ಬೆಡ್‌ನಲ್ಲಿ ಮಾದಕ ಭಂಗಿಯಲ್ಲಿ ಮಲಗಿದ ಮುಂಗಾರು ಮಳೆ ಹುಡುಗಿ: ಯಾಕೋ ನಿದ್ರೆ ಬರ್ತಿಲ್ಲ, ನಿಮಗೂ ಹಂಗೇನಾ ಅನ್ನೋದಾ!

First Published | Jul 12, 2024, 6:47 PM IST

ಕರಾವಳಿ ಬ್ಯೂಟಿ ನೇಹಾ ಶೆಟ್ಟಿ ಸದ್ಯ ತೆಲುಗಿನಲ್ಲಿ ಗುರುತಿಸಿಕೊಳ್ತಿದ್ದಾರೆ. ಕನ್ನಡದ ‘ಮುಂಗಾರು ಮಳೆ 2’ ಚಿತ್ರದ ಮೂಲಕ ಪರಿಚಿತರಾದ ನಟಿ ಇದೀಗ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದು, ಸಖತ್ ಟ್ರೆಂಡಿಂಗ್‌ನಲ್ಲಿವೆ.

‘ಮುಂಗಾರು ಮಳೆ 2’ ನಾಯಕಿ ನೇಹಾ ಶೆಟ್ಟಿ ಸದ್ಯ ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ. ಮೊನ್ನೆ ಮೊನ್ನೆ ತಾನೇ ‘ಗ್ಯಾಂಗ್ಸ್‌ ಆಫ್‌ ಗೋದಾವರಿ’ಯ ಬುಜ್ಜಿ ಪಾತ್ರದಲ್ಲಿ ಗಮನಸೆಳೆದಿದ್ದರು.

ನೇಹಾ ಶೆಟ್ಟಿಗೆ ಇದೀಗ ಟಾಲಿವುಡ್‌ನಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಸದಾ ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡುಸುತ್ತಿರುತ್ತಾರೆ. ಇದೀಗ ಅಂತದ್ದೇ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Tap to resize

‘ಯಾಕೋ ನಿದ್ರೆ ಬರ್ತಿಲ್ಲ, ನಿಮಗೂ ಹಂಗೇನಾ?’ ಅನ್ನೋ ಕ್ಯಾಪ್ಶನ್‌ನಲ್ಲಿ ಬೋಲ್ಡ್‌ ಫೋಟೋಸ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಬೆಡ್‌ನಲ್ಲಿ ಮಾದಕ ಭಂಗಿಯಲ್ಲಿ ಮಲಗಿರುವ ಈ ಫೋಟೋ ನೋಡಿ ಬರ್ತಿದ್ದ ನಿದ್ದೆಯೂ ಹಾರಿ ಹೋಯ್ತು ಎಂದು ಪಡ್ಡೆಹೈಕ್ಳು ಕಮೆಂಟ್‌ ಮಾಡುತ್ತಿದ್ದಾರೆ.

ತೆಲುಗಿನ ಮೆಹಬೂಬಾ, ಗಲ್ಲಿ ಬಾಯ್, ಡಿಜೆ ಟಿಲ್ಲು ಚಿತ್ರಗಳ ಮೂಲಕ ಗಮನ ಸೆಳೆದ ನೇಹಾ ಶೆಟ್ಟಿಗೆ ಈಗ ಅವಕಾಶಗಳು ಕಮ್ಮಿಯಾಗಿದೆ. ಕೆರಿಯರ್‌ನಲ್ಲಿ ಬಿಗ್ ಬ್ರೇಕ್ ಸಿಗದೇ ನಟಿ ಕಂಗಾಲಾಗಿದ್ದಾರೆ. 

‘ಡಿಜೆ ಟಿಲ್ಲು’ ಸಿನಿಮಾದಲ್ಲಿ ಸಿದ್ದು ಜೊತೆ ನೇಹಾ ಬೋಲ್ಡ್ ಆಗಿ ನಟಿಸಿದ್ದರು. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಮೋಡಿ ಮಾಡಿದ್ದರು. 

‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಸದ್ಯ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಬುಜ್ಜಿ ಪಾತ್ರದಲ್ಲಿ ನೇಹಾ ಶೆಟ್ಟಿ ಗಮನಸೆಳೆದಿದ್ದರು.

ಇದು ಟ್ರೋಲ್ ಕಾಲ. ನಾವು ನಮ್ಮ ಸುದ್ದಿಯನ್ನ ಹುಡುಕುವಾಗ ನಮ್ಮದೇ ಟ್ರೋಲ್ ನಮ್ಮ ಕಣ್ಣಿಗೆ ಬೀಳಬಹುದು ಆ ಟ್ರೋಲ್ ಅಥವಾ ಸುದ್ದಿ ನಮ್ಮ ಮನಸಿನ ಮೇಲೆ ಗಾಡವಾದ ಪರಿಣಾಮ ಬೀರಬಹುದು ಈ ಕಾರಣಕ್ಕೆ ನಾನು ಟ್ರೋಲ್ ಮತ್ತು ಮೀಮ್‌ಗಳಿಂದ ಅಂತರವನ್ನ ಕಾಪಾಡಿಕೊಳ್ಳುತ್ತೇನೆ ಎಂದು ನೇಹಾ ಶೆಟ್ಟಿ ಹೇಳಿದ್ದರು.

ಅಂದಹಾಗೇ ಕಳೆದ ವರ್ಷ ಇದೇ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ಹಾಡೊಂದರ ಬಿಡುಗಡೆ ಸಮಯದಲ್ಲಿ ಅಲ್ಲಿ ನೆರೆದ ತೆಲುಗು ಮಾಧ್ಯಮದವರ ಮುಂದೆ ಚಿತ್ರದ ನಾಯಕ ವಿಶ್ವಕ್ ಸೇನ್ ಜೊತೆ ಸೀರೆಯ ಸೆರಗು ಬಿಚ್ಚಿ ಕುಣಿದಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Latest Videos

click me!