ಕಿಸ್ಸಿಂಗ್ ಸೀನ್ ಅಂದರೆ ನನಗೆ, ನಟಿ ಸೋನಮ್ ಬಾಜ್ವ ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಮುಖವಾಗಿ ಬಾಲಿವುಡ್ ರೊಮ್ಯಾನ್ಸ್ ಸಿನಿಮಾ ಆಫರ್ ಕುರಿತು ಸೋನಮ್ ಮನ ಬಿಚ್ಚಿ ಮಾತನಾಡಿದ್ದಾರೆ.
ಸಿನಿಮಾಗಳಲ್ಲಿ ಕಿಸ್ಸಿಂಗ್, ರೊಮ್ಯಾನ್ಸ್ ಸೀನ್ ಇದೀಗ ಸಾಮಾನ್ಯವಾಗಿದೆ. ಲಿಪ್ ಕಿಸ್ ಸೀನ್ ಇಲ್ಲದೆ ಸಿನಿಮಾ ಮುಗಿಯುವುದಿಲ್ಲ ಅನ್ನೋ ಮಾತಿದೆ. ಕಳೆದ ಒಂದು ದಶಕಗಳಿಂದ ಅತಿರೇಖದ ಕಿಸ್, ರೊಮ್ಯಾನ್ಸ್ ಸೀನ್‌ಗಳು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಬಾಲಿವುಡ್ ಸಿನಿಮಾಗಳಲ್ಲಿ ಇದು ಕಾಮನ್ ಎಂಬಂತಾಗಿದೆ. ಇದೀಗ ಇದೇ ಕಿಸ್ಸಿಂಗ್, ರೊಮ್ಯಾನ್ಸ್ ಕುರಿತು ನಟಿ ಸೋನಮ್ ಬಾಜ್ವ ಮಾತನಾಡಿದ್ದಾರೆ.
26
ಕಿಸ್ಸಿಂಗ್ ಸೀನ್ ಅಂದರೆ ನನಗೆ...
ಫಿಲ್ಮ್ ಕಂಪಾನಿಯನ್ ಜೊತೆಗಿನ ಸಂದರ್ಶನದಲ್ಲಿ ಪಂಜಾಬಿ ನಟಿ ಸೋನಮ್ ಬಾಜ್ವ ಬಾಲಿವುಡ್ ಸಿನಿಮಾ ಆಫರ್ ಕುರಿತು ಮಾತನಾಡಿದ್ದಾರೆ. ಹಲವು ಬಾಲಿವುಡ್ ಸಿನಿಮಾ ಆಫರ್‌ಗಳನ್ನು ನಾನು ತಿರಸ್ಕರಿಸಿದ್ದೆ. ಕಾರಣ ಆ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್‌ಗಳಿತ್ತು. ಈ ಕಿಸ್ಸಿಂಗ್ ಮಾಡಲು ನನಗೆ ಭಯವಾಗುತ್ತೆ ಎಂದಿದ್ದಾರೆ. ಇದೇ ಕಾರಣದಿಂದ ಹಲವು ರೊಮ್ಯಾನ್ಸ್ ಸಿನಿಮಾ ಮಾಡಲೇ ಇಲ್ಲ ಎಂದಿದ್ದಾರೆ.
36
ಕಿಸ್ಸಿಂಗ್ ಸೀನ್ ಹೇಗೆ ಮಾಡಲಿ?
