ಹಸಿರು ಸೀರೆಯಲ್ಲಿ ಕ್ಯೂಟ್ ಪೋಸ್ ಕೊಟ್ಟ ಶ್ರೀಲೀಲಾ: ಕರ್ನಾಟಕದ ಸಂಪ್ರದಾಯಸ್ತ ಹೆಣ್ಣು ಎಂದ ಫ್ಯಾನ್ಸ್‌!

First Published | Jan 11, 2024, 3:00 AM IST

ಚಂದನವದ ನಟಿ ಶ್ರೀಲೀಲಾ ಸದ್ಯ ಸೌತ್‌ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಾಲು ಸಾಲು ಸಿನಿಮಾದ ಮೂಲಕ ಕ್ರೇಜ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ.
 

ಸ್ಯಾಂಡಲ್‌ವುಡ್‌ ಬ್ಯೂಟಿ ಶ್ರೀಲೀಲಾ ಫುಲ್ ಸ್ವಿಂಗ್ ನಲ್ಲಿದ್ದಾರೆ. ಸರಣಿ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಿನಿಮಾ ಜೊತೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ.  

ಸದ್ಯ ಶ್ರೀಲೀಲಾ ಹಸಿರು ಸೀರೆಯಲ್ಲಿ ಹಾಟ್‌ ಟ್ರೀಟ್‌ ನೀಡಿದ್ದು, ಅಭಿಮಾನಿಗಳಿಗೆ ಗ್ಲಾಮರ್ ಟ್ರೀಟ್ ನೀಡಿದ್ದಾರೆ. ಹೌದು! ಶ್ರೀಲೀಲಾ ಹಸಿರು ಬಣ್ಣದ ಸೀರೆ ತೊಟ್ಟು ತಮ್ಮ ಸೌಂದರ್ಯದ ಮೂಲಕ ನೆಟ್ಟಿಗರನ್ನು ಹುಚ್ಚೆಬ್ಬಿಸುತ್ತಿದ್ದಾರೆ.

Tap to resize

ಶ್ರೀಲೀಲಾರನ್ನು ಹಸಿರು ಸೀರೆಯಲ್ಲಿ ನೋಡಿದ ನೆಟ್ಟಿಗರು, ವಾವ್ ಸೂಪರ್, ನೈಸ್, ಕಿಸ್ ಬ್ಯೂಟಿ, ಹಾಯ್ ಡಾಕ್ಟರ್, ಬ್ಯೂಟಿಫುಲ್ ಸ್ಮೈಲ್, ಕರ್ನಾಟಕದ ಸಂಪ್ರದಾಯಸ್ತ ಹೆಣ್ಣು ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಬೆಳೆಯುತ್ತಿರುವ ಶ್ರೀಲೀಲಾ ಅವರು ಧಮಾಕಾ ಸಿನಿಮಾ ಮೂಲಕ ಬ್ಲಾಕ್​ಬಸ್ಟರ್ ಹಿಟ್ ಪಡೆದರು. ಇದಾದ ನಂತರವೂ ನಟಿಗೆ ಭರ್ಜರಿ ಸಿನಿಮಾ ಆಫರ್​ಗಳು ಸಿಗುತ್ತಲೇ ಇವೆ.

ಕನ್ನಡ ಸಿನಿಮಾಗಳಲ್ಲಿ ಈಗ ಶ್ರೀಲೀಲಾ ಅಷ್ಟಾಗಿ ನಟಿಸುತ್ತಿಲ್ಲ. ಬದಲಾಗಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಅತ್ಯಧಿಕ ಸಿನಿಮಾ ಆಫರ್ ಪಡೆಯುತ್ತಿದ್ದಾರೆ. ತೆಲುಗಿನಲ್ಲಿ ಬೆಳೆಯುತ್ತಿರುವ ನಟಿಯರಿಗೆ ಟಫ್ ಕಾಂಪಿಟೀಷನ್ ಕೊಡುತ್ತಿದ್ದಾರೆ ಈ ನಟಿ.

ಡ್ಯಾನ್ಸ್ ವಿಚಾರದಲ್ಲಿಯೂ ಸಖತ್ ಫೇಮಸ್ ಆಗಿರುವ ಶ್ರೀಲೀಲಾ ಅವರ ನೃತ್ಯ ಎಲ್ಲರಿಗೂ ಇಷ್ಟ. ಸಿನಿಮಾಗಳಲ್ಲಿ ಶ್ರೀಲೀಲಾ ಅವರ ಡ್ಯಾನ್ಸ್ ನೋಡಿ ಜನರು ಫಿದಾ ಆಗುತ್ತಾರೆ. ಇದು ಕೂಡಾ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಶ್ರೀಲೀಲಾ ಸದ್ಯ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ನಟಿಸಿರುವ 'ಗುಂಟೂರ್ ಖಾರಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಜನವರಿ 12ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ.

Latest Videos

click me!