಿ ಕುಳಿತಿರುವ ನಟಿ ಕ್ಯಾಮೆರಾಗೆ ಪೋಸ್ ಕೊಡಲು ಹೆಚ್ಚು ಶ್ರಮವಹಿಸಿಲ್ಲ. ಇದ್ದರರಲ್ಲಿಯೇ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಅವರ ಹಿಂದೆ ಗೋಡೆಯ ಮೂಲೆ ಕಾಣಬಹುದು.

ಸರಳವಾಗಿ ಮೇಕಪ್ ಮಾಡಿಕೊಂಡಿದ್ದು ಬ್ರೈಟ್ ರೆಡ್ ಲಿಪ್‌ಸ್ಟಿಕ್ ಹಚ್ಚಿದ್ದಾರೆ. ಐಮೇಕಪ್ ಕೂಡಾ ಸರಳವಾಗಿದೆ. ಆದರೆ ಸೀರೆ ಮಾತ್ರ ಸಖತ್ ಕ್ಲಾಸಿಯಾಗಿದೆ

ಗ್ರೇ ಬಣ್ಣದ ನೇಲ್ ಪಾಲಿಶ್ ಹಚ್ಚಿದ ನಟಿ ಎತ್ತರದ ಜಾಗದಲ್ಲಿ ಕುಳಿತುಕೊಂಡೇ ಪೋಸ್ ಕೊಟ್ಟಿದ್ದಾರೆ. ಕಾಟನ್ ಸೀರೆಗೆ ಸ್ಲೀವ್ಲೆಸ್ ಬ್ಲೌಸ್ ಸೂಪರ್ ಆಗಿ ಮ್ಯಾಚ್ ಆಗಿದೆ

Latest Videos

click me!