ನಾನು ಪಂಜಾಬಿ ಮೂಲದವಳು. ಕಿಸ್ಸಿಂಗ್ ಸೀನ್ ಮಾಡಿದರೆ ನನ್ನ ತಂದೆ ತಾಯಿ ಆ ಸೀನ್ ಹೇಗೆ ನೋಡುತ್ತಾರೆ. ನನ್ನ ಕುಟುಂಬಸ್ಥರು ಆಪ್ತರು ಸೀನ್ ನೋಡುವಾಗ ಏನಂದುಕೊಳ್ಳುತ್ತಾರೆ ಎಂದೆಲ್ಲಾ ಭಯವಾಗಿತ್ತು. ನನ್ನ ಊರಲ್ಲಿ ಈ ಸೀನ್ ನೋಡಿ ಜನರು ಏನು ಮಾತನಾಡಿಕೊಳ್ಳುತ್ತಾರೆ ಎಂದು ಹಲವು ಬಾರಿ ಯೋಚಿಸಿ, ಬಾಲಿವುಡ್ ಸಿನಿಮಾಗೆ ನೋ ಎಂದಿದ್ದೆ ಎಂದಿದ್ದಾರೆ.
ಕಿಸ್ಸಿಂಗ್ ಸೀನ್ ಮಾಡಲು ನಾನು ಒಪ್ಪಿಕೊಳ್ಳಬೇಕಿತ್ತು. ಇದರೊಂದಿಗೆ ಕೆಲ ಬಾಲಿವುಡ್ ಸಿನಿಮಾ ನಾನು ತಿರಸ್ಕರಿಸಿ ತಪ್ಪು ಮಾಡಿದೆ ಎಂದಿದಾದರೆ. ಕಾರಣ ಕೆಲ ತಿಂಗಳ ಹಿಂದೆ ಪೋಷಕರ ಜೊತೆಗೆ ಈ ಕಿಸ್ಸಿಂಗ್ ಸೀನ್ ಕುರಿತು ಮಾತನಾಡಿದ್ದೆ. ಸಿನಿಮಾದಲ್ಲಿ ಅವಶ್ಯಕತೆ ಇದ್ದರೆ, ಸೀನ್ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ನಾನು ಮೊದಲೇ ಪೋಷಕರ ಬಳಿ ಕೇಳಿ ಕೆಲ ಉತ್ತಮ ಸಿನಿಮಾ ಒಪ್ಪಿಕೊಳ್ಳಬೇಕಿತ್ತು ಎಂದು ಸೋನಮ್ ಹೇಳಿದ್ದಾರೆ.
56
ಪಂಜಾಬಿ ಸಿನಿಮಾದಲ್ಲಿ ಹಾಟ್ ಅವತಾರ
ಸೋನಮ್ ಬಾಜ್ವ ಒಂದು ಕಿಸ್ಸಿಂಗ್ ಸೀನ್‌ಗೆ ಇಷ್ಟೆಲ್ಲಾ ಯೋಚಿಸಿದ್ದಾರೆ ಎಂದಿದ್ದಾರೆ. ಆದರೆ ಪಂಜಾಬಿ ಸಿನಿಮಾಗಳಲ್ಲಿ ಸೋನಮ್ ಭಾರಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸೋನಮ್ ಬಾಜ್ವ ಕಿಸ್ಸಿಂಗ್ ಸೀನ್ ಕುರಿತು ಹೇಳಿಕೆ ಭಾರಿ ಚರ್ಚೆಯಾಗುತ್ತಿದೆ.
66
ಬಾರ್ಡರ್ 2 ಸಿನಿಮಾದಲ್ಲಿ ಸೋನಮ್
ಪಂಜಾಬಿ ಸಿನಿಮಾಗಳಲ್ಲಿ ಸೋನಮ್ ಬಾಜ್ವಾ ಭಾರಿ ಬ್ಯೂಸಿಯಾಗಿದ್ದಾರೆ. ಇದೇ ವೇಳೆ ಬಾಲಿವುಡ್‌ನ ಬಾರ್ಡರ್ 2 ಸಿನಿಮಾದಲ್ಲೂ ಸೋನಮ್ ಬಾಜ್ವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 23ಕ್ಕೆ ಬಾರ್ಡರ್ 2 ಸಿನಿಮಾ ತೆರೆ ಕಂಡಿದೆ. ಕೆಲ ಬಾಲಿವುಡ್ ಸಿನಿಮಾಗಳಲ್ಲಿ ಸೋನಮ್ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.