ನಟಿ ಸೌಂದರ್ಯ ಸಾವಿಗೆ ಮುನ್ನ ಗಳಿಸಿದ್ದ 100 ಕೋಟಿ ರೂ. ಆಸ್ತಿ ಯಾರ ಪಾಲಾಯ್ತು? ವಿಲ್ ಬರೆದಿಟ್ಟಿದ್ರಾ ಸುಂದರಿ!

First Published | Jul 11, 2024, 9:14 PM IST

ಬೆಂಗಳೂರು (ಜು.11): ಬೆಂಗಳೂರಿನ ಕನ್ನಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಸೌಂದರ್ಯ, ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದು, ಬಾಲಿವುಡ್‌ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿರುವಾಗಲೇ ಹೆಲಿಕಾಪ್ಟರ್ ಅಪಘಾತದಲ್ಲಿ ದಿಢೀರನೇ ಸಾವನ್ನಪ್ಪಿದರು. ಆದರೆ, ತಮ್ಮ ಜೀವಿತಾವಧಿಯಲ್ಲಿ ಸಿನಿಮಾ ನಟನೆಯಿಂದ ಗಳಿಸಿದ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿ ಯಾರ ಪಾಲಾಯ್ತು? ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ..

ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಸೌಂದರ್ಯ ಕೂಡ ಒಬ್ಬರು. ನಟಿ ಸೌಂದರ್ಯ ಹೆಸರಿಗೆ ತಕ್ಕಂತೆಯೇ ಅತ್ಯಂತ ಸುಂದರವಾಗಿದ್ದು, ಅಷ್ಟೇ ಉತ್ತಮವಾದ ಅಭಿನಯ ಸಾಮರ್ಥ್ಯವನ್ನೂ ಹೊಂದಿದ್ದರು. ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಎಂದಿಗೂ ತುಂಡುಡುಗೆ ಧರಿಸದೇ ಸ್ಟಾರ್ ಹೀರೋಯಿನ್ ಎಂಬ ಪಟ್ಟಕ್ಕೇರಿಸಿದ ಸುಂದರಿ ಸೌಂದರ್ಯ ಆಗಿದ್ದಾಳೆ.

ಬೆಂಗಳೂರಿನ ಕನ್ನಡ ಕುಟುಂಬದಲ್ಲಿ ಹುಟ್ಟು ಬೆಳೆದ ಸೌಂದರ್ಯ ತಮ್ಮ ಮುದ್ದಾದ ನಗುವಿನಿಂದಲೇ ಅಭಿಮಾನಿಗಳನ್ನು ಸೆಳೆದ ನಟಿಯಾಗಿದ್ದಳು. 1972ರಲ್ಲಿ ಜನಿಸಿದ ಸೌಂದರ್ಯ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಟಾಲಿವುಡ್‌ಗೆ ಸೇರಿದ್ದರು.

Tap to resize

ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದವರು. 1990ರ ದಶಕದಲ್ಲಿ ಸೌಂದರ್ಯ  ದಕ್ಷಿಣ ಭಾರತ ಚಿತ್ರರಂಗದ ಮೇರು ನಟರಾದ ಡಾ.ವಿಷ್ಣುವರ್ಧನ್, ಚಿರಂಜೀವಿ, ರಜನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್, ವೆಂಕಟೇಶ್, ನಾಗಾರ್ಜುನ ಅವರೊಂದಿಗೆ ನಟಿಸಿದ್ದರು. ಸೌಂದರ್ಯ ತಮ್ಮ 20ನೇ ವಯಸ್ಸಿಗೆ ದಕ್ಷಿಣ ಭಾರತದ ಟಾಪ್ ನಟಿಯಾಗಿ ಬೆಳೆದಿದ್ದರು.

ದಕ್ಷಿಣ ಭಾರತದ ಸಿನಿಮಾಗೆ ಮಾತ್ರ ಸೀಮಿತವಾಗದ ಸೌಂದರ್ಯ ಬಾಲಿವುಡ್‌ನ ಮೇರು ನಟ ಅಮಿತಾಬ್ ಬಚ್ಚನ್ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದರು. ಸೂರ್ಯವಂಶದ ಹಿಂದಿ ರಿಮೇಕ್‌ನಲ್ಲಿ ಸೌಂದರ್ಯ ದೇವಯಾನಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅಮಿತಾಭ್ ಬಚ್ಚನ್ ಎದುರು ನಟಿಸಿ ಎಲ್ಲರ ಗಮನ ಸೆಳೆದರು. ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದವು. ಆ ಸಮಯದಲ್ಲಿ ಕನ್ನಡ, ತಮಿಳು, ಮಲಯಾಳಂ ಮುಂತಾದ ದಕ್ಷಿಣ ಭಾರತದ ಭಾಷೆಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದ ಸೌಂದರ್ಯಾಗೆ ಬಾಲಿವುಡ್ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ.

