ಗಾಥಿಕ್‌ ಬಸ್ಟಿಯರ್‌ ಟ್ರೆಂಡಿ ಡ್ರೆಸ್‌ನಲ್ಲಿ ನಟಿ ಸಮಂತಾ: ಬಾಲಿವುಡ್ ಡಿಸೈನರ್‌ಗಳ ಮೇಲೆ ಸಿಟ್ಟಾಗಿದ್ಯಾಕೆ?

First Published | Aug 3, 2024, 5:42 PM IST

ಸಿಟಾಡೆಲ್‌ ಹನಿಬನಿ ವೆಬ್‌ ಸೀರೀಸ್ ಟೀಸರ್‌ ಲಾಂಚ್‌ನಲ್ಲಿ ಸೌತ್ ನಟಿ ಸಮಂತಾ ಕಡುಗಪ್ಪು ಬಣ್ಣದ ಗಾಥಿಕ್‌ ಬಸ್ಟಿಯರ್‌ ಟ್ರೆಂಡಿ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಫೋಟೋಸ್ ಸಖತ್ ವೈರಲ್ ಆಗಿದೆ.
 

‘ಸಿಟಾಡೆಲ್‌ ಹನಿಬನಿ’ ವೆಬ್‌ ಸೀರೀಸ್ ಟೀಸರ್‌ ಲಾಂಚ್‌ನಲ್ಲಿ ಎಲ್ಲರ ಕಣ್ಣು ಸಮಂತಾ ಮೇಲೆ. ಅದಕ್ಕೆ ಕಾರಣ ಈಕೆ ಧರಿಸಿದ್ದ ಡ್ರೆಸ್‌. ಅಲ್ಲಿ ಸಮಂತಾ ಕಡುಗಪ್ಪು ಬಣ್ಣದ ಗಾಥಿಕ್‌ ಬಸ್ಟಿಯರ್‌ ಟ್ರೆಂಡಿ ಉಡುಗೆಯಲ್ಲಿ ಮಿಂಚಿದರು.

ಈ ಡ್ರೆಸ್‌ನ ವಿಶೇಷತೆ ಏನು ಅಂದರೆ ಇದು ಕವಚದ ಹಾಗೆ ಮೈಯನ್ನು ಒತ್ತಿ ನಿಲ್ಲುವ ಉಡುಗೆ. ಆರಂಭದಿಂದಲೂ ವಿದೇಶಗಳಲ್ಲಿ ಹೆಣ್ಮಕ್ಕಳ ಗೌನ್‌ ಈ ಮಾದರಿಯಲ್ಲಿತ್ತು.
 

Tap to resize

ಸಮಂತಾ ಸ್ವೀಟ್‌ ಸ್ಮೈಲ್‌ ನೀಡಿ ಫೋಸ್ ನೀಡಿದ ಮರುಕ್ಷಣವೇ ಬಾಂಬ್‌ ಸಿಡಿಸಿದರು. ಬಾಲಿವುಡ್‌ನ ಸೋ ಕಾಲ್ಡ್‌ ಡಿಸೈನರ್‌ಗಳು ದಕ್ಷಿಣ ಭಾರತೀಯ ನಟಿಯರನ್ನು ಕೇವಲವಾಗಿ ಕಾಣುತ್ತಾರೆ ಎಂಬುದು ಅವರ ಸಿಟ್ಟಿಗೆ ಕಾರಣ.

‘ಯಾರು ನೀವು? ಸೌತ್‌ ಆ್ಯಕ್ಟರಾ?’ ಅಂತ ಹೀನಾಯವಾಗಿ ಕಾಣುವ ಡಿಸೈನರ್‌ಗಳ ಮನಸ್ಥಿತಿ ಬಹಳ ಕೆಟ್ಟದ್ದು ಎಂದು ನಟಿ ಸಮಂತಾ ಅವರು ಜಿಗುಪ್ಸೆ ವ್ಯಕ್ತಪಡಿಸಿದರು.

ಸಿಟಾಡೆಲ್ ವೆಬ್ ಸೀರಿಸ್‌ನ ಟೀಸರ್ ಬಿಡುಗಡೆಯಾಗಿದೆ. ದಿ ಫ್ಯಾಮಿಲಿ ಮ್ಯಾನ್, ಫರ್ಜಿಯಂತಹ ವೆಬ್ ಸೀರಿಸ್‌ಅನ್ನು ನಿರ್ದೇಶಿಸಿದ್ದ ರಾಜ್ ಅಂಡ್ ಡಿಕೆ ಸಿಟಾಡೆಲ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. 

ಇದರ ಜೊತೆನೇ ಸಮಂತಾ ಮತ್ತು ಬಾಲಿವುಡ್ ನಟ ವರುಣ್ ಧವನ್ ಕಾಂಬಿನೇಷನ್ ಕೂಡ ಅಷ್ಟೇ ಕುತೂಹಲವನ್ನು ಹುಟ್ಟುಹಾಕಿದೆ. ಸಮಂತಾ ಈ ವೆಬ್ ಸೀರಿಸ್‌ನಲ್ಲಿ ಮತ್ತೆ ಆಕ್ಷನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಇದೇ ಮೊದಲ ಬಾರಿಗೆ ಬಾಲಿವುಡ್ ನಟ ವರುಣ್ ಧವನ್ ಜೊತೆ ಸಮಂತಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಿಂದ ಈ ವೆಬ್‌ ಸೀರಿಸ್ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಹಾಗೂ ಆಕ್ಷನ್ ಖದರ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಈ ವೆಬ್‌ ಸೀರಿಸ್‌ನಲ್ಲಿ ಸಮಂತಾ, ವರುಣ್ ಧವನ್ ಜೊತೆ ಸಿಕಂದರ್ ಖೇರ್, ಕೆಕೆ ಮೆನನ್ ಹಾಗೂ ಶಕಿಬ್ ಸಲೀಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಟಾಡೆಲ್‌ ಹನಿಬನಿ ವೆಬ್ ಸೀರಿಸ್ ಅನ್ನು ದುಬಾರಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. 

Latest Videos

click me!