Shahrukh Khan ಶೂಟಿಂಗ್‌ನಲ್ಲಿ ಬ್ಯುಸಿ, IPL ನಲ್ಲಿ ಮಗ ಆರ್ಯನ್ ಖಾನ್!

Published : Mar 28, 2022, 05:45 PM IST

ಇಂಡಿಯನ್ ಪ್ರೀಮಿಯರ್ ಲೀಗ್ 2022 (Indian Premier League 2022) ಆರಂಭವಾಗಿದೆ. ಶನಿವಾರ ಆರಂಭವಾದ  ಈವೆಂಟ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮೊದಲ ದಿನ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ಪೈಪೋಟಿ ನಡೆಯಿತು ಈ ಪಂದ್ಯದಲ್ಲಿ .KKR 6 ವಿಕೆಟ್‌ಗಳಿಂದ   ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು  ಸೋಲಿಸಿತು. KKR  ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ (Shahrukh Khan) ಅವರ ತಂಡವಾಗಿದೆ.  ಆದರೆ ಅವರ ತಂಡದ ಪಂದ್ಯದ ಸಮಯದಲ್ಲಿ ಅವರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿಲ್ಲ. ವಾಸ್ತವವಾಗಿ, ಈ ದಿನಗಳಲ್ಲಿ ಶಾರುಖ್ ತನ್ನ ಮುಂಬರುವ ಚಿತ್ರ ಪಠಾಣ್ ಅನ್ನು ಸ್ಪೇನ್‌ನಲ್ಲಿ ಚಿತ್ರೀಕರಿಸುತ್ತಿದ್ದಾರೆ ಮತ್ತು ಇದರಿಂದಾಗಿ ಅವರು ತಮ್ಮ ತಂಡವನ್ನು ಪ್ರೋತ್ಸಾಹಿಸಲು ಮೈದಾನದಲ್ಲಿ ಇರಲಿಲ್ಲ, ಆದರೆ ಶಾರುಖ್  ಅವರ ಮಗ ಆರ್ಯನ್ ಖಾನ್ (Aryan Khan) ಅವರ ತಂದೆಯ ಕೆಲಸವನ್ನು  ವಹಿಸಿಕೊಂಡರು.   

PREV
17
Shahrukh Khan ಶೂಟಿಂಗ್‌ನಲ್ಲಿ ಬ್ಯುಸಿ, IPL ನಲ್ಲಿ ಮಗ ಆರ್ಯನ್ ಖಾನ್!

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದೊಂದಿಗೆ ಮ್ಯಾಚ್‌ ಸಮಯದಲ್ಲಿ ಆರ್ಯನ್ ಖಾನ್‌ ಅವರನ್ನು ನೋಡಿ ಅಭಿಮಾನಿಗಳು ತುಂಬಾ  ಸಂತೋಷಪಟ್ಟರು ಮತ್ತು ಎಲ್ಲರೂ ಅವರನ್ನು ಲಕ್ಕಿ ಚಾರ್ಮ್ ಎಂದು ಕರೆಯುತ್ತಾರೆ.
 

27

ಈ ಸಮಯದ  ಆರ್ಯನ್ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅವುಗಳಲ್ಲಿ ಅವರು ನಗುತ್ತಿದ್ದು ಪಂದ್ಯವನ್ನು ಎಂಜಾಯ್‌ ಮಾಡುತ್ತಿದ್ದಾರೆ ಕಂಡು ಬರುತ್ತದೆ.

37

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪಠಾಣ್ ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಸ್ಪೇನ್ ನಲ್ಲಿ ನಡೆಯುತ್ತಿದೆ. ಇಲ್ಲಿ ನಡೆಯುತ್ತಿರುವ ಶೂಟಿಂಗ್ ಸೆಟ್ ಗೆ ಸಂಬಂಧಿಸಿದ ಕೆಲವು ಫೋಟೋಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 

47

ಅದೇ ಸಮಯದಲ್ಲಿ, ಇತ್ತೀಚೆಗೆ ಶಾರುಖ್ ಅವರ ಶರ್ಟ್‌ಲೆಸ್ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಆಬ್ಸ್‌ ಅನ್ನು ತೋರಿಸುತ್ತಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಈ ಚಿತ್ರದಲ್ಲಿ ಶಾರುಖ್ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರದಲ್ಲಿದ್ದಾರೆ. 

57

ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಸುದ್ದಿಗಳ ಪ್ರಕಾರ ಪಠಾಣ್ ಚಿತ್ರ ಎಲ್ಲಿ ಕೊನೆಗೊಳ್ಳುತ್ತದೋ ಅಲ್ಲಿಂದ ಸಲ್ಮಾನ್ ಅಭಿನಯದ ಟೈಗರ್ 3 ಚಿತ್ರ ಶುರುವಾಗಲಿದೆ ಅಂತೆ.

67

ಶಾರುಖ್ ಖಾನ್ ಕೊನೆಯದಾಗಿ 2018 ರ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತು. ಈ ಚಿತ್ರದಲ್ಲಿ ಶಾರುಖ್ ಜೊತೆಗೆ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿದ್ದರು.

77

ಬಹಳ ದಿನಗಳ ನಂತರ ಶಾರುಖ್ ಪಠಾಣ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಜನವರಿ 2023 ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಹೊರತಾಗಿ ಅವರು ಸೌತ್ ನಿರ್ದೇಶಕ ಅಟ್ಲೀ ಅವರ ಲಯನ್ ಚಿತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಸೌತ್ ನಟಿ ನಯನತಾರಾ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

click me!

Recommended Stories