KGF to Kantara: ಬಾಕ್ಸ್‌ ಆಫೀಸ್‌ ಈ ದಾಖಲೆಗಳು ದಕ್ಷಿಣದ ಚಿತ್ರಗಳ ಹೆಸರಲ್ಲಿ

Published : Dec 24, 2022, 07:56 PM IST

ದಕ್ಷಿಣ ಭಾರತದ ಚಿತ್ರಗಳು 2022 ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ಈ ಚಲನಚಿತ್ರಗಳು ಮಾತ್ರವಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ಅನೇಕ ದಾಖಲೆಗಳನ್ನು ಮಾಡಿಕೊಂಡಿವೆ. ಇದು ವಿಶ್ವಾದ್ಯಂತದ ಗಳಿಕೆಯ ವಿಷಯವಾಗಲಿ, ಹೆಚ್ಚು ಲಾಭವನ್ನು ಪಡೆದ ಅಥವಾ ಮೊದಲ ದಿನದಲ್ಲಿ ಹೆಚ್ಚು ಗಳಿಸುವ ವಿಷಯವಾಗಲಿ, ದಕ್ಷಿಣ ಭಾರತದ ಚಲನಚಿತ್ರಗಳು ಈ ವರ್ಷ ಪ್ರಾಬಲ್ಯ ಹೊಂದಿವೆ. ದಕ್ಷಿಣ ಭಾರತೀಯ ಸಿನಿಮಾಗಳು 2022ರಲ್ಲಿ ಮಾಡಿದ ರೆಕಾರ್ಡ್‌ಗಳು ಇವು.  

PREV
18
KGF to  Kantara: ಬಾಕ್ಸ್‌ ಆಫೀಸ್‌ ಈ ದಾಖಲೆಗಳು ದಕ್ಷಿಣದ ಚಿತ್ರಗಳ ಹೆಸರಲ್ಲಿ

ಕನ್ನಡ ಚಿತ್ರ 'ಕೆಜಿಎಫ್ ಅಧ್ಯಾಯ 2' ಮೊದಲ ದಿನ ಅತಿ ಹೆಚ್ಚು ಗಳಿಕೆಯ ದಾಖಲೆಯನ್ನು ನಿರ್ಮಿಸಿತು. ಇದುವರೆಗಿನ ಹಿಂದಿ ಸಿನಿಮಾದ ಎಲ್ಲಾ ರೆಕಾರ್ಡ್‌ಗಳನ್ನು ಮುರಿದಿದೆ. ಯಶ್ ಅಭಿನಯದ ಈ ಚಿತ್ರವು ಮೊದಲ ದಿನ ಹಿಂದಿಯಲ್ಲಿ  53.95 ಕೋಟಿ ರೂ.ಗಳ ಸಂಗ್ರಹವನ್ನು ಮಾಡಿತು ಮತ್ತು ಹೃತಿಕ್ ರೋಶನ್-ಟೈಗರ್ ಶ್ರಾಫ್ ಅಭಿನಯದ 'ವಾರ್' ಹಿಂದಿಯಲ್ಲಿ ಅತಿದೊಡ್ಡ ಓಪನರ್. ಆದರೆ 'ವಾರ್' ಮೊದಲ ದಿನ 53.35 ಕೋಟಿ ರೂ ಮಾತ್ರ ಗಳಿಕೆ ಮಾಡಿತ್ತು

28

ಈ ವರ್ಷ, ಅತಿ ಹೆಚ್ಚು ಗಳಿಸಿದ ಭಾರತೀಯ ಚಲನಚಿತ್ರದ ದಾಖಲೆ ಕೂಡ ದಕ್ಷಿಣದ ಪಾಲಾಗಿದೆ. 'ಕೆಜಿಎಫ್ ಚಾಪ್ಟರ್‌ 2' ವಿಶ್ವಾದ್ಯಂತ ಸುಮಾರು 1278 ಕೋಟಿ ರೂ ಗಳಿಸಿ ಮೊದಲ ಸ್ಥಾನದಲ್ಲಿದೆ .


