ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡು ಪ್ಲಾಸ್ಟಿಕ್ ನ್ನೇ ಮೈಗೆ ಸುತ್ತಿಕೊಂಡಿದ್ದರು. ಕಸ ತುಂಬುವ ಪ್ಲಾಸ್ಟಿಕ್ ಇವರ ಡ್ರೆಸ್ ಆಗಿತ್ತು. ಅದಾದ ಮೇಲೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ರೀತಿ ಏಕಾಏಕಿ ವೈರಲ್ ಆಗಿತ್ತು.
ಈ ಬಾರಿ ತಮ್ಮ ಡ್ರೆಸ್ ನಿಂದ ಸುದ್ದಿಯಾಗಿದ್ದು ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಊರ್ಫಿಗೆ ಸಂಬಂಧಿಸಿದ ವಿಡಿಯೋ ಒಂದು ಹರಿದಾಡುತ್ತಿದೆ. ಪೋಟೋಗೆ ಪೋಸ್ ಕೊಡುವ ಸಂದರ್ಭ ಅಡ್ಡಬಂದ ಆಸ್ಪತ್ರೆ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದಾರೆ.
ತಾಳ್ಮೆ ಕಳದೆಕೊಂಡ ಊರ್ಫಿ ಬಾಯಿಗೆ ಬಂದ ಶಬ್ದಗಳನ್ನೆಲ್ಲ ಬಳಸಿದ್ದಾರೆ. ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿದೆ. ಒಬ್ಬ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳಬೇಕು ಎಂಬುವರು ಈ ರೀತಿ ವರ್ತನೆ ತೋರಬಾರದು ಎಂದವರು ಇದ್ದಾರೆ.
ಊರ್ಫಿಯ ಬಟ್ಟೆಯ ಡಿಸೈನರ್ ಯಾರು ಎಂದು ತಲೆ ಕೆಡಿಸಿಕೊಂಡಿರುವ ಅಭಿಮಾನಿಗಳು ಪ್ರಶ್ನೆ ಮಾಡಿದ್ದು ಒಂದು ಸ್ವಲ್ಪ ಬಟ್ಟೆ ಸಿಕ್ಕರೂ ಸಾಕು ಇವರಿಗೆ ಎಂದು ಕಮೆಂಟ್ ಮಾಡಿದ್ದಾರೆ.
ಮುಂಬೈನ ಬೀದಿಗಳಲ್ಲಿ ಊರ್ಫಿ ಈ ರೀತಿ ಕಾಣಿಸಿಕೊಳ್ಳುವುದು ಹೊಸದೇನೂ ಅಲ್ಲ. ಸಹಜವಾಗಿಯೇ ಕ್ಯಾಮರಾಗಳು ಅವರ ಅವತಾರ ಸೆರೆ ಹಿಡಿಯಲು ಹಿಂದೆ ಹೋಗುತ್ತವೆ. ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟೀವ್ ಆಗಿದ್ದಾರೆ.
ಈ ಹಿಂದೆ ಸಹ ವಿಡಿಯೋ ಮಾಡುವ ಭರದಲ್ಲಿ ಊರ್ಫಿ ಕಾಣಿಸಬಾರದ್ದನ್ನೆಲ್ಲ ಕಾಣಿಸಿದ್ದರು. ಆ ವಿಚಾರ ಸಹ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟ್ರೋಲ್ ಗೆ ಗುರಿಯಾಗಿತ್ತು.