ಪಿಜ್ಜಾ ಪಾಸ್ತಾದಿಂದ ಹಿಡಿದು ಪಾರ್ಲೆಜಿವರೆಗೆ ಮಸಾಬಾ ಗುಪ್ತಾ ಸೀಮಂತದಲ್ಲಿ ಏನೇನಿತ್ತು ನೋಡಿ?

First Published | Aug 27, 2024, 7:38 PM IST

ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅವರ ಸೋದರಿ ನಿರ್ಮಾಪಕಿ ರಿಯಾ ಕಪೂರ್ ಪುಟ್ಟದಾಗಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸೀಮಂತದಲ್ಲಿ ಗರ್ಭಿಣಿ ಮಸಬಾಗೆ ಎನೆಲ್ಲಾ ತಿನಿಸುಗಳನ್ನು ಬಡಿಸಿದ್ರು ಇಲ್ಲಿದೆ ನೋಡಿ ಸುಂದರ ಫೋಟೋಗಳು.

ಬಾಲಿವುಡ್‌ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ಹಾಗೂ ನಟ ಸತ್ಯದೀಪ್ ಮಿಶ್ರಾ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅವರ ಸೋದರಿ ನಿರ್ಮಾಪಕಿ ರಿಯಾ ಕಪೂರ್ ಪುಟ್ಟದಾಗಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದರು. 

ಪೇಸ್ಟ್ರಿ ಕೇಕ್ ಪಾಕತಜ್ಞೆ ಪೂಜಾ ಧಿಂಗ್ರಾ ಕೂಡ ಡಿಸೈನರ್ ಮಸಾಬಾ ಗುಪ್ತಾ ಅವರ ಆತ್ಮೀಯ ಗೆಳೆತಿಯರಲ್ಲಿ ಒಬ್ಬರಾಗಿದ್ದು, ಅವರು ಕೂಡ ಮಸಾಬಾ ಗುಪ್ತ ಅವರಿಗೆ ಸೀಮಂತ ಆಯೋಜಿಸಿದವರಲ್ಲಿ ಒಬ್ಬರಾಗಿದ್ದರು. ಬಿಸ್ಕೆಟ್ ಹಾಗೂ ಕರ್ಮೆಲ್ ಈ ಸೀಮಂತದ ಥೀಮ್ ಆಗಿತ್ತು. ಹೀಗಾಗಿ ಈ ಪಾರ್ಟಿ ಮೆನು ಎಲ್ಲಾ ರೀತಿಯ ಸಿಹಿ ತಿನಿಸುಗಳನ್ನು ಒಳಗೊಂಡಿತ್ತು.

Tap to resize

ಮೆನು ಜೊತೆ ಈ ಸೀಮಂತದ ಫೋಟೋಗಳನ್ನು ರಿಯಾ ಕಪೂರ್ ಕೂಡ ಹಂಚಿಕೊಂಡಿದ್ದು ಈ ಸ್ನೇಹಿತರ ಗುಂಪು ಈಗಷ್ಟೇ ನಮ್ಮ ಬೇಬಿ ಶವರ್‌ ಯುಗಕ್ಕೆ ಎಂಟ್ರಿ ಕೊಟ್ಟಿದೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಮಸಾಬಾ ಗುಪ್ತಾ & ಸತ್ಯದೀಪ್ ಮಿಶ್ರಾ ಎಂದು ಬರೆದುಕೊಂಡಿದ್ದಾರೆ. 

ಮಸಾಬಾ ಗುಪ್ತಾ ಸೀಮಂತವನ್ನು ಸೋನಮ್, ರಿಯಾ ಹಾಗೂ ಪೂಜಾ ಧಿಂಗ್ರಾ ಜೊತೆಯಾಗಿ ಮಾಡಿದ್ದು, ಸಿಹಿ ತಿನಿಸುಗಳ ಟೇಬಲ್‌ನಲ್ಲಿ ವಿಶೇಷವಾದ ತಿನಿಸು ಪಾರ್ಲೆ ಜಿ ಪುಡಿಂಗ್ ಇತ್ತು ಜೊತೆ ಸಾಕಷ್ಟು ಬಿಸ್ಕೆಟ್‌ಗಳು ಹಾಗೂ ಸಿಹಿ ತಿನಿಸುಗಳಿದ್ದವು. 