 

38

ಎರಡನೇ ಅತಿ ಹೆಚ್ಚು ಗಳಿಸಿದ ಚಿತ್ರದ ಚಿತ್ರವೂ ದಕ್ಷಿಣದಿಂದ ಬಂದಿದೆ. ತೆಲುಗು ಭಾಷೆಯಲ್ಲಿ ತಯಾರದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅಭಿನಯದ ಈ ಸಿನಿಮಾ ವಿಶ್ವಾದ್ಯಂತ ಸುಮಾರು 1155 ಕೋಟಿ ರೂ ಕಲೆಕ್ಷನ್‌ ಮಾಡಿದೆ.

48

ಭಾರತದ ಅತ್ಯಂತ ದುಬಾರಿ ಚಿತ್ರ ಕೂಡ ಈ ಬಾರೀ ತಯಾರಾಗಿದ್ದು ದಕ್ಷಿಣದಲ್ಲೇ. ಎಸ್.ಎಸ್. ರಾಜಮೌಲಿ ನಿರ್ದೇಶಿಸಿದ ತೆಲಗು ಸಿನಿಮಾ ಆರ್‌ಆರ್‌ಆರ್‌  ಬಜೆಟ್ ಸುಮಾರು 550 ಕೋಟಿಗಳಷ್ಟಿತ್ತು ಮತ್ತು ಇದುವರೆಗೆ ಬಿಡುಗಡೆಯಾದ ಭಾರತೀಯ ಚಿತ್ರಗಳಲ್ಲಿ ಇದು ಅತ್ಯಂತ ದುಬಾರಿಯಾಗಿದೆ.

58

2022 ಕ್ಕಿಂತ ಮೊದಲು, ಕನ್ನಡ ಸಿನಿಮಾದ ಒಂದು ಚಿತ್ರ ಮಾತ್ರ 100 ಕೋಟಿ ಸಂಗ್ರಹವನ್ನು ಮೀರಿತ್ತು. ಆದರೆ ಈಗ ಈ ಪಟ್ಟಿಯಲ್ಲಿ  5 ಚಿತ್ರಗಳಿವೆ. ಈ ಬಾರಿ ಕನ್ನಡ ಸಿನಿಮಾದ ನಾಲ್ಕು ಚಲನಚಿತ್ರಗಳು  ಇದು ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ.ಗಳ ಸಂಗ್ರಹವನ್ನು ದಾಟಿದೆ. 100 ಕೋಟಿ ಕ್ಲಬ್‌ನಲ್ಲಿ ಸೇರಿಸಿರುವ ಕನ್ನಡ ಸಿನಿಮಾಗಳು 

1. ಕೆಜಿಎಫ್ ಅಧ್ಯಾಯ 1 (2018): 250 ಕೋಟಿ ರೂಪಾಯಿಗಳು 
2. ಕೆಜಿಎಫ್ ಅಧ್ಯಾಯ 2 (2022): 1278 ಕೋಟಿ ರೂಪಾಯಿಗಳು 
3. ಕಾಂತಾರಾ (2022): 404 ಕೋಟಿ ರೂಪಾಯಿಗಳು
4. ವಿಕ್ರಾಂತ್ ರೋನಾ (2022):  126 ಕೋಟಿ ರೂಪಾಯಿಗಳು
5. 777 ಚಾರ್ಲಿ (2022): 108 ಕೋಟಿ ರೂಪಾಯಿಗಳು.

68

ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಲಾಭದಾಯಕ ಭಾರತೀಯ ಚಿತ್ರ  'ಕಾಂತಾರಾ' ಆಗಿದ್ದು, ಸುಮಾರು 16 ಕೋಟಿ ರೂಯಲ್ಲಿ ತಯಾರಾದ ಈ ಸಿನಿಮಾ ವಿಶ್ವಾದ್ಯಂತ 404 ಕೋಟಿಗಿಂತಲೂ ಹೆಚ್ಚು ಸಂಗ್ರಹಿಸಿದೆ. ಇದರ ಪ್ರಕಾರ, ಈ ಚಿತ್ರವು 2425 ಪ್ರತಿಶತದಷ್ಟು ಲಾಭವನ್ನು ಪಡೆದಿದೆ. ಇದು ಕಳೆದ 47 ವರ್ಷಗಳಲ್ಲಿ ಅತಿ ಹೆಚ್ಚು ಲಾಭ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ.

