ನಟಿ ಸುಹಾಸಿನಿ ಯಾರಿಗೇ ಇಷ್ಷ ಇಲ್ಲ ಹೇಳಿ. ತನ್ನ ಅದ್ಭುತ ಅಭಿನಯದ ಜೊತೆ ಸುಂದರ ನಗುವಿನಿಂದ ಎಲ್ಲರ ಮನ ಗೆದ್ದಿರುವ ಚೆಲುವೆ ಇವರು. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಸುಹಾಸಿನಿ ಅವರ ಸುಂದರ ಫೋಟೋಗಳು ಸಖತ್ ವೈರಲ್ ಆಗಿದ್ದು ಫ್ಯಾನ್ಸ್ ಚೆಂದದ ಕಾಮೆಂಟ್‌ಗಳ ಮೂಲಕ ತಮ್ಮ ನೆಚ್ಚಿನ ತಾರೆಗೆ ಪ್ರೀತಿ ಸುರಿಸಿದ್ದಾರೆ.
ಸಹಜ ಸುಂದರಿ ನಟಿ ಸುಹಾಸಿನಿ ತಮಿಳುನಾಡಿನ ಸೊಸೆಯಾದರೂ ಕನ್ನಡ ಸಿನಿ ಪ್ರೇಕ್ಷಕರಿಗೆ ತುಂಬಾ ಹತ್ತಿರ ಮತ್ತು ಇವರ ಕರ್ನಾಟಕದ ಮೇಲಿನ ಪ್ರೇಮ ಅಗಾಧ.
213
Suhasini
ಬಂಧನ, ಸುಫ್ರಾಭಾತ, ಮುತ್ತಿನಹಾರ, ಅಮೃತವರ್ಷಿಣಿ, ಬೆಂಕಿಯಲ್ಲಿ ಆರಳಿದ ಹೂವು ಮುಂತಾದ ಸಿನಿಮಾಗಳಲ್ಲಿನ ಸುಹಾಸಿನಿ ಅವರ ಅಭಿನಯ ಇಂದಿಗೂ ಕನ್ನಡಿಗರ ಫೇವರೇಟ್.
313
Suhasini
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸುಹಾಸಿನಿ ಅವರು ಕಳೆದ ವಾರ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
413
Suhasini
ಪಿಂಕ್ ಬಣ್ಣದ ಪ್ರಿಂಟ್ ಇರುವ ಸೀರೆಗೆ ಪಿಂಕ್ ಬಣ್ಣದ ಮ್ಯಾಂಚಿಂಗ್ ಬ್ಲೌಸ್ ಧರಿಸಿರುವ ಸುಹಾಸಿನಿ ಅವರು ಅದೇ ಬಣ್ಣದ ಮಣಿ ಸರವನ್ನು ಪೇರ್ ಮಾಡಿಕೊಂಡಿದ್ದಾರೆ.
513
Suhasini
ತಮ್ಮ ಅದೇ ಎಂದಿನ ಸುಂದರ ನಗುವಿನೊಂದಿಗೆ ಪೋಸ್ ನೀಡಿರುವ ಫೋಟೋಗಳಿಗೆ 'Saturday night fever. Saree fever' ಎಂದು ಕ್ಯಾಪ್ಷನ್ ಬರೆದಿದ್ದಾರೆ.
613
Suhasini
63 ವರ್ಷದ ನಟಿಯ ಫೋಟೋಗಳು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಲೈಕ್ ಮತ್ತು ಚೆಂದ ಚೆಂದದ ಕಾಮೆಂಟ್‌ಗಳ ಮೂಲಕ ಪ್ರೀತಿ ಹರಿಸಿದ್ದಾರೆ.
713
Suhasini
ಒಬ್ಬ ಅಭಿಮಾನಿ 'ನಾನು ನಿಮ್ಮ ಕ್ಯಾಮಾರಾ ಮ್ಯಾನ್ ಆಗ್ಲಾ?' ಎಂದರೆ, ಇನ್ನೊಬ್ಬರು 'ನೀವು ಇನ್ನೂ ಬಂಧನದ ನಂದಿನಿಯ ಹಾಗೇ ಇದ್ದೀರಾ' ಎಂದು ಹೇಳಿದ್ದಾರೆ.
813
Suhasini
ಇದರ ಜೊತೆಗೆ ವಾವ್, ಬ್ಯೂಟಿಫುಲ್,ಲವ್ ಯೂ, ಎವರ್ ಗ್ರೀನ್, ಚಾರ್ಮಿಂಗ್ ಎಂಬ ಮೆಚ್ಚುಗೆಯ ಮೂಲಕ ಅಭಿಮಾನಿಗಳು ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ,
913
ಹಲವಾರು ಪ್ರಶಸ್ತಿ ಗಳನ್ನು ಗೆದ್ದಿರುವ ಬಹುಭಾಷಾ ನಟಿ ಸುಹಾಸಿನಿ ಅವರು ಕ್ಯಾಮೆರಾ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
1013
Suhasini
ನಂತರ ವಾನಪ್ರಸ್ಥಂ, ಸ್ವಾತಿ ಬಂಧನ ಮತ್ತು ಸಿಂಧು ಭೈರವಿ ಸೇರಿದಂತೆ ಅನೇಕ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ನಟಿಯಾಗಿ ಕಾಣಿಸಿಕೊಂಡರು.
1113
Suhasini
ಸಿಂಧು ಭೈರವಿ ಚಿತ್ರದಲ್ಲಿನ ಅವರ ಅಭಿನಯವು ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರು 1996 ರಲ್ಲಿ ಇಂದ್ರ ಎಂಬ ತಮಿಳು ಚಲನಚಿತ್ರವನ್ನು ನಿರ್ದೇಶಿಸಿದರು.
1213
Suhasini
ಅವರು ಇತರ ಚಲನಚಿತ್ರಗಳ ಜೊತೆಗೆ ತಿರುಡಾ ತಿರುಡಾ, ಇರುವರ್ ಮತ್ತು ರಾವಣನ್‌ಗೆ ಸಂಭಾಷಣೆಗಳನ್ನು ಬರೆದಿರುವ ಒಬ್ಬ ನಿಪುಣ ಲೇಖಕಿಯೂ ಹೌದು.
1313
ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರ ಸಹೋದರ ಚಾರು ಹಾಸನ್ ಅವರ ಮಗಳು ಸುಹಾಸಿನಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರನ್ನು 1988 ರಂದು ವಿವಾಹವಾದರು ಮತ್ತು ಈ ದಂಪತಿಗೆ ನಂದನ್ ಎಂಬ ಮಗನಿದ್ದಾನೆ.