ಪಿಜ್ಜಾದಿಂದ ಪಾಸ್ತಾದವರೆಗೆ ಸಾಕಷ್ಟು ಆಯ್ಕೆಗಳ ಮೇಲೋಗರಗಳೊಂದಿಗೆ ಸಹಜವಾಗಿಯೇ ಈ ಬೇಬಿ ಶವರ್ ಅತ್ಯುತ್ತಮವಾದ ಆಹಾರವನ್ನು ಒಳಗೊಂಡಿತ್ತು, .

ಮಸಾಬಾ ಅವರ ಬೇಬಿ ಶವರ್ ಮೆನುವನ್ನು ರಿಯಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಬರ್ಗರ್ ಲೈವ್ ಸ್ಟೇಷನ್ ಇತ್ತು. ಇದು ಮೆನುವಿನಲ್ಲಿ ತಾಜಾ ಫ್ರೆಂಚ್ ಫ್ರೈಸ್ ಮತ್ತು ಸಿಹಿ ಆಲೂಗಡ್ಡೆ ಫ್ರೈಗಳನ್ನು ಒಳಗೊಂಡಿದೆ. 

ಹಾಗೆಯೇ ಸೀಮಂತಕ್ಕಾಗಿ ಗೋಲ್ಡನ್‌ ಬಣ್ಣದ ಬಲೂನ್ ಹಾಗೂ ಬಿಳಿ ಹಾಗೂ ಹಸಿರು ಹೂಗಳಿಂದ ಅಲಂಕರಿಸಲಾಗಿತ್ತು. ಅಲ್ಲದೇ ಅತಿಥಿಗಳಿಗಾಗಿ ಮಗುವಿನ ಹೆಸರು ಸೂಚನಾ ಫಲಕವನ್ನು ಇಡಲಾಗಿತ್ತು. 

ಹಾಗೆಯೇ ಸದ್ಯದಲ್ಲೇ ಅಮ್ಮನಾಗಲಿರುವ ಮಸಬಾ ಈ ಸೀಮಂತಕ್ಕೆ ಕಂದು ಬಣ್ಣದ ಉದ್ದನೆಯ ಗವನ್ ಧರಿಸಿದ್ದರು. ಅಲ್ಲದೇ ಎಲ್ಲಾ ಅತಿಥಿಗಳು ಕೂಡ ಬೀಜ್ ಮತ್ತು ಕ್ರೀಮ್ ಬಣ್ಣದ ಬಟ್ಟೆ ಧರಿಸಿದ್ದರು. 

ಮಸಾಬಾ ಅವರ ಆತ್ಮೀಯ ಗೆಳತಿಯರು, ಅಮ್ಮ ಹಾಗೂ ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ, ನಟಿ ಸೋನಿ ರಜ್ದನ್‌ ಮುತಾದವರು ಉಪಸ್ಥಿತಿರಿದ್ದರು. ಬಾಲಿವುಡ್‌ ನಟ ಅನಿಲ್‌ ಕಪೂರ್ ಅವರ ಮನೆಯಲ್ಲಿ ಈ ಸೀಮಂತವನ್ನು ಆಯೋಜಿಸಲಾಗಿತ್ತು. ಮಸಾಬಾ ಹಾಗೂ ಸತ್ಯದೀಪ್ ಕಳೆದ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದರು. ಕಳೆದ ಎಪ್ರಿಲ್‌ನಲ್ಲಿ ಈ ಜೋಡಿ ಪೋಷಕರಾಗುತ್ತಿರುವ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದರು. 

Latest Videos

click me!