78

ದಕ್ಷಿಣ ಭಾರತದ ಸಿನಿಮಾ 2022 ರಲ್ಲಿ ದಿ ಹಿಂದಿ ವಲಯದಲ್ಲಿ ಅತ್ಯಂತ ಯಶಸ್ವಿ ಚಿತ್ರಗಳಾಗಿವೆ. ಬಾಲಿವುಡ್‌ಗೆ ಹೋಲಿಸಿದರೆ ಒಂದೂವರೆ ಪಟ್ಟು ಹೆಚ್ಚಿ ಸೌತ್‌ ಸಿನಿಮಾಗಳು ಯಶಸ್ಸು ಕಂಡಿವೆ. ಬಾಲಿವುಡ್ ಈ ವರ್ಷಯಶಸ್ವಿಯಾದ ಚಲನಚಿತ್ರಗಳು ಕೇವಲ ಆರು (ಗಂಗುಬಾಯಿ ಕಥಿಯಾವಾಡಿ, ಕಾಶ್ಮೀರ ಫೈಲ್ಸ್, ಭೂಲ್ ಭುಲಿಯಾ 2, ಜಗ್ ಜಗ್ ಜಿಯೋ, ಬ್ರಹ್ಮಶಾಸ್ತ್ರ ಭಾಗ ಒಂದು: ಶಿವ ಮತ್ತು ದೃಷ್ಟಂ 2). ಅದೇ ಸಮಯದಲ್ಲಿ ದಕ್ಷಿಣದ 9 ಹಿಟ್‌ (RRR,ಕೆಜಿಎಫ್ ಅಧ್ಯಾಯ 2, ವಿಕ್ರಮ್, ಮೇಜರ್, 777 ಚಾರ್ಲಿ, ರಾಕೆಟ್ರಿ, ಕಾರ್ತಿಕೇಯಾ 2, ಪೋನಿನ್ ಸೆಲ್ವಾನ್, ಕಾಂತಾರಾ) ಚಿತ್ರಗಳನ್ನು ನೀಡಿವೆ. ಹಿಂದಿ ವಲಯದಲ್ಲಿ  ಇಷ್ಟು  ದಕ್ಷಿಣ ಚಲನಚಿತ್ರಗಳು ಯಶ್ಸಸು ಕಂಡಿದ್ದು  ಇತಿಹಾಸದಲ್ಲಿ ಮೊದಲ ಬಾರಿಗೆ ಬಂದಿವೆ.


 

88

ಇದೇ ಮೊದಲ ಬಾರಿಗೆ ಹಿಂದಿ ಬೆಲ್ಟ್‌ನಲ್ಲಿ ಕನ್ನಡ ಸಿನಿಮಾಗಳು ಇಷ್ಟು ಫೇಮಸ್‌ ಆಗಿದ್ದು ಈ ಬಾರಿ ಅತಿ ಹೆಚ್ಚು 3 ಕನ್ನಡ ಚಲನಚಿತ್ರಗಳು (ಕೆಜಿಎಫ್ ಅಧ್ಯಾಯ 2, 777 ಚಾರ್ಲಿ, ಕಾಂತಾರಾ) ಹಿಂದಿಯಲ್ಲಿ ಯಶಸ್ವಿಯಾಗಿದೆ. ಈ ಮೊದಲು 2018 ರಲ್ಲಿ, ಕನ್ನಡ ಚಿತ್ರ 'ಕೆಜಿಎಫ್' ಬಿಡುಗಡೆಯಾಯಿತು, ಅದು ಯಶಸ್ವಿಯಾಯಿತು.
 

click me!

Recommended Stories