ನಟಿಯರು ನಿಸ್ಸಹಾಯಕರಲ್ಲ, ಗಡಿ ಇರಬೇಕು:
ಕಿರುಕುಳ ಅಥವಾ ಮುಜುಗರದ ಸನ್ನಿವೇಶಗಳಲ್ಲಿ ನಟಿಯರು ನಿಸ್ಸಹಾಯಕರಲ್ಲ ಎಂದು ನಿತ್ಯಾ ಅಭಿಪ್ರಾಯಪಟ್ಟಿದ್ದಾರೆ. 'ನಟಿಯರಿಗೆ ತಮ್ಮದೇ ಆದ ಗಡಿರೇಖೆಗಳು (Boundaries) ಇರಬೇಕು. ತಮ್ಮನ್ನು ಲೈಂಗಿಕವಾಗಿ ಪ್ರದರ್ಶಿಸುವುದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಅದನ್ನು ನೇರವಾಗಿ ನಿರಾಕರಿಸುವ ಧೈರ್ಯ ತೋರಿಸಬೇಕು. ನೀವು ಕಮರ್ಷಿಯಲ್ ಸಿನಿಮಾಗಳನ್ನು ಒಪ್ಪಿಕೊಂಡು, ದಿಢೀರ್ ಆಗಿ ಒಂದು ದಿನ ಇಂತಹ ಸೀನ್‌ಗಳಿಗೆ ಒಪ್ಪಲ್ಲ ಎಂದರೆ ಯಾರೂ ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
ಕೆಲವು ಗ್ಲಾಮರ್ ವಿಚಾರಗಳಿಗೆ ಒಪ್ಪದ ಕಾರಣ ನಾನು ಹಲವು ಸಿನಿಮಾಗಳನ್ನು ಕಳೆದುಕೊಂಡಿದ್ದೇನೆ. ಆದರೆ ನನಗೆ ಸ್ಟಾರ್ ಪಟ್ಟಕ್ಕಿಂತ ನನ್ನ ತತ್ವಗಳೇ ಮುಖ್ಯ. ದೊಡ್ಡ ಸ್ಟಾರ್ ಆಗಲು ಏನನ್ನೂ ಮಾಡಲು ಸಿದ್ಧ ಎನ್ನುವುದಾದರೆ ಅದು ಅವರವರ ವೈಯಕ್ತಿಕ ನಿರ್ಧಾರ,' ಎಂದು ನಿತ್ಯಾ ತೀಕ್ಷ್ಣವಾಗಿ ನುಡಿದಿದ್ದಾರೆ.