Soundarya

ಸೌಂದರ್ಯ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಸ್ವಲ್ಪ ಕಡಿಮೆ ಆಗುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ ರಾಜಕೀಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವು ಪಕಗಷಗಳು ಅವರನ್ನು ಸ್ಟಾರ್ ಪ್ರಚಾರಕಿಯಾಗಿ ಕರೆಸಿಕೊಂಡು ರಾಜ್ಯಾದ್ಯಂತ ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದ್ದವು. ನಟಿ ಸೌಂದರ್ಯ 2004ರ ಏ.17ರಂದು ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಕಾರ್ಯಕ್ಕೆ ತಮ್ಮ ಸಹೋದರ ಅಮರನಾಥ್ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ತೆರಳುವಾಗ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

ಇನ್ನು ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಸ್ಫೋಟಗೊಂಡು ಸೌಂದರ್ಯ,  ಆಕೆಯ ಸಹೋದರ ಅಮರನಾಥ್ ಹಾಗೂ ಪೈಲಟ್ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸುಟ್ಟು ಬೂದಿಯಾದರು. ಅವರ ಮೃತ ದೇಹಗಳನ್ನು ಗುರುತಿಸಲೂ ಸಾಧ್ಯವಾಗದಂತೆ ಬೂದಿಯಾಗಿದ್ದರಿಂದ, ಅವರ ಬೂದಿಯನ್ನೇ ಮನುಷ್ಯಾಕೃತಿಗೆ ತುಂಡರಿಸಿ ಅಂತ್ಯಕ್ರಿಯೆ ಮಾಡಲಾಯಿತು.

ನಟಿ ಸೌಂದರ್ಯ ಸಾವಿಗೆ ಮುನ್ನ ಕೆಲವು ತಿಂಗಳುಗಳ ಹಿಂದಷ್ಟೇ ಮದುವೆಯಾಗಿದ್ದು, ಗರ್ಭಿಣಿಯೂ ಆಗಿದ್ದರು ಎಂದು ಕೇಳಿಬಂದಿತ್ತು. ಆದರೆ, ಇದಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ.

Soundarya

ಇನ್ನು ಸೌಂದರ್ಯ ಸಾವಿಗೂ ಮುನ್ನವೇ ಸಿನಿಮಾ ಕ್ಷೇತ್ರದಲ್ಲಿ ನಟಿಸಿ ಸುಮಾರು 100 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದರು ಎಂಬ ಮಾಹಿತಿ ಕೇಳಿಬಂದಿದೆ. ಅಷ್ಟೇ ಅಲ್ಲ ಸೌಂದರ್ಯ ಕೂಡ ಒಮ್ಮೆ ತಮ್ಮ ಆಸ್ತಿಗೆ ಸಂಬಂಧಿಸಿದ ವಿಲ್ ಬರೆದಿಟ್ಟಿದ್ದರು. ಆದರೆ, ಸೌಂದರ್ಯ ಪತಿ ಮತ್ತು ಅವರ ತಾಯಿ ಈ ವಿಲ್ ಗೆ ಸಂಬಂಧಿಸಿದ ಮಾಹಿತಿಯನ್ನು ಹೊರ ಬರದಂತೆ ಮರೆಮಾಚಿದ್ದಾರೆ ಎಂದು ವರದಿಯಾಗಿವೆ. ಜೊತೆಗ, ನಟಿ ಸೌಂದರ್ಯಗೆ ಸೇರಿದ ಆಸ್ತಿ ಹಂಚಿಕೆ ವಿಚಾರದಲ್ಲಿ ಆಕೆಯ ತಾಯಿ ಮತ್ತು ಪತಿ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ನಟಿ ಸೌಂದರ್ಯ ಕೇವಲ 31ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದು, ಅವರ 100 ಕೋಟಿ ರೂ. ಆಸ್ತಿ ಯಾರ ಪಾಲಾಯ್ತು ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನು ಆಕೆ ಬರೆದ ವಿಲ್‌ ಅನ್ನು ಬಚ್ಚಿಟ್ಟು ಅವರ ತಾಯಿ ಹಾಗೂ ಪತಿ ಆಸ್ತಿಯನ್ನು ಸಮನಾಗಿ ಹಂಚಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ತಿಳಿದಿಲ್ಲ. ಸೌಂದರ್ಯದ ಆಸ್ತಿಗೆ ಏನಾಯಿತು ಎಂಬುದು ಪ್ರಸ್ತುತ ನಿಗೂಢವಾಗಿ ಉಳಿದಿದೆ.

Latest Videos

click me!